Janhvi Kapoor: ತಂದೆ, ತಂಗಿ ಜೊತೆ ಫ್ಯಾಮಿಲಿ ಟ್ರಿಪ್​ ಹೊರಟ ಜಾನ್ವಿ ಕಪೂರ್​; ಸಾಥ್​ ನೀಡಿದ ಬಾಯ್​ಫ್ರೆಂಡ್​

Shikhar Pahariya | Janhvi Kapoor Boyfriend: ಶಿಖರ್​ ಪಹರಿಯಾ ಜೊತೆ ಜಾನ್ವಿ ಕಪೂರ್​ ಡೇಟಿಂಗ್​ ಮಾಡುತ್ತಿದ್ದಾರೆ. ಅನೇಕ ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದುಂಟು.

Janhvi Kapoor: ತಂದೆ, ತಂಗಿ ಜೊತೆ ಫ್ಯಾಮಿಲಿ ಟ್ರಿಪ್​ ಹೊರಟ ಜಾನ್ವಿ ಕಪೂರ್​; ಸಾಥ್​ ನೀಡಿದ ಬಾಯ್​ಫ್ರೆಂಡ್​
ಖುಷಿ ಕಪೂರ್, ಬೋನಿ ಕಪೂರ್, ಶಿಖರ್ ಪಹರಿಯಾ, ಜಾನ್ವಿ ಕಪೂರ್
Follow us
ಮದನ್​ ಕುಮಾರ್​
|

Updated on: Mar 01, 2023 | 5:23 PM

ಸೆಲೆಬ್ರಿಟಿಗಳ ಲವ್​ ಲೈಫ್​ ಬಗ್ಗೆ ಜನರಿಗೆ ಎಲ್ಲಿಲ್ಲದ ಆಸಕ್ತಿ. ಅದರಲ್ಲೂ ಸ್ಟಾರ್​ ನಟರ ಮಕ್ಕಳ ಮೇಲೆ ಗಾಸಿಪ್​ ಮಂದಿ ಸದಾ ಒಂದು ಕಣ್ಣು ಇಟ್ಟಿರುತ್ತಾರೆ. ಹಾಗಾಗಿ ಎಲ್ಲರ ಕಣ್ಣು ತಪ್ಪಿಸಿ ಡೇಟಿಂಗ್​ ಮಾಡುವುದು ಕೊಂಚ ಕಷ್ಟ. ನಟಿ ಜಾನ್ವಿ ಕಪೂರ್​ (Janhvi Kapoor) ಅವರು ಸಿನಿಮಾದ ಜೊತೆಗೆ ಇಂಥ ಗಾಸಿಪ್​ಗಳ ಕಾರಣದಿಂದಲೂ ಸುದ್ದಿ ಆಗುತ್ತಾರೆ. ಬಾಲಿವುಡ್​ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ, ಶಿಖರ್​ ಪಹರಿಯಾ ಜೊತೆಗೆ ಅವರು ಡೇಟಿಂಗ್​ (Dating) ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಈಗ ಶಿಖರ್​ ಪಹರಿಯಾ (Shikhar Pahariya) ಅವರು ಜಾನ್ವಿ ಕಪೂರ್​ ಕುಟುಂಬದವರ ಜೊತೆ ಟ್ರಿಪ್​ಗೆ ತೆರಳಿದ್ದಾರೆ. ಎಲ್ಲರೂ ಜೊತೆಯಾಗಿ ಮುಂಬೈ ವಿಮಾನ ನಿಲ್ದಾಣ ಪ್ರವೇಶಿಸುತ್ತಿರುವುದು ಪಾಪರಾಜಿಗಳ ಕಣ್ಣಿಗೆ ಬಿದ್ದಿದೆ.

ಖ್ಯಾತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್​ ಅವರ ಪುತ್ರಿ ಎಂಬ ಕಾರಣಕ್ಕೆ ಜಾನ್ವಿ ಕಪೂರ್​ ಅವರನ್ನು ಪಾಪರಾಜಿಗಳು ಸದಾ ಹಿಂಬಾಲಿಸುತ್ತಾರೆ. ಅವರು ಎಲ್ಲೇ ಹೋದರೂ ಫೋಟೋ ಕ್ಲಿಕ್ಕಿಸಲಾಗುತ್ತದೆ. ಇತ್ತೀಚೆಗೆ ಜಾನ್ವಿ ಕಪೂರ್​ ಅವರು ತಂದೆ ಬೋನಿ ಕಪೂರ್ ಹಾಗೂ ತಂಗಿ ಖುಷಿ ಕಪೂರ್​ ಜೊತೆ ವಿದೇಶಕ್ಕೆ ತೆರಳಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಹೋಗುವಾಗ ಅವರ ಜೊತೆ ಶಿಖರ್​ ಪಹರಿಯಾ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​; ಖರೀದಿಸಿದ ಹೀರೋ ಯಾರು?
Image
ಡಿಗ್ಲಾಮ್ ಲುಕ್​ನಲ್ಲಿ ನಟಿ ಜಾನ್ವಿ ಕಪೂರ್​; ಆದರೆ, ಈ ನಟಿ ನೀವಂದುಕೊಂಡ ಹಾಗಲ್ಲ
Image
Janhvi Kapoor: ಜಾನ್ವಿ ಕಪೂರ್​ ಫೋಟೋ ವೈರಲ್​; ಶ್ರೀದೇವಿ ಪುತ್ರಿಯ ಅಂದ-ಚಂದ ಕಂಡು ವಾವ್​ ಎಂದ ಅಭಿಮಾನಿಗಳು
Image
Janhvi Kapoor: ಪ್ರಕೃತಿಯ ಮಡಿಲಿನಲ್ಲಿ ಜಾನ್ವಿ ಕಪೂರ್ ವಿಹಾರ; ಫೋಟೋಗಳಿಗೆ ಮಸ್ತ್​ ಪೋಸ್​​

ಇದನ್ನೂ ಓದಿ: Janhvi Kapoor: ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ ಜಾನ್ವಿ ಕಪೂರ್; ಬಾಯ್​ಫ್ರೆಂಡ್​ನಿಂದ ಸಿಕ್ತು ಲೈಕ್

ಮಹಾರಾಷ್ಟ್ರ ಮಾಜಿ ಸಿಎಂ ಸುಶೀಲ್ ಕುಮಾರ್​ ಶಿಂಧೆ ಅವರ ಮೊಮ್ಮಗನಾಗಿರುವ ಶಿಖರ್​ ಪಹರಿಯಾ ಜೊತೆ ಜಾನ್ವಿ ಕಪೂರ್​ ಡೇಟಿಂಗ್​ ಮಾಡುತ್ತಿದ್ದಾರೆ. ಅನೇಕ ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದುಂಟು. ಆದರೆ, ಎಂದಿಗೂ ಬಹಿರಂಗವಾಗಿ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿಲ್ಲ. ಇಂದಲ್ಲ ನಾಳೆ ಈ ವಿಷಯದ ಬಗ್ಗೆ ಅವರು ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ: Sridevi: ‘ಈಗಲೂ ನಿಮಗಾಗಿ ಎಲ್ಲೆಡೆ ಹುಡುಕುವೆ..’: ಶ್ರೀದೇವಿ ಪುಣ್ಯ ಸ್ಮರಣೆ ಹೊಸ್ತಿಲಲ್ಲಿ ಜಾನ್ವಿ ಭಾವುಕ ಮಾತು

ಜಾನ್ವಿ ಕಪೂರ್​ ಮತ್ತು ಶಿಖರ್​ ಪಹರಿಯಾ ನಡುವಿನ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಇದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಒಪ್ಪಿಗೆ ಇರುವುದರಿಂದಲೇ ಜಾನ್ವಿ ಕಪೂರ್​ ಅವರ ಕುಟುಂಬದವರೊಂದಿಗೆ ಶಿಖರ್​ ಪಹಾರಿಯಾ ಟ್ರಿಪ್​ ತೆರಳಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಅಳಿಯನನ್ನು ಕರೆದುಕೊಂಡು ಬೋನಿ ಕಪೂರ್ ಟ್ರಿಪ್​ ಮಾಡುತ್ತಿದ್ದಾರೆ’ ಎಂಬ ಕಮೆಂಟ್​ಗಳು ಬಂದಿವೆ.

ಸಿನಿಮಾ ವಿಚಾರಕ್ಕೆ ಬರೋದಾದರೆ, ಜಾನ್ವಿ ಕಪೂರ್​ ನಟನೆಯ ‘ಮಿಲಿ’ ಮತ್ತು ‘ಗುಡ್​ ಲಕ್​ ಜರ್ರಿ’ ಚಿತ್ರಗಳು 2022ರಲ್ಲಿ ಬಿಡುಗಡೆ ಆಗಿದ್ದವು. ಆದರೆ ಯಶಸ್ಸು ಸಿಕ್ಕಿರಲಿಲ್ಲ. ಪ್ರಸ್ತುತ ‘ಬವಾಲ್​’ ಮತ್ತು ‘ಮಿಸ್ಟರ್​ ಆ್ಯಂಡ್​ ಮಿಸಸ್​ ಮಾಹಿ’ ಚಿತ್ರಗಳಲ್ಲಿ ಜಾನ್ವಿ ಕಪೂರ್​ ನಟಿಸುತ್ತಿದ್ದಾರೆ. 2023ರಲ್ಲೇ ಈ ಸಿನಿಮಾಗಳು ಬಿಡುಗಡೆ ಆಗಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ