AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಕ್ರಾಸ್ ಬ್ರೀಡ್’; ಆ್ಯಕ್ಷನ್​ ಮೂಲಕ ‘ಲೈಗರ್’ ಟ್ರೇಲರ್​ನಲ್ಲಿ ಮಿಂಚಿದ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಅವರು ರೊಮ್ಯಾಂಟಿಕ್ ಪಾತ್ರಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಆದರೆ, ‘ಲೈಗರ್’ ಚಿತ್ರದಲ್ಲಿ ಅವರು ಬೇರೆಯದೇ ಅವತಾರ ತಾಳಿದ್ದಾರೆ.

‘ಇದು ಕ್ರಾಸ್ ಬ್ರೀಡ್’; ಆ್ಯಕ್ಷನ್​ ಮೂಲಕ ‘ಲೈಗರ್’ ಟ್ರೇಲರ್​ನಲ್ಲಿ ಮಿಂಚಿದ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ
TV9 Web
| Edited By: |

Updated on:Jul 21, 2022 | 2:54 PM

Share

ವಿಜಯ್ ದೇವರಕೊಂಡ ನಟನೆಯ ‘ಲೈಗರ್​’ ಸಿನಿಮಾದ (Liger Movie) ಟ್ರೇಲರ್​ ಇಂದು (ಜುಲೈ 21) ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ (Vijay Devarakonda) ಅವರು ಸಖತ್ ಮಾಸ್ ಅವತಾರ ತಾಳಿದ್ದಾರೆ. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬ ಝಲಕ್ ಸಿಕ್ಕಿದೆ. ವಿಜಯ್ ದೇವರಕೊಂಡ ಅವರ ಮೇಕೋವರ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ, ರಿಲೀಸ್ ಆಗಿರುವ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಾಣುತ್ತಿದೆ. ಆಗಸ್ಟ್​ 25ರಂದು ‘ಲೈಗರ್’ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ವಿಜಯ್ ದೇವರಕೊಂಡ ಅವರು ರೊಮ್ಯಾಂಟಿಕ್ ಪಾತ್ರಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಆದರೆ, ‘ಲೈಗರ್’ ಚಿತ್ರದಲ್ಲಿ ಅವರು ಬೇರೆಯದೇ ಅವತಾರ ತಾಳಿದ್ದಾರೆ. ಅವರ ಮಾಸ್ ಅವತಾರ, ಸಿಕ್ಸ್ ಪ್ಯಾಕ್ ಬಾಡಿ, ಆ್ಯಕ್ಷನ್ ದೃಶ್ಯಗಳು ಟ್ರೇಲರ್​ನಲ್ಲಿ ಹೈಲೈಟ್ ಆಗಿದೆ. ಈ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ಹಿಂದಿ ಹಾಗೂ ತಮಿಳು ಟ್ರೇಲರ್ ಬೆಳಗ್ಗೆ 9.30ಕ್ಕೆ ರಿಲೀಸ್ ಆಗಿದ್ದು, ಸಂಜೆ ಮುಂಬೈನಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ
Image
Kushi Movie: ಸಖತ್ ‘ಖುಷಿ’ಯಲ್ಲಿದ್ದಾರೆ ವಿಜಯ್ ದೇವರಕೊಂಡ- ಸಮಂತಾ; ಏನಿದು ಸಮಾಚಾರ?
Image
ವಿಜಯ್ ದೇವರಕೊಂಡ ಬರ್ತ್​ಡೇಗೆ ವಿಶ್ ಮಾಡಲೇ ಇಲ್ಲ ರಶ್ಮಿಕಾ; ತಲೆಗೆ ಹುಳ ಬಿಟ್ಟುಕೊಂಡ ಫ್ಯಾನ್ಸ್​
Image
ವಿಜಯ್ ದೇವರಕೊಂಡ ಕಟ್ಟು ಮಸ್ತಾದ ದೇಹ ನೋಡಿ ಫ್ಯಾನ್ಸ್ ಫಿದಾ; ‘ಲೈಗರ್’ ಥೀಮ್ ರಿಲೀಸ್
Image
ಮಧ್ಯ ರಾತ್ರಿ ಸಮಂತಾಗೆ ಸರ್ಪ್ರೈಸ್​ ನೀಡಿದ ವಿಜಯ್​ ದೇವರಕೊಂಡ; ಸತ್ಯ ತಿಳಿದಾಗ ನಟಿಯ ಪ್ರತಿಕ್ರಿಯೆ ಏನು?

ಅನನ್ಯಾ ಪಾಂಡೆ ಅವರು ‘ಲೈಗರ್’ ಚಿತ್ರಕ್ಕೆ ನಾಯಕಿ. ಈ ಚಿತ್ರದಿಂದ ಅವರ ವೃತ್ತಿ ಜೀವನಕ್ಕೆ ಮೈಲೇಜ್ ಸಿಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ಕೂಡ ನಟಿಸಿದ್ದಾರೆ. ಅವರು ಟ್ರೇಲರ್​ನ ಅಂತ್ಯದಲ್ಲಿ ಬರುತ್ತಾರೆ. ಅವರ ಪಾತ್ರ ಏನು ಎಂಬುದು ಪೂರ್ತಿಯಾಗಿ ರಿವೀಲ್ ಆಗಿಲ್ಲ. ರಮ್ಯಾ ಕೃಷ್ಣ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಟ್ರೇಲರ್ ಲಾಂಚ್​​ಗೆ ಪ್ರಭಾಸ್ ಅತಿಥಿ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇಡೀ ಸಿನಿಮಾ ಸಖತ್ ಅದ್ದೂರಿಯಾಗಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಈ ಚಿತ್ರಕ್ಕೆ ಪುರಿ ಜಗನಾಥ್ ಅವರು ನಿರ್ದೇಶನ ಮಾಡಿದ್ದಾರೆ. ಅಜೀಮ್ ದಯಾನಿ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ‘ಅಕ್ಡಿ ಪಕ್ಡಿ..’ ಹಾಡು ಗಮನ ಸೆಳೆದಿದೆ. ಈಗ ಟ್ರೇಲರ್ ಮೂಲಕ ಚಿತ್ರದ ಮೈಲೇಜ್ ಹೆಚ್ಚಿಸಲಾಗಿದೆ. ಕರಣ್ ಜೋಹರ್, ಪುರಿ ಜಗನಾಥ್ ಮೊದಲಾದವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Published On - 9:58 am, Thu, 21 July 22

Follow Us
TV9 Web
TV9 Web

TV9 Kannada

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್