- Kannada News Photo gallery Ranbir Kapoor Preparing For Ramayana Movie He is going For Archer Training
ಬಿಲ್ಲು ಬಾಣ ಹಿಡಿದು ‘ರಾಮಾಯಣ’ ಚಿತ್ರಕ್ಕೆ ರೆಡಿ ಆದ ರಣಬೀರ್ ಕಪೂರ್; ನಡೆದಿದೆ ಭರ್ಜರಿ ಸಿದ್ಧತೆ
ರಾಮನ ಪಾತ್ರ ಮಾಡಬೇಕು ಎಂದರೆ ಬಿಲ್ಲು-ಬಾಣ ಹಿಡಿಯಬೇಕು. ಅದು ಗನ್ ಬಳಸಿದಂತೆ ಅಲ್ಲ. ಇದಕ್ಕೆ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ. ಹೀಗಾಗಿ, ರಣಬೀರ್ ಕಪೂರ್ ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
Updated on: Mar 26, 2024 | 12:36 PM

ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಲಿದ್ದಾರೆ. ಇದಕ್ಕಾಗಿ ಅವರು ಮದ್ಯ ಸೇವನೆ ಹಾಗೂ ಮಾಂಸ ಸೇವನೆ ತ್ಯಜಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಕ್ಲೀನ್ ಶೇವ್ ಲುಕ್ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ರಾಮನ ಪಾತ್ರ ಮಾಡಬೇಕು ಎಂದರೆ ಬಿಲ್ಲು-ಬಾಣ ಹಿಡಿಯಬೇಕು. ಅದು ಗನ್ ಬಳಸಿದಂತೆ ಅಲ್ಲ. ಇದಕ್ಕೆ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ. ಹೀಗಾಗಿ, ರಣಬೀರ್ ಕಪೂರ್ ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ರಣಬೀರ್ ಕಪೂರ್ ಅವರು ಬಿಲ್ಲು-ಬಾಣ ಹ್ಯಾಂಡಲ್ ಮಾಡೋದು ಹೇಗೆ ಎಂಬುದನ್ನು ಕಲಿಯಲು ಟ್ರೇನರ್ಗಳನ್ನು ಕರೆಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ರಣಬೀರ್ ಕಪೂರ್ ಅವರು ಯೋಗಾಸನ ಕೂಡ ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ. ಅವರು ಸಾಕಷ್ಟು ಸಿದ್ಧತೆಯೊಂದಿಗೆ ‘ರಾಮಾಯಣ’ ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿದೆ.

ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಅನ್ನೋದು ವಿಶೇಷ. ಹಲವು ಲುಕ್ನಲ್ಲಿ ಅವರು ಕಾಣಿಸಿಕೊಂಡಿದ್ದರು.



















