44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​; ಖರೀದಿಸಿದ ಹೀರೋ ಯಾರು?

Janhvi Kapoor: 2020ರಲ್ಲಿ 39 ಕೋಟಿ ರೂಪಾಯಿಗೆ ಖರೀದಿಸಿದ್ದ ಪ್ರಾಪರ್ಟಿಯನ್ನು ಜಾನ್ವಿ ಕಪೂರ್ ಅವರು ಈಗ 44 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆ ಮೂಲಕ ಅವರು 5 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ.

44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​; ಖರೀದಿಸಿದ ಹೀರೋ ಯಾರು?
ಜಾನ್ವಿ ಕಪೂರ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 31, 2022 | 2:30 PM

ನಟಿ ಜಾನ್ವಿ ಕಪೂರ್​ (Janhvi Kapoor) ಅವರು ಒಂದಿಲ್ಲೊಂದು ಕಾರಣಕ್ಕೆ ಪ್ರತಿ ದಿನ ಸುದ್ದಿ ಆಗುತ್ತಾರೆ. ಸಿನಿಮಾಗಿಂತಲೂ ಹೆಚ್ಚಾಗಿ ಅವರ ಖಾಸಗಿ ಜೀವನದ ವಿಷಯಗಳೇ ಹೈಲೈಟ್​ ಆಗುತ್ತವೆ. ಈಗ ಅವರು ಮನೆ ಮಾರಿಕೊಂಡಿರುವ ಬಗ್ಗೆ ಹಲವೆಡೆ ವರದಿ ಆಗಿದೆ. ಬರೋಬ್ಬರಿ 44 ಕೋಟಿ ರೂಪಾಯಿಗೆ ಅವರು ಮುಂಬೈನ ಅಪಾರ್ಟ್​ಮೆಂಟ್​ (Apartment) ಫ್ಲಾಟ್​ಗಳನ್ನು ಮಾರಿದ್ದಾರೆ. ಬಾಲಿವುಡ್​ನ ಖ್ಯಾತ ನಟ ರಾಜ್​ಕುಮಾರ್​ ರಾವ್​ (Rajkummar Rao) ಅವರು ಇದನ್ನು ಖರೀದಿಸಿದ್ದಾರೆ. ಸದ್ಯ ಬಿ-ಟೌನ್​ನಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಸೆಲೆಬ್ರಿಟಿ ಕಿಡ್​ ಎಂಬ ಕಾರಣಕ್ಕೆ ಜಾನ್ವಿ ಕಪೂರ್​ ಅವರಿಗೆ ಹಲವು ಅವಕಾಶಗಳು ಬರುತ್ತಿವೆ. ಒಳ್ಳೆಯ ಸಂಭಾವನೆಯೂ ಸಿಗುತ್ತಿದೆ. ಈ ಸಂದರ್ಭದಲ್ಲಿ ಅವರು ಮನೆ ಮಾರಿಕೊಂಡಿದ್ದರು ಯಾಕೆ ಎಂಬ ಕೌತುಕದ ಪ್ರಶ್ನೆ ಮೂಡಿದೆ.

2020ರಲ್ಲಿ ಜಾನ್ವಿ ಕಪೂರ್​ ಅವರು ಜುಹೂನಲ್ಲಿ ಇರುವ ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ 14, 15 ಮತ್ತು 16ನೇ ಫ್ಲೋರ್​ನಲ್ಲಿ ಇರುವ ಫ್ಲಾಟ್​ಗಳನ್ನು ಖರೀದಿಸಿದ್ದರು. ಆಗ ಅವರು 39 ಕೋಟಿ ರೂಪಾಯಿ ನೀಡಿದ್ದರು. ಆರು ಪಾರ್ಕಿಂಗ್ ಸ್ಲಾಟ್​ಗಳನ್ನು ಒಳಗೊಂಡಿರುವ ಈ ಪ್ರಾಪರ್ಟಿಗೆ ಈಗ ಸಖತ್​ ಬೇಡಿಕೆ ಇದೆ. ಇದನ್ನು 44 ಕೋಟಿ ರೂಪಾಯಿಗೆ ಮಾರಾಟ ಮಾಡುವ ಮೂಲಕ ಜಾನ್ವಿ ಕಪೂರ್​ ಅವರು 5 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಈ ವರ್ಷ ಮಾರ್ಚ್​ 31ಕ್ಕೆ ಜಾನ್ವಿ ಕಪೂರ್​ ಮತ್ತು ರಾಜ್​ಕುಮಾರ್​ ರಾವ್​ ನಡುವೆ ಡೀಲ್​ ಕುದುರಿತ್ತು. ಜುಲೈ 21ಕ್ಕೆ ರಿಜಿಸ್ಟ್ರೇಷನ್​ ಆಗಿದೆ. ರಾಜ್​ಕುಮಾರ್​ ರಾವ್​ ಅವರು ಬರೋಬ್ಬರಿ 2.19 ಕೋಟಿ ರೂಪಾಯಿ ಸ್ಟಾಂಪ್​ ಡ್ಯೂಟಿ ಪಾವತಿಸಿದ್ದಾರೆ. ಈ ಆಸ್ತಿ ಖರೀದಿ ಮಾಡುವ ಮೂಲಕ ರಾಜ್​ಕುಮಾರ್​ ಮತ್ತು ಪತ್ರಲೇಖ ದಂಪತಿ ಜುಹೂನಲ್ಲಿ ಮನೆ ಮಾಡಿದಂತಾಗಿದೆ.

ಇದನ್ನೂ ಓದಿ
Image
Janhvi Kapoor: ‘ಅಮ್ಮನ ಒಳ್ಳೆಯ ಬುದ್ಧಿ ಮಗಳಿಗೆ ಯಾಕಿಲ್ಲ?’: ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ವರ್ತನೆಗೆ ನೆಟ್ಟಿಗರು ಗರಂ
Image
ಡಿಗ್ಲಾಮ್ ಲುಕ್​ನಲ್ಲಿ ನಟಿ ಜಾನ್ವಿ ಕಪೂರ್​; ಆದರೆ, ಈ ನಟಿ ನೀವಂದುಕೊಂಡ ಹಾಗಲ್ಲ
Image
Janhvi Kapoor: ಜಾನ್ವಿ ಕಪೂರ್​ ಫೋಟೋ ವೈರಲ್​; ಶ್ರೀದೇವಿ ಪುತ್ರಿಯ ಅಂದ-ಚಂದ ಕಂಡು ವಾವ್​ ಎಂದ ಅಭಿಮಾನಿಗಳು
Image
ದಿನದಿನಕ್ಕೂ ಹೆಚ್ಚುತ್ತಿದೆ ಜಾನ್ವಿ ಕಪೂರ್​ ಗ್ಲಾಮರ್​; ಫೋಟೋ ಕಂಡು ಟ್ರೋಲ್ ಮಾಡಿದ ನೆಟ್ಟಿಗರು

ಬಾಲಿವುಡ್​ನ ಬಹುತೇಕ ಸ್ಟಾರ್​ ನಟ-ನಟಿಯರು, ತಂತ್ರಜ್ಞರು ಜುಹೂ ಮತ್ತು ಬಾಂದ್ರಾದಲ್ಲಿ ವಾಸಿಸುತ್ತಾರೆ. ಈ ಪ್ರತಿಷ್ಠಿತ ಏರಿಯಾಗಳಲ್ಲಿ ಮನೆ ಖರೀದಿ ಮಾಡಬೇಕು ಎಂಬುದು ಎಲ್ಲರ ಆಸೆ ಆಗಿರುತ್ತದೆ. ಅಂಥ ಆಸೆಯನ್ನು ರಾಜ್​ಕುಮಾರ್​ ರಾವ್​ ಈಡೇರಿಸಿಕೊಂಡಿದ್ದಾರೆ. ಈ ವರ್ಷ ತೆರೆಕಂಡ ‘ಬದಾಯಿ ದೋ’ ಸಿನಿಮಾದಿಂದ ರಾಜ್​ಕುಮಾರ್​ ರಾವ್​ ಗಮನ ಸೆಳೆದಿದ್ದಾರೆ. ‘ಭೀಡ್​’, ‘ಮೋನಿಕಾ ಓ ಮೈ ಡಾರ್ಲಿಂಗ್’​, ‘ಮಿಸ್ಟರ್​ ಆ್ಯಂಡ್​ ಮಿಸಸ್​ ಮಾಹಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ