Rakhi Sawant: ದುಬೈನಲ್ಲಿ ರಾಖಿ ಸಾವಂತ್​ಗೆ ಹೊಸ ಮನೆ, ಕಾರು; ಆದರೂ ತಪ್ಪಲಿಲ್ಲ ಕಣ್ಣೀರು

Rakhi Sawant | Adil Khan: ದುಬೈನಲ್ಲಿ ನಟಿ ರಾಖಿ ಸಾವಂತ್​ ಅವರ ಡ್ಯಾನ್ಸ್​ ಕ್ಲಾಸ್​ ಶುರುವಾಗಿದೆ. ಅಲ್ಲಿನ ಕಂಪನಿಯವರು ರಾಖಿಗೆ ಹೊಸ ಮನೆ ಮತ್ತು ಕಾರು ನೀಡಿದ್ದಾರೆ.

Rakhi Sawant: ದುಬೈನಲ್ಲಿ ರಾಖಿ ಸಾವಂತ್​ಗೆ ಹೊಸ ಮನೆ, ಕಾರು; ಆದರೂ ತಪ್ಪಲಿಲ್ಲ ಕಣ್ಣೀರು
ರಾಖಿ ಸಾವಂತ್
Follow us
ಮದನ್​ ಕುಮಾರ್​
|

Updated on:Mar 07, 2023 | 11:43 AM

ನಟಿ ರಾಖಿ ಸಾವಂತ್ (Rakhi Sawant) ಅವರ ಬದುಕಿನಲ್ಲಿ ಸಾಕಷ್ಟು ಏಳು-ಬೀಳುಗಳು ಎದುರಾಗುತ್ತಿವೆ. ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಅದರ ನಡುವೆಯೂ ಅವರು ಹೊಸ ಮನೆ ಮತ್ತು ಹೊಸ ಕಾರು ಖರೀದಿಸಿ ಖುಷಿಪಡುತ್ತಿದ್ದಾರೆ. ಅದು ಕೂಡ ದುಬೈನಲ್ಲಿ (Adil Khan) ಎಂಬುದು ವಿಶೇಷ! ಹೌದು, ರಾಖಿ ಸಾವಂತ್​ ಅವರು ಇತ್ತೀಚೆಗೆ ದುಬೈಗೆ ಹೋಗಿ ಬಂದಿದ್ದಾರೆ. ವಾಪಸ್​ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಜೊತೆ ಮಾತನಾಡಿದ ಅವರು ತಮ್ಮ ಹೊಸ ಮನೆ ಮತ್ತು ಕಾರಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಗಂಡ ಆದಿಲ್​ ಖಾನ್​ (Adil Khan) ಬಗ್ಗೆ ಮಾತನಾಡುತ್ತ ಕಣ್ಣೀರು ಹಾಕಿದ್ದಾರೆ.

ನಟಿಯಾಗಿ, ಡ್ಯಾನ್ಸರ್​ ಆಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ ರಾಖಿ ಸಾವಂತ್​ ಅವರು ಗುರುತಿಸಿಕೊಂಡಿದ್ದಾರೆ. ಮೈಸೂರು ಮೂಲದ ಆದಿಲ್​ ಖಾನ್​ ಜೊತೆ ಅವರಿಗೆ ಆಪ್ತತೆ ಬೆಳೆಯಿತು. ಕಳೆದ ವರ್ಷ ಅವರ ಮದುವೆ ನೆರವೇರಿತು. ಆದರೆ ಒಂದಷ್ಟು ತಿಂಗಳ ಕಾಲ ಆ ವಿಚಾರವನ್ನು ಮುಚ್ಚಿಡಲಾಗಿತ್ತು. ಕಡೆಗೂ ಸತ್ಯ ಬಹಿರಂಗ ಆಯಿತು. ಆದರೆ ಹೆಚ್ಚು ದಿನಗಳ ಕಾಲ ರಾಖಿ ಸಾವಂತ್​ ಮತ್ತು ಆದಿಲ್ ಖಾನ್​ ಸಂಸಾರ ಮುಂದುವರಿಯಲಿಲ್ಲ. ತಮ್ಮ ಹಣ ಕದ್ದಿದ್ದಾರೆ ಹಾಗೂ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆದಿಲ್​ ಖಾನ್​ ವಿರುದ್ಧ ರಾಖಿ ಸಾವಂತ್​ ಕೇಸ್​ ದಾಖಲಿಸಿದ್ದಾರೆ. ಅದರ ಪರಿಣಾಮವಾಗಿ ಈಗ ಆದಿಲ್​ ಖಾನ್​ ಜೈಲು ಸೇರಿದ್ದಾರೆ.

ಇದನ್ನೂ ಓದಿ: Rakhi Sawant: ತಪ್ಪಾಗಿ ನಮಾಜ್​ ಮಾಡಿದ ರಾಖಿ ಸಾವಂತ್​; ವಿಡಿಯೋ ವೈರಲ್​ ಆದ ಬಳಿಕ ಹಿಗ್ಗಾಮುಗ್ಗಾ ಟ್ರೋಲ್​

ಇದನ್ನೂ ಓದಿ
Image
Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ
Image
Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​
Image
Rakhi Sawant: ಫಾತಿಮಾ ಅಂತ ಹೆಸರು ಬದಲಿಸಿಕೊಂಡ ರಾಖಿ ಸಾವಂತ್​; ಆದಿಲ್​​ ಜತೆಗಿನ ಶಾದಿ ರಹಸ್ಯ ಬಹಿರಂಗ
Image
Rakhi Sawant: ಮತ್ತೊಂದು ವಿವಾಹ ಆದ ರಾಖಿ ಸಾವಂತ್; ಆದಿಲ್ ಜತೆಗಿನ ಮದುವೆ ಫೋಟೋ ವೈರಲ್

ದುಬೈನಲ್ಲಿ ರಾಖಿ ಸಾವಂತ್​ ಅವರ ಡ್ಯಾನ್ಸ್​ ಕ್ಲಾಸ್​ ಶುರುವಾಗಿದೆ. ಆ ಕಂಪನಿಯವರು ಅವರಿಗೆ ಮನೆ ಮತ್ತು ಕಾರು ನೀಡಿದ್ದಾರೆ. ಆದರೆ ಆ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಅದರ ಬದಲು ಗಂಡನನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. 2023ರ ಆರಂಭದಿಂದಲೇ ರಾಖಿ ಬದುಕಿನಲ್ಲಿ ಸಂಕಷ್ಟ ಶುರುವಾಯಿತು. ಜನವರಿಯಲ್ಲಿ ಅವರ ತಾಯಿ ನಿಧನರಾದರು. ನಂತರ ಆದಿಲ್​ ಖಾನ್​ನ ವಿವಾಹೇತರ ಸಂಬಂಧವೂ ಬೆಳಕಿಗೆ ಬಂತು.

ಇದನ್ನೂ ಓದಿ: Rakhi Sawant: ಪತ್ನಿಯ ಬೆತ್ತಲೆ ಫೋಟೋ ಮಾರಾಟ ಮಾಡಿದ ಆದಿಲ್​ ಖಾನ್​? ರಾಖಿ ಸಾವಂತ್​ ಶಾಕಿಂಗ್​ ಆರೋಪ

ಮೈಸೂರಿಗೆ ಬಂದು ಅತ್ತಿದ್ದ ರಾಖಿ ಸಾವಂತ್​:

ರಾಖಿ ಸಾವಂತ್​ ಅವರು ಕೆಲವೇ ದಿನಗಳ ಹಿಂದೆ ಮೈಸೂರಿಗೆ ಬಂದು ಕಣ್ಣೀರು ಹಾಕಿದ್ದರು. ಆದಿಲ್​ ಖಾನ್​ರ ತಂದೆ ಬಳಿ ಮಾತನಾಡಿದ್ದರು. ‘ನೀನು ಹಿಂದೂ. ನಿನ್ನನ್ನು ನಾನು ಸೇರಿಸಿಕೊಳ್ಳಲು ಆಗಲ್ಲ’ ಅಂತ ಆದಿಲ್​ ಖಾನ್​ ತಂದೆ ಹೇಳಿದ್ದಾರೆ ಎಂದು ರಾಖಿ ಸಾವಂತ್​ ತಿಳಿಸಿದ್ದರು. ‘ನಾನು ಹಿಂದು ಆಗಿದ್ದೆ. ಆದರೆ ಈಗ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದೇನೆ’ ಎಂದು ಅವರು ಮಾಧ್ಯಮದ ಎದುರು ಕಣ್ಣೀರು ಹಾಕಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:43 am, Tue, 7 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ