‘ವಾಟ್ ಲಗಾ ದೇಂಗೆ..’ ಎಂದು ಮತ್ತೆ ಅಬ್ಬರಿಸಿದ ವಿಜಯ್ ದೇವರಕೊಂಡ
ಸ್ಲಂ ಹುಡುಗನೋರ್ವ ವಿಶ್ವ ಬಾಕ್ಸಿಂಗ್ನಲ್ಲಿ ಮಿಂಚುವ ಕಥೆಯನ್ನು ‘ಲೈಗರ್’ ಸಿನಿಮಾ ಹೇಳಲಿದೆ ಎಂಬುದಕ್ಕೆ ಈಗಾಗಲೇ ರಿಲೀಸ್ ಆದ ಟೀಸರ್ ಹಾಗೂ ಟ್ರೇಲರ್ ಸಾಕ್ಷ್ಯ ನೀಡಿದೆ. ಈಗ ರಿಲೀಸ್ ಆಗಿರುವ ಸಾಂಗ್ ಕೂಡ ಅದೇ ರೀತಿಯಲ್ಲಿ ಇದೆ.
ನಟ ವಿಜಯ್ ದೇವರಕೊಂಡ (Vijay Devarakonda) ಅವರ ‘ಲೈಗರ್’ ಸಿನಿಮಾ (Liger Movie) ರಿಲೀಸ್ಗೂ ಮೊದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿತ್ತು. ಈಗ ಚಿತ್ರತಂಡ ಹೊಸ ಸಾಂಗ್ ರಿಲೀಸ್ ಮಾಡಿದೆ. ‘ವಾಟ್ ಲಗಾ ದೇಂಗೆ..’ ಎಂಬ ಶೀರ್ಷಿಕೆ ಅಡಿಯಲ್ಲಿ ಮೂಡಿ ಬಂದ ಈ ಹಾಡು ಸಾಕಷ್ಟು ಸದ್ದು ಮಾಡುತ್ತಿದೆ. ಈ ಹಾಡು ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಸ್ಲಂ ಹುಡುಗನೋರ್ವ ವಿಶ್ವ ಬಾಕ್ಸಿಂಗ್ನಲ್ಲಿ ಮಿಂಚುವ ಕಥೆಯನ್ನು ‘ಲೈಗರ್’ ಸಿನಿಮಾ ಹೇಳಲಿದೆ ಎಂಬುದಕ್ಕೆ ಈಗಾಗಲೇ ರಿಲೀಸ್ ಆದ ಟೀಸರ್ ಹಾಗೂ ಟ್ರೇಲರ್ ಸಾಕ್ಷ್ಯ ನೀಡಿದೆ. ಈಗ ರಿಲೀಸ್ ಆಗಿರುವ ಸಾಂಗ್ ಕೂಡ ಅದೇ ರೀತಿಯಲ್ಲಿ ಇದೆ. ಈ ಹಾಡು ಸಿನಿಮಾದ ಕಥೆಯ ಸಾರವನ್ನು ಪ್ರೇಕ್ಷಕರಿಗೆ ಬಿಟ್ಟುಕೊಟ್ಟಿದೆ. ಈ ತಿಂಗಳ ಆರಂಭದಲ್ಲಿ ರಿಲೀಸ್ ಆದ ‘ಅಕ್ಡಿ ಪಕ್ಡಿ..’ ಹಾಡು ಸೂಪರ್ ಹಿಟ್ ಆಯಿತು. ಪಾರ್ಟಿ ಸಾಂಗ್ ರೀತಿಯಲ್ಲಿ ಬಂದ ಈ ಸಾಂಗ್ಅನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಈಗ ಬಿಡುಗಡೆ ಆಗಿರುವ ‘ಲೈಗರ್’ನ ‘ವಾಟ್ ಲಗಾ ದೇಂಗೆ..’ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ.
‘ಲೈಗರ್’ ವಿಜಯ್ ದೇವರಕೊಂಡ ಅವರ ಮೊದಲ ಹಿಂದಿ ಸಿನಿಮಾ. ಸಾಮಾನ್ಯವಾಗಿ ಒಂದು ಚಿತ್ರರಂಗದಿಂದ ಮತ್ತೊಂದು ಚಿತ್ರರಂಗಕ್ಕೆ ಕಾಲಿಡಬೇಕು ಎಂದರೆ ಸಾಕಷ್ಟು ಸಿದ್ಧತೆ ಬೇಕು. ಅದೇ ರೀತಿ ವಿಜಯ್ ದೇವರಕೊಂಡ ಕೂಡ ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ದೇಹವನ್ನು ಸಾಕಷ್ಟು ಹುರಿಗೊಳಿಸಿಕೊಂಡಿದ್ದಾರೆ. ಇಷ್ಟು ದಿನ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ದೇವರಕೊಂಡ ಅವರು ಈ ಚಿತ್ರದಲ್ಲಿ ಭಿನ್ನ ಗೆಟಪ್ ತೊಟ್ಟಿದ್ದಾರೆ.
ಇದನ್ನೂ ಓದಿ: ಧೂಳೆಬ್ಬಿಸಿದ ವಿಜಯ್ ದೇವರಕೊಂಡ ಹೊಸ ಅವತಾರ; ಇಲ್ಲಿದೆ ‘ಲೈಗರ್’ ಚಿತ್ರದ ಪೋಸ್ಟರ್
ವಿಜಯ್ ದೇವರಕೊಂಡ ಅವರಿಗೆ ಜೊತೆಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ. ಹೀರೋನ ತಾಯಿ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿದ್ದಾರೆ. ಬಾಕ್ಸರ್ ಲೋಕದ ದಿಗ್ಗಜ ಮೈಕ್ ಟೈಸನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಪಾತ್ರ ಯಾವ ರೀತಿ ಇರಲಿದೆ ಎಂಬುದು ಸದ್ಯದ ಕುತೂಹಲ. ಆಗಸ್ಟ್ 25ರಂದು ಈ ಸಿನಿಮಾ ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ.