ಚಂದು ಕುಟುಂಬದವರು ಪವಿತ್ರಾ ಮೇಲೆ ಹೊರಿಸಿದ ಆರೋಪಗಳಿಗೆ ಮಗನ ಪ್ರತಿಕ್ರಿಯೆ

ಚಂದು ಕುಟುಂಬದವರು ಪವಿತ್ರಾ ಮೇಲೆ ಹೊರಿಸಿದ ಆರೋಪಗಳಿಗೆ ಮಗನ ಪ್ರತಿಕ್ರಿಯೆ

ಪ್ರಶಾಂತ್​ ಬಿ.
| Updated By: ಮದನ್​ ಕುಮಾರ್​

Updated on: May 19, 2024 | 2:41 PM

ಹೈದರಾಬಾದ್​ನಲ್ಲಿ ಚಂದು ಮತ್ತು ಪವಿತ್ರಾ ಜಯರಾಮ್​ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ತೆಲುಗು ಕಿರುತೆರೆಯಲ್ಲಿ ಇಬ್ಬರೂ ಖ್ಯಾತಿ ಪಡೆದಿದ್ದರು. ಈಗ ಒಬ್ಬರೂ ಇಹಲೋಕ ತ್ಯಜಿಸಿದ್ದಾರೆ. ಪವಿತ್ರಾ ಕುಟುಂಬದ ಮೇಲೆ ಚಂದು ಪತ್ನಿ ಶಿಲ್ಪಾ ಕೆಲವು ಆರೋಪ ಮಾಡಿದ್ದಾರೆ. ಅವುಗಳಿಗೆ ಪವಿತ್ರಾ ಜಯರಾಮ್​ ಪುತ್ರ ಪ್ರಜ್ವಲ್​ ಉತ್ತರ ನೀಡಿದ್ದಾರೆ.​

ತೆಲುಗು ನಟ ಚಂದು (Chandu) ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಬೇಸರದ ಸಂಗತಿ. ಚಂದು ಅವರು ತಮ್ಮ ಪತ್ನಿ ಶಿಲ್ಪಾಗಿಂತಲೂ ಹೆಚ್ಚಾಗಿ ಪವಿತ್ರಾ ಜಯರಾಮ್​ ಜೊತೆಗೆ ಆಪ್ತವಾಗಿದ್ದರು ಎಂಬ ಮಾತಿದೆ. ಪವಿತ್ರಾ ಜಯರಾಮ್​ (Pavithra Jayaram) ನಿಧನರಾದ ಕೆಲವೇ ದಿನಗಳ ಬಳಿಕ ಚಂದು ಕೂಡ ಆತ್ಮಹತ್ಯೆಗೆ ಶರಣಾದರು. ಆ ಬಳಿಕ ಚಂದು ಕುಟುಂಬದವರು ಪವಿತ್ರಾ ಜಯರಾಮ್​ ಮೇಲೆ ಕೆಲವು ಆರೋಪಗಳನ್ನು ಹೊರಿದ್ದಾರೆ. ಅದರ ಬಗ್ಗೆ ಪವಿತ್ರಾ ಜಯರಾಮ್ ಪುತ್ರ ಪ್ರಜ್ವಲ್​ (Prajwal) ಪ್ರತಿಕ್ರಿಯೆ ನೀಡಿದ್ದಾರೆ. ‘ಅವರ ಕುಟುಂಬದವರು ಮಾಧ್ಯಮಗಳಲ್ಲಿ ಮಾತನಾಡಿದ್ದನ್ನು ನಾನು ನೋಡಿದ್ದೇನೆ. ಆ ಮಾತುಗಳಲ್ಲಿ ಎಷ್ಟು ನಿಜ, ಎಷ್ಟು ತಪ್ಪು ಎಂಬುದು ನನಗೆ ಚೆನ್ನಾಗಿ ಗೊತ್ತು. ನನ್ನ ಬಳಿ ಸಾಕ್ಷಿ ಇದೆ. ಅದರ ಬಗ್ಗೆ ನಾವು ಕೂಡ ಮಾತನಾಡಲು ಶುರು ಮಾಡಿದರೆ ಇಲ್ಲಿ ಯಾವುದೇ ಕಾರ್ಯಗಳು ಆಗಲ್ಲ. ಈಗ ಅವರ ಕುಟುಂಬದವರು ದುಃಖದಲ್ಲಿ ಇದ್ದಾರೆ. ಹಾಗಾಗಿ ಮಾತನಾಡುತ್ತಾರೆ. ಆದರೆ ನಿಜ ಏನಿದೆಯೋ ಅದನ್ನು ಮಾತನಾಡಲಿ ಅಂತ ನಾನು ಹೇಳ್ತೀನಿ. ಮನಸ್ತಾಪ ಜಾಸ್ತಿ ಆದಷ್ಟೂ ದ್ವೇಷ ಜಾಸ್ತಿ ಆಗತ್ತೆ. ನಮ್ಮ ಭವಿಷ್ಯ ಹಾಗೂ ಅವರ ಭವಿಷ್ಯವನ್ನು ಕಡೆಗಣಿಸಿ ಅದನ್ನೆಲ್ಲ ಮಾಡೋದು ಬೇಡ’ ಎಂದು ಪ್ರಜ್ವಲ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.