ಪ್ರತಿ ರಾತ್ರಿ ಅಳುತ್ತಿದ್ದೆ, ತಿಂಗಳುಗಳ ಕಾಲ ನಿದ್ದೆ ಇರಲಿಲ್ಲ: ಕೆಟ್ಟ ದಿನ ನೆನೆದ ಕರೀನಾ

Kareena Kapoor: ಕಪೂರ್ ಕುಟುಂಬದ ಕುಡಿ ಕರೀನಾ ಕಪೂರ್​ಗೆ ಸುಲಭವಾಗಿ ಚಿತ್ರರಂಗಕ್ಕೆ ಎಂಟ್ರಿ ದೊರಕಿತು, ದೊಡ್ಡ ಸಿನಿಮಾಗಳು ಸುಲಭವಾಗಿ ದೊರೆತವು. ಆದರೆ ಕರೀನಾರ ಚಿತ್ರರಂಗದ ಪಯಣ ಹೂವ ಹಾಸಿಗೆ ಆಗಿರಲಿಲ್ಲ. ಕರೀನಾ ತಮ್ಮ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Mar 27, 2024 | 6:15 PM

ಬಾಲಿವುಡ್ ನಟಿ ಕರೀನಾ ಕಪೂರ್ ಎರಡು ದಶಕಕ್ಕೂ ಹೆಚ್ಚು ಸಮಯದಲ್ಲಿ ಬಾಲಿವುಡ್​ನಲ್ಲಿದ್ದಾರೆ. ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ.

1 / 7
ಬಾಲಿವುಡ್​ನ ಎಲ್ಲ ಸೂಪರ್ ಸ್ಟಾರ್​ಗಳೊಟ್ಟಿಗೆ ನಟಿಸಿರುವ ಕರೀನಾ ಕಪೂರ್, ಭಾರಿ ದೊಡ್ಡ ದೊಡ್ಡ ಸೂಪರ್ ಹಿಟ್ ಸಿನಿಮಾಗಳನ್ನು ಖಾತೆಗೆ ಹಾಕಿಕೊಂಡಿದ್ದಾರೆ.

2 / 7
ಭಾರಿ ದೊಡ್ಡ ಕುಟುಂಬದಿಂದ ಬಂದ, ಸಿನಿಮಾ ಹಿನ್ನೆಲೆಯುಳ್ಳ ಕರೀನಾಗೆ ಚಿತ್ರರಂಗದ ಎಂಟ್ರಿ ಹೂವ ಹಾಸಿಗೆಯಾಗಿತ್ತು. ಒಂದರ ಮೇಲೊಂದು ಅವಕಾಶಗಳು ದೊರೆತವು. ಹಾಗಿದ್ದರೂ ಸಹ ಕರೀನಾ ಕಷ್ಟದ ದಿನಗಳನ್ನು ಕಂಡಿದ್ದಾರಂತೆ.

3 / 7
ಸಂದರ್ಶನದಲ್ಲಿ ಕರೀನಾ ಹೇಳಿಕೊಂಡಿರುವಂತೆ ‘ಜಬ್ ವಿ ಮೆಟ್’ ಸಿನಿಮಾಕ್ಕೆ ಮುನ್ನ ನನ್ನ ಹಲವು ಸಿನಿಮಾಗಳು ಫ್ಲಾಪ್ ಆಗಿದ್ದವು. ನನಗೇ ನನ್ನ ಮೇಲೆ ಅನುಮಾನ ಬಂದಿತ್ತು ಎಂದಿದ್ದಾರೆ.

4 / 7
ಪ್ರತಿ ದಿನ ರಾತ್ರಿ ನಾನು ಅಳುತ್ತಿದ್ದೆ, ತಿಂಗಳುಗಳ ಕಾಲ ನಿದ್ದೆಯೇ ಸರಿಯಾಗಿ ಮಾಡಿರಲಿಲ್ಲ. ಕೊನೆಗೆ ನಾನು ಸಿನಿಮಾಗಳಿಂದ ಬಿಡುವು ಪಡೆದು ಆಯ್ಕೆಯನ್ನು ಬದಲಾಯಿಸಿಕೊಳ್ಳಲು ನಿಶ್ಚಯಿಸಿದೆ ಎಂದಿದ್ದಾರೆ ಕರೀನಾ.

5 / 7
ಅದು ನನಗೆ ಸಹಾಯ ಮಾಡಿತು. ಅದಾದ ಬಳಿಕ ನಾನು ‘ಜಬ್ ವಿ ಮೆಟ್’ ಮಾಡಿದೆ ಅಲ್ಲಿಂದ ಮತ್ತೆ ವೃತ್ತಿಯ ಗ್ರಾಫು ಮೇಲೇರಲು ಪ್ರಾರಂಭವಾಯ್ತು ಎಂದು ನೆನಪು ಮಾಡಿಕೊಂಡಿದ್ದಾರೆ ಕರೀನಾ ಕಪೂರ್.

6 / 7
ಕರೀನಾ ಕಪೂರ್ ಪ್ರಸ್ತುತ ‘ಕ್ರೀವ್’, ‘ಸಿಂಘಂ ಅಗೇನ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿಯೂ ಕರೀನಾ ನಟಿಸುತ್ತಾರೆ ಎನ್ನಲಾಗುತ್ತಿದೆ.

7 / 7
Follow us