Janhvi Kapoor: ಟಾಪ್ ನಟಿಯರಿಗಿಂತ ಹೆಚ್ಚು ಸಂಭಾವನೆ ಪಡೆದ ಜಾನ್ವಿ ಕಪೂರ್; ‘ಎನ್ಟಿಆರ್ 30’ ತಂದ ಅದೃಷ್ಟ
Janhvi Kapoor Remuneration: ಜಾನ್ವಿ ಕಪೂರ್ ಅವರಿಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಸಿಗುತ್ತಿದೆ. ಅದಕ್ಕೆ ನೆಪೋಟಿಸಂ ಕಾರಣ ಎಂದು ಬಹುತೇಕರು ಆರೋಪಿಸುತ್ತಿದ್ದಾರೆ.
ಬಾಲಿವುಡ್ನಲ್ಲಿ ನಟಿ ಜಾನ್ವಿ ಕಪೂರ್ (Janhvi Kapoor) ಅವರು ಬ್ಯುಸಿ ಆಗಿದ್ದಾರೆ. ಈಗ ಅವರು ದಕ್ಷಿಣ ಭಾರತಕ್ಕೂ ಕಾಲಿಡುತ್ತಿದ್ದಾರೆ. ಮೊದಲ ಬಾರಿಗೆ ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಜೂನಿಯರ್ ಎನ್ಟಿಆರ್ (Jr NTR) ಅಭಿನಯದ 30ನೇ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಸೋಮವಾರ (ಮಾ.6) ಈ ಸುದ್ದಿಯನ್ನು ಹಂಚಿಕೊಳ್ಳುವುದರ ಜೊತೆಗೆ ಜಾನ್ವಿ ಕಪೂರ್ ಅವರ ಫಸ್ಟ್ ಲುಕ್ ಕೂಡ ಅನಾವರಣ ಆಗಿದೆ. ಅದರ ಬೆನ್ನಲ್ಲೇ ಸಂಭಾವನೆ (Janhvi Kapoor Remuneration) ಬಗ್ಗೆ ಸುದ್ದಿ ಹಬ್ಬಿದೆ. ಟಾಲಿವುಡ್ ಟಾಪ್ ನಟಿಯರಿಗಿಂತಲೂ ಹೆಚ್ಚು ಸಂಭಾವನೆಯನ್ನು ಜಾನ್ವಿ ಕಪೂರ್ ಅವರಿಗೆ ನೀಡಲಾಗುತ್ತಿದೆ ಎಂಬ ಗಾಸಿಪ್ ಹರಿದಾಡುತ್ತಿದೆ.
ಜಾನ್ವಿ ಕಪೂರ್ ಅವರು ಈವರೆಗೂ ಹೇಳಿಕೊಳ್ಳುವಂತಹ ಹಿಟ್ ನೀಡಿಲ್ಲ. ಮೊದಲ ಸಿನಿಮಾ ‘ಧಡಕ್’ ಕೊಂಚ ಸದ್ದು ಮಾಡಿದ್ದು ಬಿಟ್ಟರೆ ಇನ್ನುಳಿದ ಚಿತ್ರಗಳು ಜನರಿಗೆ ಇಷ್ಟ ಆಗಲಿಲ್ಲ. ಆದರೂ ಕೂಡ ಅವರಿಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಸಿಗುತ್ತಿವೆ. ಅದಕ್ಕೆ ನೆಪೋಟಿಸಂ ಕಾರಣ ಎಂದು ಬಹುತೇಕರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: NTR 30: ಜೂನಿಯರ್ ಎನ್ಟಿಆರ್ 30ನೇ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ; ಇಲ್ಲಿದೆ ಫಸ್ಟ್ ಲುಕ್
ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಯ ಪುತ್ರಿ ಜಾನ್ವಿ ಕಪೂರ್. ಹಾಗಾಗಿ ಅವರಿಗೆ ಸುಲಭವಾಗಿ ಚಾನ್ಸ್ ಸಿಗುತ್ತಿದೆ. ಚಾನ್ಸ್ ಮಾತ್ರವಲ್ಲದೇ ನಿರೀಕ್ಷೆಗೂ ಮೀರಿ ಅವರು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ‘ಎನ್ಟಿಆರ್ 30’ ಚಿತ್ರದಲ್ಲಿ ನಟಿಸಲು ಜಾನ್ವಿ ಕಪೂರ್ ಅವರಿಗೆ ಬರೋಬ್ಬರಿ 4 ಕೋಟಿ ರೂಪಾಯಿ ಸಂಬಳ ನೀಡಲಾಗುತ್ತಿದೆ ಎಂಬ ಗಾಸಿಪ್ ಕೇಳಿಬಂದಿದೆ.
ಇದನ್ನೂ ಓದಿ: Janhvi Kapoor: ‘ಅವಕಾಶ ಇದೆ ಆದರೆ ಗೌರವ ಮಾತ್ರ ಸಿಗುತ್ತಿಲ್ಲ’; ನಟಿ ಜಾನ್ವಿ ಕಪೂರ್ ಬೇಸರದ ನುಡಿ
ಟಾಲಿವುಡ್ನಲ್ಲಿ ಪ್ರಚಲಿತದಲ್ಲಿ ಇರುವ ಬಹುತೇಕ ನಟಿಯರು ಎರಡು ಅಥವಾ ಮೂರು ಕೋಟಿ ರೂಪಾಯಿ ಆಸುಪಾಸಿನಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಜಾನ್ವಿ ಕಪೂರ್ ಅವರು ಏಕಾಏಕಿ 4 ಕೋಟಿ ರೂಪಾಯಿ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಅಲ್ಲದೇ ಅವರು ಮೊದಲ ಬಾರಿಗೆ ತೆಲುಗು ಸಿನಿಮಾ ಒಪ್ಪಿಕೊಂಡಿರುವುದು ಕೂಡ ಅವರ ಸಂಭಾವನೆ ಹೆಚ್ಚಲು ಕಾರಣ.
ಇದನ್ನೂ ಓದಿ: Janhvi Kapoor: ತಂದೆ, ತಂಗಿ ಜೊತೆ ಫ್ಯಾಮಿಲಿ ಟ್ರಿಪ್ ಹೊರಟ ಜಾನ್ವಿ ಕಪೂರ್; ಸಾಥ್ ನೀಡಿದ ಬಾಯ್ಫ್ರೆಂಡ್
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಎನ್ಟಿಆರ್ 30’ ಸಿನಿಮಾ ಮೂಡಿಬರಲಿದೆ. ಹಾಗಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಫೇಮಸ್ ಆಗಿರುವ ನಟಿಯನ್ನು ಆಯ್ಕೆ ಮಾಡಿಕೊಳ್ಳುವುದು ಚಿತ್ರತಂಡಕ್ಕೆ ಅನಿವಾರ್ಯ ಆಗಿತ್ತು. ಹಾಗಾಗಿ ಜಾನ್ವಿ ಕಪೂರ್ಗೆ ಇಷ್ಟು ದುಬಾರಿ ಸಂಭಾವನೆ ನೀಡಲು ನಿರ್ಮಾಪಕರು ಒಪ್ಪಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.