Janhvi Kapoor: ‘ಅಮ್ಮನ ಒಳ್ಳೆಯ ಬುದ್ಧಿ ಮಗಳಿಗೆ ಯಾಕಿಲ್ಲ?’: ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ವರ್ತನೆಗೆ ನೆಟ್ಟಿಗರು ಗರಂ

Janhvi Kapoor | Good Luck Jerry: ‘ಜಾನ್ವಿ ಕಪೂರ್​ ಅವರು ನಡೆದುಕೊಂಡಿರುವ ರೀತಿ ವೃತ್ತಿಪರವಾಗಿಲ್ಲ. ಅವರ ತುಂಬ ಅಹಂಕಾರದಿಂದ ವರ್ತಿಸಿದ್ದಾರೆ’ ಎಂದು ಜನರು ಟೀಕೆ ಮಾಡುತ್ತಿದ್ದಾರೆ.

Janhvi Kapoor: ‘ಅಮ್ಮನ ಒಳ್ಳೆಯ ಬುದ್ಧಿ ಮಗಳಿಗೆ ಯಾಕಿಲ್ಲ?’: ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ವರ್ತನೆಗೆ ನೆಟ್ಟಿಗರು ಗರಂ
ಜಾನ್ವಿ ಕಪೂರ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 29, 2022 | 10:48 AM

ಬಾಲಿವುಡ್​ ನಟಿ ಜಾನ್ವಿ ಕಪೂರ್ (Janhvi Kapoor)​ ಅವರು ಈವರೆಗೂ ಮಾಡಿರುವುದು ಮೂರು ಮತ್ತೊಂದು ಸಿನಿಮಾ ಮಾತ್ರ. ಆದರೂ ಅವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿದೆ. ಶ್ರೀದೇವಿ (Sridevi) ಮಗಳು ಎಂಬ ಕಾರಣಕ್ಕೆ ಅವರ ಮೇಲೆ ಜನರು ಹೆಚ್ಚು ಗಮನ ಹರಿಸುತ್ತಾರೆ. ಜಾನ್ವಿ ಕಪೂರ್​ ಮಾಡುವ ಪ್ರತಿ ಕೆಲಸವೂ ಚರ್ಚೆಗೆ ಒಳಗಾಗುತ್ತದೆ. ಅನೇಕ ಬಾರಿ ಅವರು ಟ್ರೋಲ್​ (Troll) ಆದ ಉದಾಹರಣೆಯೂ ಇದೆ. ಈಗ ಮತ್ತೊಂದು ವಿಚಾರಕ್ಕೆ ಅವರನ್ನು ಟೀಕೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ, ಅಮ್ಮನ ಜೊತೆಗೆ ಹೋಲಿಕೆ ಮಾಡಲಾಗುತ್ತಿದೆ. ಜಾನ್ವಿ ಕಪೂರ್​ ಅಭಿನಯಿಸಿರುವ ‘ಗುಡ್​ ಲಕ್​ ಜೆರ್ರಿ’ ಸಿನಿಮಾ ಒಟಿಟಿಯಲ್ಲಿ ಇಂದು (ಜುಲೈ 29) ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿಯೇ ಅವರು ಟ್ರೋಲ್​ಗೆ ಒಳಗಾಗಿದ್ದಾರೆ. ಕಾರಣ ಏನು? ಇಲ್ಲಿದೆ ವಿವರ..

‘ಗುಡ್​ ಲಕ್​ ಜೆರ್ರಿ’ ಸಿನಿಮಾದ ಪ್ರಚಾರದ ಸಲುವಾಗಿ ಜಾನ್ವಿ ಕಪೂರ್​ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಪತ್ರಕರ್ತೆಯೊಬ್ಬರ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಗಮನ ನೀಡಿಲ್ಲ ಎಂಬ ಕಾರಣಕ್ಕೆ ಟೀಕೆ ಎದುರಾಗಿದೆ. ಅನೇಕ ಬಾರಿ ಪ್ರಶ್ನೆ ಕೇಳಿದರೂ ಕೂಡ ಅದನ್ನು ಜಾನ್ವಿ ನಿರ್ಲಕ್ಷ್ಯ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಅದನ್ನು ಕಂಡು ನೆಟ್ಟಿಗರು ಗರಂ ಆಗಿದ್ದಾರೆ.

‘ನಟಿ ಶ್ರೀದೇವಿ ಅವರು ವರ್ಷಕ್ಕೆ ಹಲವಾರು ಸಿನಿಮಾಗಳನ್ನು ಮಾಡುತ್ತಿದ್ದರು. ಜಾನ್ವಿಗಿಂತಲೂ ಅವರು 10 ಪಟ್ಟು ಹೆಚ್ಚು ಬ್ಯುಸಿ ಆಗಿದ್ದರು. ಆದರೆ ಎಂದಿಗೂ ಜಾನ್ವಿಯ ರೀತಿ ಅವರು ವರ್ತಿಸಿರಲಿಲ್ಲ. ಅಮ್ಮನಿಗೆ ಇದ್ದ ಒಳ್ಳೆಯ ಬುದ್ಧಿ ಮಗಳಿಗೆ ಯಾಕಿಲ್ಲ’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ
Image
ಡಿಗ್ಲಾಮ್ ಲುಕ್​ನಲ್ಲಿ ನಟಿ ಜಾನ್ವಿ ಕಪೂರ್​; ಆದರೆ, ಈ ನಟಿ ನೀವಂದುಕೊಂಡ ಹಾಗಲ್ಲ
Image
Janhvi Kapoor: ಪ್ರತಿ ದಿನ ಫೋಟೋಶೂಟ್​ ಮಾಡಿಸಿ ಮಿಂಚುತ್ತಿರುವ ಜಾನ್ವಿ ಕಪೂರ್​; ಇಲ್ಲಿವೆ ಹೊಸ ಫೋಟೋಗಳು
Image
Janhvi Kapoor: ಜಾನ್ವಿ ಕಪೂರ್​ ಫೋಟೋ ವೈರಲ್​; ಶ್ರೀದೇವಿ ಪುತ್ರಿಯ ಅಂದ-ಚಂದ ಕಂಡು ವಾವ್​ ಎಂದ ಅಭಿಮಾನಿಗಳು
Image
Janhvi Kapoor: ಪ್ರಕೃತಿಯ ಮಡಿಲಿನಲ್ಲಿ ಜಾನ್ವಿ ಕಪೂರ್ ವಿಹಾರ; ಫೋಟೋಗಳಿಗೆ ಮಸ್ತ್​ ಪೋಸ್​​

ಜಾನ್ವಿ ಕಪೂರ್​ ಅವರು ನಡೆದುಕೊಂಡಿರುವ ರೀತಿ ವೃತ್ತಿಪರವಾಗಿಲ್ಲ. ಅವರ ತುಂಬ ಅಹಂಕಾರದಿಂದ ವರ್ತಿಸಿದ್ದಾರೆ ಎಂದು ಜನರು ಟೀಕೆ ಮಾಡುತ್ತಿದ್ದಾರೆ. ನೆಪೋಟಿಸಂ ಫಲಾನುಭವಿ ಎಂಬ ಕಾರಣದಿಂದಲೂ ಜಾನ್ವಿ ಅವರನ್ನು ಟಾರ್ಗೆಟ್​ ಮಾಡುತ್ತಾರೆ. ಈ ಎಲ್ಲ ನೆಗೆಟಿವ್​ ಅಂಶಗಳ ಕಡೆಗೆ ಜಾನ್ವಿ ಹೆಚ್ಚು ಗಮನ ನೀಡಿಲ್ಲ.

ತಮಿಳಿನಲ್ಲಿ ನಯನತಾರಾ ನಟಿಸಿದ ‘ಕೊಲಮಾವು ಕೋಕಿಲ’ ಸಿನಿಮಾದ ಹಿಂದಿ ರಿಮೇಕ್​ ಆಗಿ ‘ಗುಡ್​ ಲಕ್​ ಜೆರ್ರಿ’ ಚಿತ್ರ ಮೂಡಿಬಂದಿದೆ. ಡಿ​ಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ಈ ಸಿನಿಮಾ ರಿಲೀಸ್​ ಆಗಿದೆ. ಇದಲ್ಲದೇ, ‘ಮಿಲಿ’, ‘ಮಿಸ್ಟರ್​ ಆ್ಯಂಡ್​ ಮಿಸಸ್​ ಮಾಹಿ’, ‘ಬವಾಲ್​’ ಮುಂತಾದ ಚಿತ್ರಗಳು ಜಾನ್ವಿ ಕಪೂರ್ ಕೈಯಲ್ಲಿವೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ