ತಿಂಗಳಿಗೆ ಹತ್ತು ಲಕ್ಷ ಕೊಡ್ತಿದ್ದೀನಿ, ಆದ್ರೂ ಹಣಕ್ಕಾಗಿ ಡ್ರಾಮಾ ಮಾಡ್ತಿದ್ದಾಳೆ: ಪತ್ನಿ ವಿರುದ್ಧ ನವಾಜುದ್ದೀನ್ ಕಿಡಿ

ನವಾಜುದ್ದೀನ್ ಸಿದ್ಧಿಕಿ, ತನ್ನ ಪತ್ನಿ ಆಲಿಯಾ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ಹಣಕ್ಕಾಗಿ ನಾಟಕ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

ತಿಂಗಳಿಗೆ ಹತ್ತು ಲಕ್ಷ ಕೊಡ್ತಿದ್ದೀನಿ, ಆದ್ರೂ ಹಣಕ್ಕಾಗಿ ಡ್ರಾಮಾ ಮಾಡ್ತಿದ್ದಾಳೆ: ಪತ್ನಿ ವಿರುದ್ಧ ನವಾಜುದ್ದೀನ್ ಕಿಡಿ
ನವಾಜುದ್ದೀನ್ ಸಿದ್ದಿಕಿ
Follow us
|

Updated on: Mar 06, 2023 | 7:46 PM

ನಟ ನವಾಜುದ್ದೀನ್ ಸಿದ್ಧಿಕಿ ಹಾಗೂ ಅವರ ಮಾಜಿ ಪತ್ನಿ ಆಲಿಯಾ ನಡುವಿನ ಜಗಳ ಬೀದಿಗೆ ಬಂದಿದೆ. ಬೀದಿಯಲ್ಲಿ ಮಕ್ಕಳೊಂದಿಗೆ ನಿಂತು ವಿಡಿಯೋ ಮಾಡಿರುವ ನವಾಜುದ್ದೀನ್ ಪತ್ನಿ ಆಲಿಯಾ, ನವಾಜುದ್ದೀನ್ ಹಾಗೂ ಅವರ ತಾಯಿ ನನ್ನನ್ನು ಮಕ್ಕಳನ್ನು ಬೀದಿ ಪಾಲು ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಇದೀಗ ನವಾಜುದ್ದೀನ್ ಸಿದ್ಧಿಕಿ ಪತ್ನಿಯ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ಹಣಕ್ಕಾಗಿ ನಾಟಕ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನವಾಜುದ್ದೀನ್ ಸಿದ್ಧಿಕಿ, ಇದು ಆರೋಪ ಅಲ್ಲ, ನನ್ನ ಭಾವನೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಇಷ್ಟು ದಿನ ಮೌನವಾಗಿದ್ದೆ, ಇದೇ ಕಾರಣಕ್ಕೆ ನನ್ನನ್ನು ಆರೋಪಿ ಎಂದುಕೊಳ್ಳಲಾಗುತ್ತಿದೆ. ನನ್ನನ್ನು ವಿಲನ್​ನಂತೆ ಕಾಣಲಾಗುತ್ತಿದೆ. ಸಾಮಾಜಿಕ ಜಾಲತಾಣದ ಕೆಲವರು, ಮಾಧ್ಯಮ ಹಾಗೂ ಕೆಲವು ಮಂದಿ ನನ್ನ ಈ ವ್ಯಕ್ತಿತ್ವ ವಧೆಯನ್ನು ಬಹಳ ಎಂಜಾಯ್ ಮಾಡುತ್ತಿದ್ದಾರೆ ಎಂದಿದ್ದಾರೆ ನವಾಜ್.

ನಾನು ಹಾಗೂ ಅಲಿಯಾ ವಿಚ್ಛೇದನ ಪಡೆದು ಕೆಲವು ವರ್ಷಗಳಾಗಿವೆ. ನಾವಿಬ್ಬರೂ ಒಟ್ಟಿಗಿಲ್ಲ. ಆದರೆ ನಮ್ಮ ಮಕ್ಕಳಿಗಾಗಿ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ನಮ್ಮ ಮಕ್ಕಳು ಏಕೆ ಕಳೆದ 45 ದಿನಗಳಿಂದಲೂ ಭಾರತದಲ್ಲಿದ್ದಾರೆ ಯಾರಾದರೂ ಕೇಳಿದ್ದೀರ? ಅವರು ಕಳೆದ 45 ದಿನಗಳಿಂದಲೂ ಶಾಲೆಗೆ ಹೋಗಿಲ್ಲ. ಅವರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ. ದುಬೈನ ಅವರ ಶಾಲೆಯವರು, ಮಕ್ಕಳನ್ನು ಶಾಲೆಗೆ ಕಳಿಸಿರೆಂದು ಪ್ರತಿದಿನವೂ ನನಗೆ ಸಂದೇಶಗಳನ್ನು ಕಳಿಸುತ್ತಿದ್ದಾರೆ ಎಂದಿದ್ದಾರೆ ನವಾಜ್.

ಇನ್ನು ಹಣಕಾಸಿನ ವಿಷಯಕ್ಕೆ ಬಂದರೆ ಕಳೆದ ಎರಡು ವರ್ಷಗಳಿಂದ ಆಲಿಯಾಗೆ ಪ್ರತಿತಿಂಗಳೂ ಸುಮಾರು 10 ಲಕ್ಷ ರುಪಾಯಿ ಹಣ ನೀಡುತ್ತಾ ಬಂದಿದ್ದೇನೆ. ಆಕೆ ದುಬೈಗೆ ಹೋಗುವ ಮುನ್ನ ತಿಂಗಳಿಗೆ 5 ರಿಂದ 7 ಲಕ್ಷ ಹಣ ನೀಡುತ್ತಿದ್ದೇನೆ. ಮಕ್ಕಳ ಫೀಸು, ಮೆಡಿಕಲ್ ಬಿಲ್​ಗಳು, ಪ್ರಯಾಣ ವೆಚ್ಚ ಇನ್ನೂ ಹಲವು ವೆಚ್ಚಗಳನ್ನು ಪ್ರತ್ಯೇಕವಾಗಿ ಭರಿಸುತ್ತಿದ್ದೇನೆ. ಇದು ಮಾತ್ರವೇ ಅಲ್ಲದೆ, ಆಕೆಯೂ ಸಂಪಾದನೆಗೆ ದಾರಿ ಕಂಡುಕೊಳ್ಳಲಿ ಎಂಬ ಕಾರಣಕ್ಕೆ ಆಕೆಯ ಮೂರು ಸಿನಿಮಾಗಳಿಗೆ ನಾನೇ ಬಂಡವಾಳ ಹೂಡಿದೆ. ಇದರಿಂದ ಕೋಟ್ಯಂತರ ರುಪಾಯಿ ಹಣವನ್ನು ನಾನು ಕಳೆದುಕೊಂಡೆ ಎಂದಿದ್ದಾರೆ ನವಾಜ್.

ಮುಂದುವರೆದು, ಆಕೆ ನನ್ನ ಮಕ್ಕಳ ತಾಯಿಯಾಗಿರುವ ಕಾರಣಕ್ಕೆ ಆಕೆಯ ಅನುಕೂಲಕ್ಕೆ ಹಲವು ಸೌಲಭ್ಯಗಳನ್ನು ಕೊಟ್ಟಿದ್ದೇನೆ. ಐಶಾರಾಮಿ ಕಾರುಗಳನ್ನು ಕೊಟ್ಟಿದ್ದೆ. ಆದರೆ ಆಕೆ ಅದನ್ನೆಲ್ಲ ಮಾರಿ ತನ್ನ ಸ್ವಂತಕ್ಕೆ ಬಳಸಿಕೊಂಡಳು. ನನ್ನ ಮಕ್ಕಳಿಗಾಗಿ ಮುಂಬೈನಲ್ಲಿ ಒಂದು ಐಶಾರಾಮಿ ಸೀ ಫೇಸ್ ಮನೆಯನ್ನು ಖರೀದಿಸಿದ್ದೆ. ಆ ಮನೆಗೆ ಆಕೆಯನ್ನೂ ಭಾಗಿಯನ್ನಾಗಿ ಮಾಡಿದೆ. ಮಕ್ಕಳು ದುಬೈನಲ್ಲಿ ಕಲಿಯುತ್ತಿರುವ ಕಾರಣ ಅಲ್ಲಿ ಒಳ್ಳೆಯ ಬಾಡಿಗೆ ಅಪಾರ್ಟ್​ಮೆಂಟ್ ಮಾಡಿಕೊಟ್ಟಿದ್ದೇನೆ. ಆಲಿಯಾ ಅಲ್ಲಿ ಇರಲು ಸಕಲ ವ್ಯವಸ್ಥೆ ಮಾಡಿದ್ದೇನೆ. ಆದರೆ ಆಕೆಗೆ ಹಣದ ಮೋಹ. ನನ್ನಿಂದ ಇನ್ನಷ್ಟು ಹಣ ಪಡೆಯಲು ಈಗ ಮತ್ತೆ ಡ್ರಾಮಾ ಆರಂಭಿಸಿದ್ದಾಳೆ. ನನ್ನ ಮೇಲೆ, ನನ್ನ ತಾಯಿಯ ಮೇಲೆ ಇಲ್ಲ ಸಲ್ಲದ ಕೇಸುಗಳನ್ನು ಹಾಕಿದ್ದಾಳೆ. ಆಲಿಯಾ ಈ ರೀತಿಯ ಡ್ರಾಮಾ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ ಎಂದಿದ್ದಾರೆ ನವಾಜುದ್ದೀನ್.

ನನ್ನ ಮಕ್ಕಳು ರಜೆಗೆ ಭಾರತಕ್ಕೆ ಬಂದಾಗಲೆಲ್ಲ ಅವರ ಅಜ್ಜಿಯೊಟ್ಟಿಗೆ ಇರುತ್ತಿದ್ದರು. ಹೀಗಿರುವಾಗ ನನ್ನ ತಾಯಿ ಅವರನ್ನು ಮನೆಯಿಂದ ಹೊರಗೆ ಕಳಿಸಲು ಹೇಗೆ ಸಾಧ್ಯ. ಪ್ರಪಂಚದ ಯಾವುದೇ ತಂದೆ ಮಕ್ಕಳನ್ನು ಹೊರಗಟ್ಟಲು ಸಾಧ್ಯವೇ. ನಾನು ಇಷ್ಟು ದುಡಿಯುತ್ತಿರುವುದೇ ನನ್ನ ಇಬ್ಬರು ಮಕ್ಕಳಿಗಾಗಿ. ನನ್ನ ಮಕ್ಕಳಾದ ಸರಾ ಹಾಗೂ ಯಾಮಿಯನ್ನು ನಾನು ಬಹಳ ಪ್ರೀತಿಸುತ್ತೇನೆ. ಅವರ ಭವಿಷ್ಯವನ್ನು ಭದ್ರಪಡಿಸಿಯೇ ತೀರುತ್ತೇನೆ. ಅದಕ್ಕಾಗಿ ನಾನು ಯಾವ ಹಂತಕ್ಕೆ ಹೋಗಲು ಸಹ ತಯಾರಿದ್ದೇನೆ ಎಂದಿದ್ದಾರೆ ನವಾಜುದ್ದೀನ್ ಸಿದ್ದಿಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ