‘ಪವಿತ್ರಾಗೂ ಆತನಿಗೂ ಸಂಬಂಧ ಇತ್ತು, ಅವಳಿಂದಲೇ ನಮ್ಮ ಕುಟುಂಬ ಹಾಳಾಯ್ತು’; ಚಂದು ಪತ್ನಿಯ ಕಣ್ಣೀರು

‘ನನ್ನ ಗಂಡ ಮನೆಗೆ ಬಂದರೆ ಸಾಕು ಕಿರುಕುಳ ನೀಡುತ್ತಿದ್ದ. ಪವಿತ್ರಾಳ ಫೋಟೋ ಇಟ್ಟುಕೊಂಡು ನಿರಂತರ ನೋಡುತ್ತಿದ್ದ. ಚಂದು ಇಲ್ಲದಿದ್ದರೂ ನಾನು ಧೈರ್ಯ ಕಳೆದುಕೊಳ್ಳದೆ ನನ್ನ ಮಕ್ಕಳನ್ನು ಸಾಕುತ್ತಿದ್ದೇನೆ. ಚಂದುಗೆ ಯಾವುದೇ ಜವಾಬ್ದಾರಿ ಇರಲಿಲ್ಲ’ ಎಂದಿದ್ದಾರೆ ಜಯರಾಮ್ ಪತ್ನಿ.

‘ಪವಿತ್ರಾಗೂ ಆತನಿಗೂ ಸಂಬಂಧ ಇತ್ತು, ಅವಳಿಂದಲೇ ನಮ್ಮ ಕುಟುಂಬ ಹಾಳಾಯ್ತು’; ಚಂದು ಪತ್ನಿಯ ಕಣ್ಣೀರು
ಶಿಲ್ಪಾ ಹಾಗೂ ಪವಿತ್ರಾ-ಚಂದು
Follow us
|

Updated on: May 18, 2024 | 2:19 PM

ಪವಿತ್ರಾ ಜಯರಾಮ್ (Pavitra Jayaram) ಅವರು ಅಪಘಾತದಲ್ಲಿ ನಿಧನ ಹೊಂದಿದರೆ ಅವರ ಆಪ್ತ ಗೆಳೆಯ ಎನಿಸಿಕೊಂಡಿದ್ದ ಚಂದ್ರಕಾಂತ್ ಅವರು ಇದೇ ನೋವಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಪತಿ-ಪತ್ನಿಯರು ಎಂದು ಕೂಡ ಹೇಳಲಾಗಿತ್ತು. ಆದರೆ, ಅಸಲಿ ವಿಚಾರ ಬೇರೆಯೇ ಇದೆ. ಚಂದ್ರಕಾಂತ್​ ಅವರು ಶಿಲ್ಪಾ ಪ್ರೇಮಾ ಅವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಮಕ್ಕಳಿದ್ದರು. ಆದಾಗ್ಯೂ ಪವಿತ್ರಾ ಜೊತೆ ಪ್ರೀತಿಯಲ್ಲಿ ಇದ್ದರು. ಈಗ ಚಂದು ಅವರ ಪತ್ನಿ ಶಿಲ್ಪಾ ಈ ಬಗ್ಗೆ ಮಾತನಾಡಿದ್ದಾರೆ.

‘ಇಬ್ಬರ ಸಂಬಂಧದ ವಿಷಯ ನನಗೆ ಗೊತ್ತಾಯಿತು. ಇದಾದ ಬಳಿಕ ಆತ ನನಗೆ ಹೊಡೆಯುವುದು, ಹಲವು ವಿಧದಲ್ಲಿ ಹಿಂಸೆ ಕೊಡಲು ಆರಂಭಿಸಿದ. ಕುಡಿದು ರಾತ್ರಿ ಹೊತ್ತು ಗಲಾಟೆ ಮಾಡುತ್ತಿದ್ದ. ಒಮ್ಮೆ ಪವಿತ್ರಾ ನನಗೆ ನೇರವಾಗಿ ಕೆರೆ ಮಾಡಿ ಅವನು ನನ್ನ ಗಂಡ, ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಎಂದು ಹೇಳಿದ್ದಳು. ಈ ವಿಚಾರ ಪವಿತ್ರಾ ಮಕ್ಕಳಿಗೂ ಗೊತ್ತಿತ್ತು. ಪವಿತ್ರಾ ಮಗನಿಗೆ ಈ ವಿಚಾರ ತಿಳಿಸಿದ್ದ್ದೆ. ಅವರ ಲೈಫ್ ಅವರದ್ದು ಅವರ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಲ್ಲ ಎಂದು ಪವಿತ್ರಾ ಮಗ ಹೇಳಿದ್ದ’ ಎಂದು ಶಿಲ್ಪಾ ಪ್ರೇಮಾ ಕಣ್ಣೀರು ಹಾಕಿದ್ದಾರೆ.

‘ನನ್ನ ಗಂಡ ಮನೆಗೆ ಬಂದರೆ ಸಾಕು ಕಿರುಕುಳ ನೀಡುತ್ತಿದ್ದ. ಪವಿತ್ರಾಳ ಫೋಟೋ ಇಟ್ಟುಕೊಂಡು ನಿರಂತರ ನೋಡುತ್ತಿದ್ದ. ಚಂದು ಇಲ್ಲದಿದ್ದರೂ ನಾನು ಧೈರ್ಯ ಕಳೆದುಕೊಳ್ಳದೆ ನನ್ನ ಮಕ್ಕಳನ್ನು ಸಾಕುತ್ತಿದ್ದೇನೆ. ಚಂದುಗೆ ಯಾವುದೇ ಜವಾಬ್ದಾರಿ ಇರಲಿಲ್ಲ. ನಾನು ಯಾರ ಜೊತೆ ಮಾತಾಡಿದ್ರೂ ಅವರ ಜೊತೆಗೆ ಸಂಬಂಧ ಕಟ್ಟುತ್ತಿದ್ದ’ ಎಂದು ಬೇಸರ ಹೊರಹಾಕಿದ್ದಾರೆ ಶಿಲ್ಪಾ.

ಇದನ್ನೂ ಓದಿ:  ‘ಪವಿತ್ರಾ ಅಂತ್ಯಕ್ರಿಯೆ ಬಳಿಕ ಅಲ್ಲಿಂದ ಬರೋಕೆ ರೆಡಿ ಇರಲಿಲ್ಲ’; ನಟ ಚಂದು ಆತ್ಮಹತ್ಯೆಗೆ ಅಸಲಿ ಕಾರಣ ಏನು?

ಚಂದು ತಾಯಿ ಕೂಡ ಪವಿತ್ರಾ ಬಗ್ಗೆ ಕಿಡಿಕಾರಿದ್ದಾರೆ. ‘ಪವಿತ್ರಾಳಿಂದಲೇ ಇದೆಲ್ಲಾ ನಡೆದಿದೆ. ನನ್ನ ಮಗನ್ನು ನಮ್ಮ ಮನೆಗೆ ಬರದಂತೆ ಮಾಡಿದ್ದಾಳೆ. ಪವಿತ್ರಾ ಅವನಿಗೆ ಏನು ಮಾಡಿದ್ದಳೋ ಏನೋ ಗೊತ್ತಿಲ್ಲ, ನನ್ನ ಎಲ್ಲಾ ಸರ್ವಸ್ವ ಪವಿತ್ರಾ, ಅವಳೇ ನನ್ನ ಹೆಂಡತಿ ಎನ್ನುತ್ತಿದ್ದ. ಮನೆಗೆ ಕುಡಿದು ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ. ಪವಿತ್ರಾ ಸಹವಾಸ ಬಿಡು ಅಂತಾ ನಾವು ಸಾಕಷ್ಟು ಬಾರಿ ಹೇಳಿದ್ದೆವು. ಆದರೂ ನಮ್ಮ ಯಾರ ಮಾತು ಕೇಳಲಿಲ್ಲ. ಪವಿತ್ರಾಳಿಂದ ನಮ್ಮ ಇಡಿ ಸಂಸಾರ ಹಾಳಾಗಿ ಹೋಯ್ತು’ ಎಂದು ಬೇಸರ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್