ಚಂದು, ನಮ್ಮಮ್ಮ ಉತ್ತಮ ಸ್ನೇಹಿತರಾಗಿದ್ದರು, ಸಂಬಂಧದ ಬಗ್ಗೆ ತಪ್ಪಾಗಿ ಮಾತಾಡಬೇಡಿ: ಪವಿತ್ರಾ ಪುತ್ರಿ
ಹೈದರಾಬಾದ್ನಲ್ಲಿ ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆ ಪ್ರಕರಣ ಬಗ್ಗೆ ಮಂಡ್ಯ ತಾಲೂಕಿನ ಉಮ್ಮಡಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ಪವಿತ್ರಾ ಜಯರಾಂ ಪುತ್ರಿ ಪ್ರತೀಕ್ಷಾ, ತಾಯಿ ಪವಿತ್ರಾ ಜಯರಾಮ್ ಹೈದರಾಬಾದ್ಗೆ ತೆರಳಿ 6 ವರ್ಷವಾಗಿತ್ತು. ಅಂದಿನಿಂದಲೂ ಚಂದು, ಪವಿತ್ರಾ ಜಯರಾಂ ಉತ್ತಮ ಸ್ನೇಹಿತರಾಗಿದ್ದರು. ಅಮ್ಮ ಪವಿತ್ರಾ ಜಯರಾಮ್ ಸಂಬಂಧದ ಬಗ್ಗೆ ತಪ್ಪಾಗಿ ಮಾತಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಮಂಡ್ಯ, ಮೇ 18: ನಟ ಚಂದು ಮತ್ತು ನಮ್ಮಮ್ಮ ಪವಿತ್ರಾ ಜಯರಾಂ (Pavitra Jayaram) ಉತ್ತಮ ಸ್ನೇಹಿತರಾಗಿದ್ದರು. ಆದರೆ ಅವರ ಸಂಬಂಧದ ಬಗ್ಗೆ ಈಗ ಏನೇನೋ ಮಾತಾಡುತ್ತಿದ್ದಾರೆ ಎಂದು ಪವಿತ್ರಾ ಪುತ್ರಿ ಪ್ರತೀಕ್ಷಾ ಹೇಳಿದ್ದಾರೆ. ಹೈದರಾಬಾದ್ನಲ್ಲಿ ತೆಲುಗು ಕಿರುತೆರೆ ನಟ ಚಂದು (Chandu) ಆತ್ಮಹತ್ಯೆ ಪ್ರಕರಣ ಬಗ್ಗೆ ಮಂಡ್ಯ ತಾಲೂಕಿನ ಉಮ್ಮಡಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ಆಧಾರ ಸ್ತಂಭವಾಗಿದ್ದ ಅಮ್ಮನನ್ನು ಕಳೆದುಕೊಂಡಿದ್ದೇವೆ. ನಾವು ಇನ್ನೂ ಚಿಕ್ಕವರು, ನಮ್ಮ ಭವಿಷ್ಯದ ಬಗ್ಗೆ ಯೋಚಿಸಿ ಮಾತನಾಡಿ. ಅಮ್ಮ ಪವಿತ್ರಾ ಜಯರಾಮ್ ಸಂಬಂಧದ ಬಗ್ಗೆ ತಪ್ಪಾಗಿ ಮಾತಾಡಬೇಡಿ. ನಮ್ಮನ್ನು ಬದುಕಲು ಬಿಡಿ ಎಂದು ಪ್ರತೀಕ್ಷಾ ಮನವಿ ಮಾಡಿದ್ದಾರೆ.
ತಾಯಿ ಪವಿತ್ರಾ ಜಯರಾಮ್ ಹೈದರಾಬಾದ್ಗೆ ತೆರಳಿ 6 ವರ್ಷವಾಗಿತ್ತು. ಅಂದಿನಿಂದಲೂ ಚಂದು, ಪವಿತ್ರಾ ಜಯರಾಂ ಉತ್ತಮ ಸ್ನೇಹಿತರಾಗಿದ್ದರು. ನಮ್ಮ ತಾಯಿ ಪವಿತ್ರಾ ಜಯರಾಮ್ ಅಂತ್ಯಕ್ರಿಯೆಗೆ ಚಂದು ಬಂದಿದ್ದರು. ಹೈದರಾಬಾದ್ಗೆ ತೆರಳಿದ ನಂತರ ನಮಗೆ ಕರೆ ಮಾಡಿ ಮಾತಾಡುತ್ತಿದ್ದರು. ಆರೋಗ್ಯ ಚೆನ್ನಾಗಿ ನೋಡ್ಕೋ, ಪರೀಕ್ಷೆಗೆ ಸಿದ್ಧವಾಗು ಎಂದು ಹೇಳುತ್ತಿದ್ದರು ಎಂದಿದ್ದಾರೆ.
ಇದನ್ನೂ ಓದಿ: ‘ಪವಿತ್ರಾಗೂ ಆತನಿಗೂ ಸಂಬಂಧ ಇತ್ತು, ಅವಳಿಂದಲೇ ನಮ್ಮ ಕುಟುಂಬ ಹಾಳಾಯ್ತು’; ಚಂದು ಪತ್ನಿಯ ಕಣ್ಣೀರು
ಉಮ್ಮಡಹಳ್ಳಿಯಲ್ಲೂ ಪವಿತ್ರಾ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ನಮ್ಮ ಅಪ್ಪ, ಅಮ್ಮ ಸಂಬಂಧವೂ ಚೆನ್ನಾಗಿತ್ತು. ಕಳೆದ 2 ವರ್ಷಗಳಿಂದ ನಾನು, ಅಣ್ಣ ಅಮ್ಮನ ಜೊತೆಯಲ್ಲೇ ಹೈದರಾಬಾದ್ನಲ್ಲೇ ನೆಲೆಸಿದ್ದೆವು ಎಂದು ಹೇಳಿದ್ದಾರೆ.
ನಟಿ ಪವಿತ್ರ ಜಯರಾಂ ಸಂಬಂಧಿ ಲೋಕೇಶ್ ಟಿವಿ9 ಜೊತೆ ಮಾತನಾಡಿದ್ದು, ಚಂದು ಅವರು ಇತ್ತೀಚೆಗೆ ಪರಿಚಯ. ಎರಡು ಮೂರು ಬಾರಿ ನಮ್ಮ ಮನೆಗೆ ಬಂದಿದ್ದರು. ಪವಿತ್ರ ಅಂತ್ಯಕ್ರಿಯೆ ವೇಳೆ ಬಂದಿದ್ದರು. ಪವಿತ್ರಗಾಗಿ ನನ್ನ ಜೀವವನ್ನೇ ತ್ಯಾಗ ಮಾಡಿದ್ದೇನೆ. ಅವರನ್ನು ಬಿಟ್ಟಿರಲು ಆಗಲ್ಲ ಅಂದಿದ್ದರು.
ಇದನ್ನೂ ಓದಿ: ‘ಪವಿತ್ರಾ ಅಂತ್ಯಕ್ರಿಯೆ ಬಳಿಕ ಅಲ್ಲಿಂದ ಬರೋಕೆ ರೆಡಿ ಇರಲಿಲ್ಲ’; ನಟ ಚಂದು ಆತ್ಮಹತ್ಯೆಗೆ ಅಸಲಿ ಕಾರಣ ಏನು?
ಪವಿತ್ರ ಸಾವಿನಿಂದ ಬದುಕಲು ಇಷ್ಟವಿಲ್ಲ. ಏನೋ ನೋವಿದ್ದರು ಇಲ್ಲಿಗೆ ಬನ್ನಿ. ನನಗೆ ಅವರ ನಂಬರ್ ಕೂಡ ಕೊಟ್ಟಿದ್ದರು. ರಾತ್ರಿ 11.30 ಆತ್ಮಹತ್ಯೆ ವಿಚಾರ ತಿಳಿಯಿತು. ಅಂತ್ಯಕ್ರಿಯೆ ವೇಳೆಯೇ ನೋವು ತೋಡಿಕೊಂಡಿದ್ದರು. ಅವರ ಮಗ್ನದಲ್ಲೇ ಇದ್ದರು. ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.