AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣ ಬೋನಿ ಜೊತೆ ಮಾತು ಬಿಟ್ಟ ಅನಿಲ್ ಕಪೂರ್; ಸಿನಿಮಾ ವಿಚಾರದಲ್ಲಿ ಕಿರಿಕ್

‘ನೋ ಎಂಟ್ರಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್, ಫರ್ದೀನ್ ಖಾನ್, ಇಶಾ ಡಿಯೋಲ್, ಲಾರಾ ದತ್ತ, ಬಿಪಾಶಾ ಬಸು ಮೊದಲಾದವರು ನಟಿಸಿದ್ದರು. ಎರಡನೇ ಪಾರ್ಟ್​ನಲ್ಲಿ ಅನಿಲ್ ಕಪೂರ್ ನಟಿಸಬೇಕಿತ್ತು. ಆದರೆ, ಇದಕ್ಕೆ ನಿರ್ಮಾಪಕ ಬೋನಿ ಕಪೂರ್ ಅವಕಾಶ ನೀಡಲಿಲ್ಲ.  

ಅಣ್ಣ ಬೋನಿ ಜೊತೆ ಮಾತು ಬಿಟ್ಟ ಅನಿಲ್ ಕಪೂರ್; ಸಿನಿಮಾ ವಿಚಾರದಲ್ಲಿ ಕಿರಿಕ್
ಅನಿಲ್-ಬೋನಿ
ರಾಜೇಶ್ ದುಗ್ಗುಮನೆ
|

Updated on: Mar 30, 2024 | 7:04 AM

Share

ಬೋನಿ ಕಪೂರ್ ಹಾಗೂ ಅನಿಲ್ ಕಪೂರ್ (Anil Kapoor) ಸಹೋದರರು. ಇಬ್ಬರೂ ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬೋನಿ ನಿರ್ಮಾಪಕನಾಗಿ ಗುರುತಿಸಿಕೊಂಡರೆ, ಅನಿಲ್ ಕಪೂರ್ ಅವರು ಹೀರೋ ಆಗಿ ಹೆಸರು ಮಾಡಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಇಬ್ಬರ ಮಧ್ಯೆ ಈಗ ಮೊದಲಿನ ಬಾಂಧವ್ಯ ಉಳಿದಿಲ್ಲ. ಇಬ್ಬರೂ ಅಷ್ಟಾಗಿ ಮಾತನಾಡಿಕೊಳ್ಳುವುದಿಲ್ಲ. ಈ ವಿಚಾರವನ್ನು ಸ್ವತಃ ಬೋನಿ ಕಪೂರ್ ಅವರೇ ರಿವೀಲ್ ಮಾಡಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ಅವರು ವಿವರಿಸಿದ್ದಾರೆ.

‘ನೋ ಎಂಟ್ರಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್, ಫರ್ದೀನ್ ಖಾನ್, ಇಶಾ ಡಿಯೋಲ್, ಲಾರಾ ದತ್ತ, ಬಿಪಾಶಾ ಬಸು ಮೊದಲಾದವರು ನಟಿಸಿದ್ದರು. ಎರಡನೇ ಪಾರ್ಟ್​ನಲ್ಲಿ ಅನಿಲ್ ಕಪೂರ್ ನಟಿಸಬೇಕಿತ್ತು. ಆದರೆ, ಇದಕ್ಕೆ ನಿರ್ಮಾಪಕ ಬೋನಿ ಕಪೂರ್ ಅವಕಾಶ ನೀಡಲಿಲ್ಲ.

ವರುಣ್ ಧವನ್, ದಿಲ್ಜಿತ್, ಅರ್ಜುನ್ ಕಪೂರ್ ‘ನೋ ಎಂಟ್ರಿ 2’ ಸಿನಿಮಾದ ಭಾಗವಾಗಿದ್ದಾರೆ. ಈ ಬಗ್ಗೆ ಸುದ್ದಿ ಲೀಕ್ ಆಗಿತ್ತು. ‘ನಾನು ನೋ ಎಂಟ್ರಿ ಸೀಕ್ವೆಲ್ ಬಗ್ಗೆ ಅನಿಲ್ ಬಳಿ ಮಾತನಾಡುವ ಮೊದಲೇ ಸಿನಿಮಾದ ಪಾತ್ರವರ್ಗದ ವಿಚಾರ ಲೀಕ್ ಆಗಿತ್ತು. ಅದು ನನ್ನ ದುರಾದೃಷ್ಟ. ಅವರಿಗೆ ಈ ಸಿನಿಮಾದ ಭಾಗ ಆಗಬೇಕು ಎನ್ನುವ ಆಸೆ ಇತ್ತು. ಆದರೆ, ಅದಕ್ಕೆ ಜಾಗವೇ ಇರಲಿಲ್ಲ. ನಾನು ಅದನ್ನು ವಿವರಿಸಬೇಕು ಎಂದುಕೊಂಡಿದ್ದೆ’ ಎಂದಿದ್ದಾರೆ ಬೋನಿ ಕಪೂರ್.

‘ವರುಣ್ ಧವನ್ ಹಾಗೂ ಅರ್ಜುನ್ ಕಪೂರ್ ಉತ್ತಮ ಗೆಳೆಯರು. ಅವರ ಕೆಮಿಸ್ಟ್ರಿ ಸಿನಿಮಾಗೆ ಸಹಾಯ ಆಗುತ್ತಿತ್ತು. ದಿಲ್ಜಿತ್​​ಗೂ ದೊಡ್ಡ ಅಭಿಮಾನಿ ಬಳಗ ಇದೆ. ಇದನ್ನು ಗಮನದಲ್ಲಿಟ್ಟಕೊಂಡು ಪಾತ್ರವರ್ಗ ಆಯ್ಕೆ ಮಾಡಿದ್ದೆ. ಈ ಕಾರಣಕ್ಕೆ ಅನಿಲ್ ಕಪೂರ್ ಈಗಲೂ ನನ್ನ ಬಳಿ ಸರಿಯಾಗಿ ಮಾತನಾಡುತ್ತಿಲ್ಲ. ಇದು ಕೊನೆಯಾಗಬಹುದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅನಿಲ್ ಕಪೂರ್ ಕುಟುಂಬ ಎಷ್ಟು ದೊಡ್ಡದು ಗೊತ್ತಾ? ಇಲ್ಲಿದೆ ಫ್ಯಾಮಿಲಿ ಟ್ರೀ

‘ನೋ ಎಂಟ್ರಿ 2’ ಸಿನಿಮಾ ಡಿಸೆಂಬರ್ 2024ರ ವೇಳೆಗೆ ಸೆಟ್ಟೇರಬಹುದು. ಈ ಚಿತ್ರ 2025ರಲ್ಲಿ ಥಿಯೇಟರ್​ನಲ್ಲಿ ರಿಲೀಸ್ ಆಗಲಿದೆ. ಮೊದಲ ಸಿನಿಮಾ ರಿಲೀಸ್ ಆಗಿ 20 ವರ್ಷಗಳ ಬಳಿಕ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್