ಬಿಗ್ ಬಜೆಟ್ ಸಿನಿಮಾಗಳಿಗೆ ಸಹಿ ಹಾಕಿ ಆ ಬಳಿಕ ಹೊರ ನಡೆದ ಸೆಲೆಬ್ರಿಟಿಗಳು
ಅಕ್ಷಯ್ ಕುಮಾರ್ ಸೇರಿ ಬಾಲಿವುಡ್ನ ಹಲವು ದಿಗ್ಗಜರು ‘ವೆಲ್ಕಮ್ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಅಂದುಕೊಂಡ ರೀತಿಯಲ್ಲಿ ನಡೆಯುತ್ತಿಲ್ಲ ಎನ್ನುವ ಆರೋಪವನ್ನು ಸಂಜಯ್ ದತ್ ಮಾಡಿದ್ದಾರೆ. ಜೊತೆಗೆ ಪದೇ ಪದೇ ಸ್ಕ್ರಿಪ್ಟ್ ಬದಲಾವಣೆ ಮಾಡುತ್ತಿರುವುದು ಅವರ ಕೋಪಕ್ಕೆ ಕಾರಣ ಆಗಿದೆ.
ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಅವರು ‘ವೆಲ್ಕಮ್ 3’ ಚಿತ್ರದಿಂದ ಹೊರ ನಡೆದಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಈಗಾಗಲೇ ಸಂಜಯ್ ದತ್ ಅವರು 15 ದಿನಗಳ ಕಾಲ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು. ಆದರೆ, ಈಗ ಅವರು ಸಿನಿಮಾದಿಂದ ಹೊರ ಹೋಗುವ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ತಂಡಕ್ಕೆ ವಿವರಿಸಿದ್ದಾರೆ. ಈ ರೀತಿ ದೊಡ್ಡ ಸಿನಿಮಾ ಒಪ್ಪಿಕೊಂಡು ಹೊರ ನಡೆದ ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಸಂಜಯ್ ದತ್
ಅಕ್ಷಯ್ ಕುಮಾರ್ ಸೇರಿ ಬಾಲಿವುಡ್ನ ಹಲವು ದಿಗ್ಗಜರು ‘ವೆಲ್ಕಮ್ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಅಂದುಕೊಂಡ ರೀತಿಯಲ್ಲಿ ನಡೆಯುತ್ತಿಲ್ಲ ಎನ್ನುವ ಆರೋಪವನ್ನು ಸಂಜಯ್ ದತ್ ಮಾಡಿದ್ದಾರೆ. ಜೊತೆಗೆ ಪದೇ ಪದೇ ಸ್ಕ್ರಿಪ್ಟ್ ಬದಲಾವಣೆ ಮಾಡುತ್ತಿರುವುದು ಅವರ ಕೋಪಕ್ಕೆ ಕಾರಣ ಆಗಿದೆ. ಈ ಸಿನಿಮಾದಿಂದ ಉಳಿದ ಸಿನಿಮಾಗಳ ಶೂಟಿಂಗ್ಗೆ ತೊಂದರೆ ಆಗುತ್ತಿದೆ. ಹೀಗಾಗಿ, ಅವರು ಸಿನಿಮಾದಿಂದ ಹೊರ ನಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ರಣವೀರ್ ಸಿಂಗ್
ರಣವೀರ್ ಸಿಂಗ್ ಅವರು ಹಲವು ಬಿಗ್ ಹಿಟ್ಗಳನ್ನು ನೀಡಿದ್ದಾರೆ. ಅವರು ಹನುಮಾನ್ ನಿರ್ದೇಶಕ ಪ್ರಶಾಂತ್ ವರ್ಮ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ, ಸ್ಕ್ರಿಪ್ಟ್ ವಿಚಾರದಲ್ಲಿ ಭಿನಾಭಿಪ್ರಾಯ ಬಂದ ಕಾರಣ ಅವರು ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ.
ಶಾಹಿದ್ ಕಪೂರ್
ನಿರ್ದೇಶಕ ಅನೀಸ್ ಬಜ್ಮೀ ಹಾಗೂ ನಟ ಶಾಹಿದ್ ಕಪೂರ್ ಒಟ್ಟಾಗಿ ಸಿನಿಮಾ ಮಾಡಬೇಕಿತ್ತು. ಆದರೆ ಇವರ ಮಧ್ಯೆ ಕಿತ್ತಾಟ ನಡೆದಿದ್ದರಿಂದ ಸಿನಿಮಾ ಸೆಟ್ಟೇರಲಿಲ್ಲ.
ಕಾರ್ತಿಕ್ ಆರ್ಯನ್
ಕಾರ್ತಿಕ್ ಆರ್ಯನ್ ಅವರನ್ನು ಬಾಲಿವುಡ್ನಲ್ಲಿ ಹೊರಗಿನವರು ಎಂದೇ ಕೆಲವರು ನೋಡುತ್ತಾರೆ. ಯಾವುದೇ ಹಿನ್ನೆಲೆ ಇಲ್ಲದೆ ಬಂದು ಅವರು ದೊಡ್ಡ ಗೆಲುವು ಕಂಡರು. ಕಾರ್ತಿಕ್ ಅವರು ಕರಣ್ ಜೋಹರ್ ನಿರ್ಮಾಣದ ‘ದೋಸ್ತಾನ 2’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಭಿನ್ನಾಭಿಪ್ರಾಯ ಕಾರಣದಿಂದ ಅವರು ಹೊರ ನಡೆದರು. ಇಬ್ಬರ ಮಧ್ಯೆ ದೊಡ್ಡ ಮಟ್ಟದಲ್ಲಿ ಕಿತ್ತಾಡ ನಡೆದಿದೆ ಎನ್ನಲಾಗಿದೆ.
ಅನಿಲ್ ಕಪೂರ್
ಅನಿಲ್ ಕಪೂರ್ ಅವರು ‘ಹೌಸ್ಫುಲ್’ ಸಿನಿಮಾ ತೊರೆದರು. ಇದಕ್ಕೆ ಕಾರಣವಾಗಿದ್ದು ಅವರ ಸಂಭಾವನೆ. ತಾವು ಬೇಡಿಕೆ ಇಟ್ಟಷ್ಟು ಹಣವನ್ನು ನೀಡಲು ತಂಡ ರೆಡಿ ಇರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಅವರು ಚಿತ್ರದಿಂದ ಹೊರ ಹೋದರು.
ಇದನ್ನೂ ಓದಿ: ಅಣ್ಣ ಬೋನಿ ಜೊತೆ ಮಾತು ಬಿಟ್ಟ ಅನಿಲ್ ಕಪೂರ್; ಸಿನಿಮಾ ವಿಚಾರದಲ್ಲಿ ಕಿರಿಕ್
ಕರೀನಾ ಕಪೂರ್
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸಾಕಷ್ಟು ಚರ್ಚೆಯಲ್ಲಿದೆ. ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಬಗ್ಗೆ ಆಗುತ್ತಿರುವ ಚರ್ಚೆ ತುಂಬಾನೇ ದೊಡ್ಡದು. ಈ ಸಿನಿಮಾಗೆ ಕರೀನಾ ನಾಯಕಿ ಆಗಲಿದ್ದಾರೆ ಎನ್ನಲಾಗಿತ್ತು. ಯಶ್ ತಂಗಿ ಪಾತ್ರ ಮಾಡಲಿದ್ದಾರೆ ಎಂದು ಕೂಡ ಹೇಳಲಾಯಿತು. ಆ ಬಳಿಕ ಡೇಟ್ ಹೊಂದಿಸಲಾಗದ ಕಾರಣ ಸಿನಿಮಾದಿಂದ ಹೊರ ನಡೆದರು.
ಆಲಿಯಾ ಭಟ್
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದಲ್ಲಿ ಆಲಿಯಾ ಭಟ್ ನಟಿಸಬೇಕಿತ್ತು. ಆದರೆ, ಬೇರೆ ಪ್ರೊಫೆಷನಲ್ ಕಮಿಟ್ಮೆಂಟ್ನಿಂದ ಅವರು ಈ ಸಿನಿಮಾದಲ್ಲಿ ನಟಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.