ನಕ್ಕು ನಗಿಸಲಿದೆ ‘ಕ್ರೂ’ ಸಿನಿಮಾ; ಫಸ್ಟ್ ಶೋ ನೋಡಿ ಟ್ವಿಟರ್ ವಿಮರ್ಶೆ ತಿಳಿಸಿದ ನೆಟ್ಟಿಗರು
‘ಕ್ರೂ ಸಿನಿಮಾದಲ್ಲಿ ಸೂಪರ್ ಫನ್ ಇದೆ. ಬಹಳ ಎಂಜಾಯ್ ಮಾಡಬಹುದಾದ ಚಿತ್ರವಿದು. ಕೃತಿ ಸನೋನ್, ಟಬು, ಕರೀನಾ ಕಪೂರ್ ಖಾನ್ ಇರುವುದರಿಂದ ನಿರೀಕ್ಷೆ ಹೆಚ್ಚು ಇರುತ್ತದೆ. ಅದಕ್ಕೆ ತಕ್ಕಂತೆಯೇ ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದು ನೆಟ್ಟಿಗರು ವಿಮರ್ಶೆ ಹಂಚಿಕೊಂಡಿದ್ದಾರೆ. ಭರಪೂರ ಕಾಮಿಡಿ ನಿರೀಕ್ಷಿಸುವ ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಡುತ್ತಿದ್ದಾರೆ.
ಟ್ರೇಲರ್ ಮೂಲಕ ‘ಕ್ರೂ’ ಸಿನಿಮಾ (Crew Movie) ಸಖತ್ ನಿರೀಕ್ಷೆ ಮೂಡಿಸಿತ್ತು. ಈ ಸಿನಿಮಾದಲ್ಲಿ ಗಗನ ಸಖಿಯರ ಕಥೆ ಇದೆ. ಕರೀನಾ ಕಪೂರ್ ಖಾನ್, ಟಬು, ಕೃತಿ ಸನೋನ್ (Kriti Sanon) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ವಿಮಾನದಲ್ಲಿ ಬಂಗಾರ ಕಳ್ಳತನ ಆಗುವ ಕಹಾನಿಯನ್ನು ಹಾಸ್ಯಮಯವಾಗಿ ವಿವರಿಸುವ ಈ ಸಿನಿಮಾ ಇಂದು (ಮಾರ್ಚ್ 29) ಬಿಡುಗಡೆ ಆಗಿವೆ. ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರು ‘ಕ್ರೂ’ ಚಿತ್ರದ ಬಗ್ಗೆ ತಮ್ಮ ವಿಮರ್ಶೆ (Crew Twitter Review) ಹಂಚಿಕೊಂಡಿದ್ದಾರೆ. ಟ್ವಿಟರ್ ಮೂಲಕ ನೆಟ್ಟಿಗರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಕ್ರೂ’ ಸಿನಿಮಾಗೆ ರಾಜೇಶ್ ಕೃಷ್ಣನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಲೂಟ್ಕೇಸ್’ ಸಿನಿಮಾ ಮಾಡಿದ್ದ ಅವರು ಈಗ ‘ಕ್ರೂ’ ಚಿತ್ರವನ್ನು ಜನರ ಮುಂದೆ ತಂದಿದ್ದಾರೆ. ಟಬು, ಕೃತಿ ಸನೋನ್, ಕರೀನಾ ಕಪೂರ್ ಖಾನ್ ಜೊತೆಗೆ ದಿಲ್ಜಿತ್ ದೋಸಾಂಜ್, ಕಪಿಲ್ ಶರ್ಮಾ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎಲ್ಲರ ಕಾಂಬಿನೇಷನ್ನಲ್ಲಿ ಕಾಮಿಡಿ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
#CrewReview : ★★★½#Crew: 𝗙𝗿𝗶𝘃𝗼𝗹𝗼𝘂𝘀𝗹𝘆 𝗙𝘂𝗻𝗻𝘆 𝗪𝗮𝗰𝗸𝘆 𝗛𝗲𝗶𝘀𝘁..!#CrewMovie is an incredible ride, original idea, entertaining plot, hilarious one-liners, amazing soundtrack.
The trio of #Tabu, #KareenaKapoorKhan, and #KritiSanon shine in this madcap… pic.twitter.com/jBJqlteY4u
— 𝗥𝗮𝗷𝗮𝘁 𝗥 𝗟𝘂𝗻𝗸𝗮𝗱 (@rajatlunkad) March 29, 2024
#Crew: UNDERWHELMING. Rating: ⭐️⭐️ [2/5 Stars]#Crew is an EPIC DISAPPOINTMENT. Makers have everything But Sadly, the flawed writing – especially the second hour – takes the film downhill. #KareenaKapoorKhan, #KritiSanon, #Tabu are Good But Overall it’s TERRIBLE. #CrewReview… pic.twitter.com/O5rNDxaFbD
— Bollywood Box Office (@Bolly_BoxOffice) March 29, 2024
‘ಈ ಸಿನಿಮಾ ಸೂಪರ್ ಫನ್ ಆಗಿದೆ. ತುಂಬ ಎಂಜಾಯ್ ಮಾಡಬಹುದಾದ ಸಿನಿಮಾ ಇದು. ಟಬು, ಕೃತಿ ಸನೋನ್, ಕರೀನಾ ಕಪೂರ್ ಖಾನ್ ಇರುವುದರಿಂದ ನಿರೀಕ್ಷೆ ಜಾಸ್ತಿ ಇರುತ್ತದೆ. ಅದಕ್ಕೆ ತಕ್ಕಂತೆಯೇ ಈ ಸಿನಿಮಾ ಚೆನ್ನಾಗಿದೆ’ ಎಂದು ಪ್ರೇಕ್ಷಕರೊಬ್ಬರು ವಿಮರ್ಶೆ ಹಂಚಿಕೊಂಡಿದ್ದಾರೆ. ಭರಪೂರ ಕಾಮಿಡಿ ಬಯಸುವ ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ.
#CrewReview – 4*/5 – ⭐️⭐️⭐️⭐️#Crew is one crazy but highly entertaining ride, terrific film… Absolutely Hilarious and the three beautiful ladies spice up things really well…. #KareenaKapoorKhan #Tabu and #KritiSanon shine in the lead roles in this comic caper crafted around… pic.twitter.com/tcw35xGNjT
— Rohit Jaiswal (@rohitjswl01) March 29, 2024
#CrewReview ⭐️⭐️⭐️⭐️
𝐒𝐔𝐑𝐄 𝐒𝐇𝐎𝐓 𝐒𝐔𝐏𝐄𝐑 𝐇𝐈𝐓#Crew takes flight as a supremely entertaining film, skillfully weaving together situational comedy, heist thrills, and drama into a captivating narrative.
Inspired by the escapades of a real airline owner on the… pic.twitter.com/7A4dTONUzq
— Sumit Kadel (@SumitkadeI) March 29, 2024
ಕೆಲವರಿಗೆ ‘ಕ್ರೂ’ ಸಿನಿಮಾ ಇಷ್ಟ ಆಗಿಲ್ಲ. ‘ಕಲಾವಿದರ ನಟನೆ ಚೆನ್ನಾಗಿದೆ. ಆದರೆ ಪೂರ್ತಿ ಸಿನಿಮಾ ಚೆನ್ನಾಗಿಲ್ಲ. ಮೊದಲಾರ್ಥ ಸಾಧಾರಣವಾಗಿದೆ. ದ್ವಿತೀಯಾರ್ಧ ಕಳಪೆ ಆಗಿದೆ. ಇದೊಂದು ಭಯಾನಕ ಸಿನಿಮಾ. ನೋಡದೇ ಇರುವುದೇ ಉತ್ತಮ’ ಎಂಬ ಕಟುವಾದ ವಿಮರ್ಶೆ ಕೂಡ ಬಂದಿದೆ. ಇಂಥ ಮಿಶ್ರ ಪ್ರತಿಕ್ರಿಯೆ ನಡುವೆಯೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಆಗಿದೆ.
ಇದನ್ನೂ ಓದಿ: ಪ್ರತಿ ರಾತ್ರಿ ಅಳುತ್ತಿದ್ದೆ, ತಿಂಗಳುಗಳ ಕಾಲ ನಿದ್ದೆ ಇರಲಿಲ್ಲ: ಕೆಟ್ಟ ದಿನ ನೆನೆದ ಕರೀನಾ
ಇದನ್ನು ಕೆಲವರು ಪೈಸಾ ವಸೂಲ್ ಸಿನಿಮಾ ಎಂದು ಕೂಡ ಕರೆದಿದ್ದಾರೆ. ಕಥೆ ತುಂಬ ಲಘುವಾಗಿದೆ. ಸಿನಿಮಾ ಫನ್ ಆಗಿದೆ. ಪ್ರಮುಖ ಪಾತ್ರಧಾರಿಗಳ ನಡುವಿನ ಕೆಮಿಸ್ಟ್ರೀ ಚೆನ್ನಾಗಿದೆ ಎಂಬ ವಿಮರ್ಶೆ ಕೂಡ ಸಿಕ್ಕಿದೆ. ‘ಈಗತಾನೇ ಸಿನಿಮಾ ನೋಡಿ ಹೊರಬಂದೆ. ಈಗಲೂ ನಗುತ್ತಿದ್ದೇನೆ. ಮತ್ತೊಮ್ಮೆ ಈ ಸಿನಿಮಾವನ್ನು ನೋಡುತ್ತೇನೆ ಎನಿಸುತ್ತದೆ’ ಎಂದು ನೆಟ್ಟಿಗರೊಬ್ಬರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.