ಪುರುಲಿಯಾದಲ್ಲಿ ಪ್ರಧಾನಿ ಮೋದಿ ಕಂಡು ಭಾವಪರವಶರಾದ ಜನರು; ರೋಡ್ಶೋಗೆ ಭರ್ಜರಿ ಸ್ಪಂದನೆ
Narendra Modi Road show at Purulia, West Bengal: ಪ್ರಧಾನಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಅದ್ಧೂರಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರ ರೋಡ್ ಶೋನಲ್ಲಿ ಭಾಗವಹಿಸಲು ಜನರು ಬೀದಿಗಳಲ್ಲಿ ಜಮಾಯಿಸಿದರು. ಎಲ್ಲೆಲ್ಲೂ ಮೋದಿ, ಮೋದಿ ಎಂಬ ಘೋಷಣೆಗಳು ಮೊಳಗಿದವು. ಮೆರವಣಿಗೆ ನಂತರ ಪ್ರಧಾನಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಮತಾ ಬ್ಯಾನರ್ಜಿ ಸಿಎಂ ಆಗಿರುವ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಹೆಚ್ಚುತ್ತಿದೆ.
ಕೋಲ್ಕತಾ, ಮೇ 19: ದೀದಿ ಭದ್ರಕೋಟೆಯಾಗಿರುವ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮಿಂಚುತ್ತಿದ್ದಾರೆ. ಅವರು ಹೋದಲೆಲ್ಲಾ ಭರ್ಜರಿ ಸ್ವಾಗತ ಸಿಗುತ್ತಿದೆ. ಜನರು ಅವರ ರೋಡ್ಶೋಗಳಿಗೆ ಭಾರೀ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನರೇಂದ್ರ ಮೇ 19, ಇಂದು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಗೆ (Purulia) ಆಗಮಿಸಿದ್ದರು. ಅಲ್ಲಿ ಮೊದಲು ಪ್ರಧಾನಿ ಮೋದಿ ಅದ್ಧೂರಿ ರೋಡ್ ಶೋ ನಡೆಸಿದರು. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿಯವರ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಜನರು ಬೀದಿಗಳಲ್ಲಿ ಜಮಾಯಿಸಿದ್ದರು.
ಪ್ರಧಾನಿ ಮೋದಿ ಆಗಮನದಿಂದ ಜನರ ಸಂಭ್ರಮದ ಪ್ರತಿಧ್ವನಿ ಮೊಳಗಿತು. ಈ ಸಂದರ್ಭದಲ್ಲಿ ಎಲ್ಲೆಡೆ ಬಿಜೆಪಿ ಧ್ವಜಗಳು ಕಂಡು ಬಂದವು. ಅಲ್ಲದೆ, ಜನರು ಪ್ರಧಾನಿ ಮೋದಿ ಅವರನ್ನು ಉತ್ಸಾಹದಿಂದ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕಾರಿನಿಂದ ಕೈ ಬೀಸಿ ಜನರಿಗೆ ಶುಭಾಶಯ ಕೋರಿದರು. ಮಕ್ಕಳು, ಹಿರಿಯರು, ಮಹಿಳೆಯರು ಎಲ್ಲರೂ ಪ್ರಧಾನಿ ಮೋದಿಯವರ ರೋಡ್ ಶೋನಲ್ಲಿ ಪಾಲ್ಗೊಳ್ಳಲು ಜಮಾಯಿಸಿದ್ದರು. ಮೋದಿ, ಮೋದಿ ಎಂಬ ಘೋಷಣೆಯೊಂದಿಗೆ ಪುರುಲಿಯಾ ಪ್ರತಿಧ್ವನಿಸಿತು.
ಇದನ್ನೂ ಓದಿ: ರಾಹುಲ್ ಗಾಂಧಿ, ಅಖಿಲೇಶ್ ಇದ್ದ ಸಭೆಯಲ್ಲಿ ಕಾಲ್ತುಳಿತ, ವಾಪಸ್ ಹೋದ ನಾಯಕರು
ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ
ರೋಡ್ ಶೋ ವೇಳೆ ಪ್ರಧಾನಿ ಮೋದಿ ಭದ್ರತೆಗೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿತ್ತು. ಎಲ್ಲೆಡೆ ಪೊಲೀಸ್ ಪಡೆಗಳನ್ನು ನಿಯೋಜಿಸಿರುವುದು ಕಂಡುಬಂದಿತು. ಈ ವೇಳೆ ಜನರ ಕೈಯಲ್ಲಿ ಬಿಜೆಪಿ ಮುಖಂಡರ ಬ್ಯಾನರ್, ಪೋಸ್ಟರ್ ಗಳು ಕಂಡು ಬಂದವು. ರೋಡ್ ಶೋ ಬಳಿಕ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿ ವೇಳಾಪಟ್ಟಿ
ಇಂದು ಅಂದರೆ ಮೇ 19 ರಂದು ಪ್ರಧಾನಿ ಮೋದಿ ಅವರು ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನಂತರ ಪ್ರಧಾನಿ ಬೆಂಗಾವಲು ಪಡೆ ಪಶ್ಚಿಮ ಬಂಗಾಳದ ಪುರುಲಿಯಾವನ್ನು 12.45 ಕ್ಕೆ ತಲುಪಿತು. ಇದಾದ ಬಳಿಕ ಪ್ರಧಾನಿಯವರು ಮಧ್ಯಾಹ್ನ 2.30ಕ್ಕೆ ಪಶ್ಚಿಮ ಬಂಗಾಳದ ವಿಷ್ಣುಪುರ ತಲುಪಿದರು. ಬಳಿಕ 4.15ಕ್ಕೆ ಮೇದಿನಿಪುರದಲ್ಲಿ ಪ್ರಧಾನಿ ಮೋದಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಅದಾನಿ ಬಗ್ಗೆ ಉತ್ತರಿಸಲು ಸಾಧ್ಯವಿಲ್ಲ ಹೀಗಾಗಿಯೇ ಬಹಿರಂಗ ಚರ್ಚೆಗೆ ಬರ್ತಿಲ್ಲ: ರಾಹುಲ್
ಪುರುಲಿಯಾದಲ್ಲಿ ಮತದಾನ ಯಾವಾಗ ನಡೆಯಲಿದೆ?
ಮೇ 24 ರಂದು ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಮತದಾನ ನಡೆಯಲಿದೆ. ಬಿಜೆಪಿಯನ್ನು ಎದುರಿಸಲು ಬಿಜೆಪಿ ಜ್ಯೋತಿರ್ಮಯ್ ಸಿಂಗ್ ಮಹತೋ ಮತ್ತು ಟಿಎಂಸಿ ಶಾಂತಿರಾಮ್ ಮಹತೋಗೆ ಟಿಕೆಟ್ ನೀಡಿದೆ. ಮೇ 20 ರಂದು ಪಶ್ಚಿಮ ಬಂಗಾಳದ ಬಂಗಾವ್, ಬ್ಯಾರಕ್‌ಪೋರ್, ಹೌರಾ, ಉಲುಬೇರಿಯಾ, ಶ್ರೀರಾಮಪುರ, ಹೂಗ್ಲಿ, ಆರಂಬಾಗ್‌ನಲ್ಲಿ ಮತದಾನ ನಡೆಯಲಿದೆ. ಅದರ ನಂತರ, ಮೇ 25 ರಂದು, ಆಗ್ನೇಯ ಬಂಗಾಳದ ಐದು ಜಿಲ್ಲೆಗಳ ತಮ್ಲುಕ್, ಕಂಠಿ, ಘಟಾಲ್, ಜಾರ್ಗ್ರಾಮ್, ಮೇದಿನಿಪುರ್, ಪುರುಲಿಯಾ, ಬಂಕುರಾ ಮತ್ತು ಬಿಷ್ಣುಪುರ್ ಈ 8 ಪ್ರಮುಖ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ