‘ಅಮ್ಮ ಮತ್ತು ಚಂದು ಒಡನಾಟ ಏನು ಅಂತ ನಮಗೆ ಗೊತ್ತು’: ಮಗ ಪ್ರಜ್ವಲ್
ಕಿರುತೆರೆ ಕಲಾವಿದೆ ಪ್ರವಿತ್ರಾ ಜಯರಾಮ್ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತರಾದರು. ನಂತರದ ಕೆಲವೇ ದಿನಗಳಲ್ಲಿ ಪವಿತ್ರಾ ಅವರ ಸ್ನೇಹಿತ ಚಂದು ಕೂಡ ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಪವಿತ್ರಾ ಜಯರಾಮ್ ಮತ್ತು ಚಂದು ಮದುವೆಯಾಗಲು ತೀರ್ಮಾನಿಸಿದ್ದರು ಎಂಬ ಗಾಸಿಪ್ ಹಬ್ಬಿದೆ. ಆ ಕುರಿತು ಇದೇ ಮೊದಲ ಬಾರಿಗೆ ಪವಿತ್ರಾ ಅವರ ಮಗ ಪ್ರಜ್ವಲ್ ಮಾತನಾಡಿದ್ದಾರೆ.
‘ತ್ರಿನಯನಿ’ ಧಾರಾವಾಹಿ ನಟಿ ಪ್ರವಿತ್ರಾ ಜಯರಾಮ್ (Pavithra Jayaram) ಅವರು ಇತ್ತೀಚೆಗೆ ಕಾರು ಅಪಘಾತದಲ್ಲಿ ನಿಧನರಾದರು. ಅದಾಗಿ ಕೆಲವೇ ದಿನಗಳ ಕಳೆಯುವುದರೊಳಗೆ ಪವಿತ್ರಾ ಅವರ ಗೆಳೆಯ ಚಂದು ಅಲಿಯಾಸ್ ಚಂದ್ರಕಾತ್ ಆತ್ಮಹತ್ಯೆ (Chandu Suicide) ಮಾಡಿಕೊಂಡು ಕೊನೆಯುಸಿರು ಎಳೆದರು. ಚಂದು ಮತ್ತು ಪವಿತ್ರಾ ಮದುವೆ ಆಗಲು ನಿರ್ಧರಿಸಿದ್ದರು ಎಂಬ ಸುದ್ದಿ ಹರಿದಾಡಿದೆ. ಆ ಬಗ್ಗೆ ಇದೇ ಮೊದಲ ಬಾರಿಗೆ ಪವಿತ್ರಾ ಜಯರಾಮ್ ಅವರ ಪುತ್ರ ಪ್ರಜ್ವಲ್ ಪ್ರತಿಕ್ರಿಯೆ ನೀಡಿದ್ದಾರೆ. ‘ಚಿತ್ರರಂಗ ಹೇಗೆ ಅಂತ ನಿಮಗೂ ಗೊತ್ತು. ನಾನು ಇಂಡಸ್ಟ್ರಿಗೆ ಬಂದರೂ ಕೂಡ ಹಾಗೆಯೇ. ನನ್ನ ಜೊತೆ ಯಾರಾದರೂ ಇದ್ದರೆ ಮೊದಲು ಆ ರೀತಿಯ ಗಾಸಿಪ್ ಹುಟ್ಟಿಕೊಳ್ಳುತ್ತದೆ. ಅಮ್ಮ ಮತ್ತು ಚಂದು ಅವರು ಎಷ್ಟು ಒಳ್ಳೆಯ ಸ್ನೇಹಿತರು ಎಂಬುದು ನಮಗೆ ಮತ್ತು ಇಂಡಸ್ಟ್ರಿಯವರಿಗೆ ಗೊತ್ತು. ಅವರ ಒಡನಾಟ ಹೇಗಿತ್ತು ಅಂತ ನಾವು ನೋಡಿದ್ದೇವೆ. ಮದುವೆ ಆಗುವ ಪ್ಲ್ಯಾನ್ ಇತ್ತು ಎಂಬುದನ್ನೆಲ್ಲ ನಾನು ಸಂದರ್ಶನದಲ್ಲಿ ನೋಡಿದೆ. ಆದರೆ ಅಷ್ಟೊಂದು ಮಾತುಕತೆ ಆಗಿರಲಿಲ್ಲ. ಅಷ್ಟೊಂದು ನಮಗೂ ಗೊತ್ತಿರಲಿಲ್ಲ’ ಎಂದು ಪ್ರಜ್ವಲ್ ಹೇಳಿದ್ದಾರೆ. ಮಂಡ್ಯದಲ್ಲಿ ಪವಿತ್ರಾ ಜಯರಾಮ್ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಆಗ ಚಂದು (Chandu) ಕೂಡ ಬಂದಿದ್ದರು. ಪವಿತ್ರಾ ಅಗಲಿಕೆಯಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.