AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳನ್ನೇ ಮದುವೆ ಆಗಿದ್ದಾರೆ ಬಾಲಿವುಡ್​ನ ಈ ಸೆಲೆಬ್ರಿಟಿಗಳು

ಕೆಲವೇ ಕೆಲವು ಸೆಲೆಬ್ರಿಟಿಗಳು ಮಾತ್ರ ತಮ್ಮ ಅಭಿಮಾನಿಗಳನ್ನೇ ಮದುವೆ ಆಗಿದ್ದಾರೆ. ಈ ರೀತಿ ಲಕ್ಕಿ ಎನಿಸಿಕೊಂಡ ಅನೇಕರಿದ್ದಾರೆ. ಆಲಿಯಾಗೆ ರಣಬೀರ್ ಕಪೂರ್ ಮೇಲೆ ಮೊದಲಿನಿಂದಲೂ ಕ್ರಶ್ ಇತ್ತು. ಅವರನ್ನೇ ಮದುವೆ ಆದರು ರಣಬೀರ್. ಈ ರೀತಿ ಹಲವು ಪ್ರಕರಣ ಇದೆ.  ಆ ಬಗ್ಗೆ ಇಲ್ಲಿದೆ ವಿವರ.

ಅಭಿಮಾನಿಗಳನ್ನೇ ಮದುವೆ ಆಗಿದ್ದಾರೆ ಬಾಲಿವುಡ್​ನ ಈ ಸೆಲೆಬ್ರಿಟಿಗಳು
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Mar 28, 2024 | 11:02 AM

Share

ಚಿತ್ರರಂಗದಲ್ಲಿ ಯಾವ ಸೆಲೆಬ್ರಿಟಿ ಯಾರ ಜೊತೆ ಡೇಟ್ ಮಾಡುತ್ತಾರೆ, ಯಾರನ್ನು ಮದುವೆ ಆಗುತ್ತಾರೆ ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ. ಬಹುತೇಕ ಹೀರೋಗಳು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರೋ ನಟಿಯರನ್ನು ಮದುವೆ ಆಗುತ್ತಾರೆ. ಆದರೆ, ಕೆಲವೇ ಕೆಲವು ಸೆಲೆಬ್ರಿಟಿಗಳು ಮಾತ್ರ ತಮ್ಮ ಅಭಿಮಾನಿಗಳನ್ನೇ ಮದುವೆ ಆಗಿದ್ದಾರೆ. ಈ ರೀತಿ ಲಕ್ಕಿ ಎನಿಸಿಕೊಂಡ ಅನೇಕರಿದ್ದಾರೆ. ಆಲಿಯಾಗೆ (Alia Bhatt) ರಣಬೀರ್ ಕಪೂರ್ ಮೇಲೆ ಮೊದಲಿನಿಂದಲೂ ಕ್ರಶ್ ಇತ್ತು. ಅವರನ್ನೇ ಮದುವೆ ಆದರು ರಣಬೀರ್. ಈ ರೀತಿ ಹಲವು ಪ್ರಕರಣ ಇದೆ.  ಆ ಬಗ್ಗೆ ಇಲ್ಲಿದೆ ವಿವರ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್

ಚಿಕ್ಕ ವಯಸ್ಸಿನಿಂದ ಆಲಿಯಾ ಭಟ್​ಗೆ ರಣಬೀರ್ ಕಪೂರ್ ಮೇಲೆ ಕ್ರಶ್ ಇತ್ತು. ಇಬ್ಬರೂ ‘ಬ್ರಹ್ಮಾಸ್ತ್ರ’ ಸಿನಿಮಾ ಸೆಟ್​ನಲ್ಲಿ ಭೇಟಿ ಆದರು. ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಇಬ್ಬರೂ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ವಿವೇಕ್ ಒಬೆರಾಯ್ ಹಾಗೂ ಪ್ರಿಯಾಂಕಾ ಆಳ್ವಾ

ವಿವೇಕ್ ಒಬೆರಾಯ್ ಹಾಗೂ ಪ್ರಿಯಾಂಕಾ ಆಳ್ವಾ 2010ರ ಅಕ್ಟೋಬರ್ 29ರಂದು ಮದುವೆ ಆದರು. ಜೀವರಾಜ್ ಆಳ್ವಾ ಮಗಳು ಪ್ರಿಯಾಂಕಾ ಅವರು ವಿವೇಕ್ ಅವರ ಅಭಿಮಾನಿ ಆಗಿದ್ದರು. ಅವರನ್ನೇ ಮದುವೆ ಆಗೋ ಅವಕಾಶ ಸಿಕ್ಕಿತು.

ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ

ಶಿಲ್ಪಾ ಶೆಟ್ಟಿ ಹಾಗು ರಾಜ್ ಕುಂದ್ರಾ ದಾಂಪತ್ಯ ಜೀವನ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ರಾಜ್ ಕುಂದ್ರಾ ಜೊತೆ ಇವರ ಮದುವೆ 2009ರ ನವೆಂಬರ್ 22ರಂದು ನಡೆಯಿತು. ರಾಜ್ ಕುಂದ್ರಾ ಅವರು ಶಿಲ್ಪಾ ಶೆಟ್ಟಿಯ ಅಭಿಮಾನಿ ಆಗಿದ್ದರು. ಅಶ್ಲೀಲ ವಿಡಿಯೋ ಚಿತ್ರೀಕರಣ ಆರೋಪದಲ್ಲಿ ರಾಜ್ ಕುಂದ್ರಾ ಅರೆಸ್ಟ್ ಆಗಿದ್ದರು. ಈ ಮೂಲಕ ಚರ್ಚೆ ಹುಟ್ಟು ಹಾಕಿದ್ದರು.

ಇಶಾ ಹಾಗೂ ಭರತ್

ಹೇಮಾ ಮಾಲಿನ ಹಾಗೂ ಧರ್ಮೇಂದ್ರ ಅವರ ಹಿರಿಯ ಮಗಳು, ನಟಿ ಇಶಾ ಡಿಯೋಲ್ ಅವರು ಉದ್ಯಮಿ ಭರತ್ ತಕ್ತಾನಿ ಜೊತೆ 2012ರ ಜೂನ್ 9ರಂದು ಮದುವೆ ಆದರು. ಇಶಾ ಅವರ ಫ್ಯಾನ್​ ಆಗಿದ್ದರು ಭರತ್.

ಜಿತೇಂದ್ರ ಹಾಗೂ ಶೋಭಾ ಕಪೂರ್

ಬಾಲಿವುಡ್​ನ ಹಿರಿಯ ನಟ ಜಿತೇಂದ್ರ ಕುಮಾರ್ ಅವರು ಬ್ರಿಟಿಷ್ ಏರ್​ವೇಸ್​ನ ಏರ್​ಹೋಸ್ಟ್ ಶೋಭಾ ಅವರನ್ನು 1974ರಲ್ಲಿ ಮದುವೆ ಆದರು. ಶೋಭಾ ಅವರು ಜಿತೇಂದ್ರರ ಅಭಿಮಾನಿ ಆಗಿದ್ದರು.

ದಿಲೀಪ್ ಕುಮಾರ್ ಹಾಗೂ ಸೈರಾ ಬಾನು

ಬಾಲಿವುಡ್ ನಟ ದಿಲೀಪ್ ಕುಮಾರ್ ಅವರು 1966ರಲ್ಲಿ ಸೈರಾ ಬಾನು ಅವರನ್ನು ಮದುವೆ ಆದರು. ಸೈರಾ ಅವರ ಬಾಲ್ಯದ ಕ್ರಶ್​ ಆಗಿದ್ದರು ದಿಲೀಪ್ ಕುಮಾರ್. ಅವರನ್ನು ಆರಾಧಿಸುತ್ತಿದ್ದರು. ಅವರ ಬಗ್ಗೆ ಕನಸು ಕಾಣುತ್ತಿದ್ದರು. ಅವರನ್ನೇ ಮದುವೆ ಆಗೋ ಅವಕಾಶ ಸಿಕ್ಕಿತು.

ಇದನ್ನೂ ಓದಿ: ಅತೀ ಶ್ರೀಮಂತ ಸ್ಟಾರ್ ಕಿಡ್ ಆಗಲಿದ್ದಾರೆ ರಣಬೀರ್-ಆಲಿಯಾ ಮಗಳು

ಮಮ್ತಾಜ್ ಹಾಗೂ ಮಯೂರ್ ಮಾಧ್ವನಿ

ಬಾಲಿವುಡ್ ನಟಿ ಮಮ್ತಾಜ್ ಅವರು ತಮ್ಮ ಜೀವನದ ಅತಿ ದೊಡ್ಡ ಫ್ಯಾನ್ ಮಯೂರ್ ಮಾಧ್ವಾನಿ ಅವರನ್ನು 1974ರಲ್ಲಿ ಮದುವೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:34 am, Thu, 28 March 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ