ವರದಕ್ಷಿಣೆ ಆರೋಪ ಹೊರಿಸಿ ಮತ್ತೆ ಗಂಡನ ಜತೆ ಒಂದಾದ ನವಾಜುದ್ದೀನ್​ ಸಿದ್ದಿಖಿ ಪತ್ನಿ ಆಲಿಯಾ

‘3ನೇ ವ್ಯಕ್ತಿಗಳಿಂದಾಗಿ ನಮ್ಮ ಸಂಬಂಧದಲ್ಲಿ ಯಾವಾಗಲೂ ನಾವು ಸಮಸ್ಯೆ ಅನುಭವಿಸಿದ್ದೆವು. ಈಗ ನಮ್ಮ ಜೀವನದಲ್ಲಿ ತಪ್ಪು ತಿಳಿವಳಿಕೆ ಇಲ್ಲ. ಮಕ್ಕಳ ಸಲುವಾಗಿ ನಾವು ಸಂಪೂರ್ಣ ಶರಣಾಗಿದ್ದೇವೆ. ನಾವಿಬ್ಬರು ಈಗ ಬೇರಾಗುವ ಆಯ್ಕೆಯೇ ಇಲ್ಲ. ಯಾಕೆಂದರೆ ಮಕ್ಕಳು ದೊಡ್ಡವರಾಗಿದ್ದಾರೆ’ ಎಂದು ನವಾಜುದ್ದೀನ್​ ಸಿದ್ದಿಖಿ ಪತ್ನಿ ಆಲಿಯಾ ಸಿದ್ದಿಖಿ ಹೇಳಿದ್ದಾರೆ.

ವರದಕ್ಷಿಣೆ ಆರೋಪ ಹೊರಿಸಿ ಮತ್ತೆ ಗಂಡನ ಜತೆ ಒಂದಾದ ನವಾಜುದ್ದೀನ್​ ಸಿದ್ದಿಖಿ ಪತ್ನಿ ಆಲಿಯಾ
ನವಾಜುದ್ದೀನ್​ ಸಿದ್ದಿಖಿ ಕುಟುಂಬ
Follow us
ಮದನ್​ ಕುಮಾರ್​
|

Updated on: Mar 28, 2024 | 6:07 PM

ಬಾಲಿವುಡ್​ ನಟ ನವಾಜುದ್ದೀನ್​ ಸಿದ್ದಿಖಿ (Nawazuddin Siddiqui) ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಅವರ ವಿರುದ್ಧ ಪತ್ನಿ ಆಲಿಯಾ ಸಿದ್ದಿಖಿ ಹತ್ತಾರು ಆರೋಪ ಹೊರಿಸಿದ್ದರು. ವರದಕ್ಷಿಣೆ ಕಿರುಕುಳ ನೀಡಲಾಗಿತ್ತು ಎಂದು ಕೂಡ ಆಲಿಯಾ ಹೇಳಿದ್ದರು. ಆದರೆ ಈಗ ಅವರು ಮತ್ತೆ ಗಂಡನ ಜೊತೆ ಒಂದಾಗಿದ್ದಾರೆ. ತಮ್ಮ ನಡುವೆ ಇದ್ದ ಎಲ್ಲ ಕಿರಿಕ್​ ಮರೆತು ಒಟ್ಟಾಗಿ ವೆಡ್ಡಿಂಗ್​ ಆ್ಯನಿವರ್ಸರಿ ಆಚರಿಸಿದ್ದಾರೆ. ಅವರ ಈ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಆಲಿಯಾ ಸಿದ್ದಿಖಿ (Aaliya Siddiqui) ಈ ರೀತಿ ಮನಸ್ಸು ಬದಲಾಯಿಸಲು ಕಾರಣ ಏನು? ಮಕ್ಕಳು! ಹೌದು, ಮಕ್ಕಳ ಸಲುವಾಗಿ ಅವರು ಮತ್ತೆ ನವಾಜುದ್ದೀನ್​ ಸಿದ್ದಿಖಿ ಜೊತೆ ಸಂಸಾರ ಮಾಡಲು ಒಪ್ಪಿಕೊಂಡಿದ್ದಾರೆ.

ಕೆಲವೇ ದಿನಗಳ ಹಿಂದೆ ಆಲಿಯಾ ಸಿದ್ದಿಖಿ ಮತ್ತು ನವಾಜುದ್ದೀನ್​ ಸಿದ್ದಿಖಿ ಅವರು ಜೊತೆಯಾಗಿ ಕಾಣಿಸಿಕೊಂಡ ಫೋಟೋ ವೈರಲ್​ ಆಗಿತ್ತು. ಇಷ್ಟು ದಿನ ಪರಸ್ಪರ ಕಿತ್ತಾಡಿಕೊಂಡು, ತಮ್ಮ ಸಂಸಾರದ ಜಗಳವನ್ನು ಬೀದಿಗೆ ತಂದಿದ್ದ ಅವರು ಈಗ ಮತ್ತೆ ಒಂದಾಗಿದ್ದಾರೆ ಎಂಬುದಕ್ಕೆ ಆ ಫೋಟೋ ಸಾಕ್ಷಿ ಆಗಿತ್ತು. ಆ ಕುರಿತು ಮಾಧ್ಯಮವೊಂದಕ್ಕೆ ಆಲಿಯಾ ಸಿದ್ದಿಖಿ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ.

‘ಮೂರನೇ ವ್ಯಕ್ತಿಯಿಂದಾಗಿ ನಾವು ಯಾವಾಗಲೂ ಸಮಸ್ಯೆ ಅನುಭವಿಸಿದೆವು ಅನಿಸುತ್ತದೆ. ಈಗ ನಮ್ಮ ಬದುಕಿನಲ್ಲಿ ತಪ್ಪು ತಿಳಿವಳಿಕೆ ಇಲ್ಲ. ನಮ್ಮ ಮಕ್ಕಳ ಸಲುವಾಗಿ ನಾವು ಸಂಪೂರ್ಣ ಶರಣಾಗಿದ್ದೇವೆ. ಬದುಕಿನಲ್ಲಿ ಈಗ ಬೇರಾಗುವ ಮಾತೇ ಇಲ್ಲ. ಯಾಕೆಂದರೆ ಮಕ್ಕಳು ಈಗ ದೊಡ್ಡವರಾಗಿದ್ದಾರೆ. ಮಗಳು ಶೋರಾಗೆ ನವಾಜ್​ ತುಂಬಾ ಹತ್ತಿರವಾಗಿದ್ದಾರೆ. ನಮ್ಮ ನಡುವೆ ಜಗಳ ಆದಾಗ ಆಕೆ ತುಂಬ ಡಿಸ್ಟರ್ಬ್​ ಆಗಿದ್ದಳು. ಅದನ್ನೆಲ್ಲ ಅವಳಿಕೆ ಸಹಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಇನ್ಮೇಲೆ ಜಗಳ ಮಾಡೋದ ಬೇಡ. ಒಟ್ಟಾಗಿ, ಶಾಂತಿಯಿಂದ ಜೀವನ ಮಾಡೋಣ ಅಂತ ನಿರ್ಧರಿಸಿದೆವು’ ಎಂದು ಆಲಿಯಾ ಸಿದ್ದಿಖಿ ಹೇಳಿದ್ದಾರೆ.

ಇದನ್ನೂ ಓದಿ: ಮಗಳ ವಯಸ್ಸಿನ ಹುಡುಗಿ ಜೊತೆ ನವಾಜುದ್ದೀನ್ ಸಿದ್ಧಿಕಿ ಲಿಪ್ ಲಾಕ್​; ವೈರಲ್ ವಿಡಿಯೋ ಬಗ್ಗೆ ಟೀಕೆ

ಬಾಲಿವುಡ್​ನಲ್ಲಿ ನಟ ನವಾಜುದ್ದೀನ್​ ಸಿದ್ದಿಖಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಪತ್ನಿ ಮಾಡಿದ ಆರೋಪಗಳಿಂದ ಅವರ ಹೆಸರಿಗೆ ಕಳಂಕ ಬಂದಿತ್ತು. ‘ನಮ್ಮನ್ನು ಮನೆಯಿಂದ ಹೊರಗೆ ಹಾಕಿದ್ದಾರೆ’ ಎಂದು ಕೂಡ ಆಲಿಯಾ ಆರೋಪಿಸಿದ್ದರು. ವಿಚ್ಛೇದನ ಪಡೆಯುವ ಮಟ್ಟಕ್ಕೆ ಅವರ ಜಗಳ ತಲುಪಿತ್ತು. ಆದರೆ ಈಗ ಅವರಿಬ್ಬರು ಒಂದಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಆಲಿಯಾ ಮತ್ತು ನವಾಜುದ್ದೀನ್​ ಮದುವೆ ಆಗಿ 14 ವರ್ಷಗಳು ಕಳೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ