‘ಅಕ್ಡಿ ಪಕ್ಡಿ’ ಸಾಂಗ್ ಮೂಲಕ ಗಮನ ಸೆಳೆದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ

‘ಅಕ್ಡಿ ಪಕ್ಡಿ’ ಹೆಸರಿನ ಹಾಡನ್ನು ಜುಲೈ 11ರಂದು ರಿಲೀಸ್ ಮಾಡಲಾಗಿದೆ. ಇದಕ್ಕೂ ಮೊದಲು ರಿಲೀಸ್ ಆಗಿದ್ದ ಹಾಡಿನ ಟೀಸರ್ ಸಾಕಷ್ಟು ಗಮನ ಸೆಳೆದಿತ್ತು. ಫ್ಯಾನ್ಸ್ ಹೊಸ ಹಾಡನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

‘ಅಕ್ಡಿ ಪಕ್ಡಿ’ ಸಾಂಗ್ ಮೂಲಕ ಗಮನ ಸೆಳೆದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ
ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 11, 2022 | 4:05 PM

ವಿಜಯ್ ದೇವರಕೊಂಡ (Vijay Devarakonda) ಹಾಗೂ ಅನನ್ಯಾ ಪಾಂಡೆ ನಟನೆಯ ‘ಲೈಗರ್’ ಸಿನಿಮಾ (Liger Movie) ರಿಲೀಸ್​ಗೆ ಇನ್ನು ಒಂದೂವರೆ ತಿಂಗಳು ಬಾಕಿ ಇದೆ. ಈ ಸಿನಿಮಾ ರಿಲೀಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಈಗಾಗಲೇ ಪೋಸ್ಟರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿದೆ. ಈಗ ಚಿತ್ರತಂಡ ‘ಅಕ್ಡಿ ಪಕ್ಡಿ..’ (Akdi Pakdi Song) ಹೆಸರಿನ ಸಾಂಗ್ ರಿಲೀಸ್ ಮಾಡಿದೆ. ಈ ಹಾಡನ್ನು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

ವಿಜಯ್ ದೇವರಕೊಂಡ ಅವರು ಟಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು ಗೆದ್ದು ಬೀಗಿವೆ. ಈಗ ಇದೇ ಮೊದಲ ಬಾರಿಗೆ ಅವರು ಬಾಲಿವುಡ್ ಕದ ತಟ್ಟುತ್ತಿದ್ದಾರೆ. ದಕ್ಷಿಣದಿಂದ ಹಲವು ನಟರು ಬಾಲಿವುಡ್​ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈಗ ವಿಜಯ್ ಕೂಡ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ‘ಲೈಗರ್’ ಚಿತ್ರದ ಪೋಸ್ಟರ್​ಗಳನ್ನು ನೋಡಿದರೆ ಅವರ ಸಿದ್ಧತೆ ಎಷ್ಟಿತ್ತು ಎಂಬುದು ತಿಳಿಯುತ್ತದೆ. ಈಗ ಸಿನಿಮಾದ ಹೊಸ ಸಾಂಗ್​​ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ.

ಇದನ್ನೂ ಓದಿ
Image
ಪಾರ್ಟಿ ಸಾಂಗ್ ಕೊಡೋಕೆ ರೆಡಿ ಆದ ‘ಲೈಗರ್’; ಟೀಸರ್ ಮೂಲಕ ಸಿಕ್ತು ‘ಅಕ್ಡಿ ಪಕ್ಡಿ’ ಝಲಕ್
Image
ಧೂಳೆಬ್ಬಿಸಿದ ವಿಜಯ್ ದೇವರಕೊಂಡ ಹೊಸ ಅವತಾರ; ಇಲ್ಲಿದೆ ‘ಲೈಗರ್’ ಚಿತ್ರದ ಪೋಸ್ಟರ್​
Image
Mike Tyson: ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​ ಜನ್ಮದಿನಕ್ಕೆ ವಿಶೇಷ ವಿಡಿಯೋ ಮೂಲಕ ವಿಶ್​ ಮಾಡಿದ ‘ಲೈಗರ್​’ ತಂಡ
Image
ಧೂಳೆಬ್ಬಿಸಿದ ‘ಲೈಗರ್​’ ಗ್ಲಿಂಪ್ಸ್​ ವಿಡಿಯೋ; ವಿಜಯ್​ ದೇವರಕೊಂಡಗೆ ಭಾರೀ ಮೆಚ್ಚುಗೆ

‘ಅಕ್ಡಿ ಪಕ್ಡಿ’ ಹೆಸರಿನ ಹಾಡನ್ನು ಜುಲೈ 11ರಂದು ರಿಲೀಸ್ ಮಾಡಲಾಗಿದೆ. ಇದಕ್ಕೂ ಮೊದಲು ರಿಲೀಸ್ ಆಗಿದ್ದ ಹಾಡಿನ ಟೀಸರ್ ಸಾಕಷ್ಟು ಗಮನ ಸೆಳೆದಿತ್ತು. ಇದು ಪಾರ್ಟಿ ಸಾಂಗ್ ಇರಬಹುದು ಎಂದು ಫ್ಯಾನ್ಸ್ ಊಹಿಸಿದ್ದರು. ಅವರ ಊಹೆ ನಿಜವಾಗಿದೆ. ಫ್ಯಾನ್ಸ್ ಈ ಹಾಡನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪಾರ್ಟಿ ಸಾಂಗ್ ಕೊಡೋಕೆ ರೆಡಿ ಆದ ‘ಲೈಗರ್’; ಟೀಸರ್ ಮೂಲಕ ಸಿಕ್ತು ‘ಅಕ್ಡಿ ಪಕ್ಡಿ’ ಝಲಕ್

‘ಲೈಗರ್’ ಚಿತ್ರದ ನಿರ್ಮಾಣಕ್ಕಾಗಿ ಬಾಲಿವುಡ್ ಮಂದಿ ಹಾಗೂ ಟಾಲಿವುಡ್​ ಮಂದಿ ಕೈ ಜೋಡಿಸಿದ್ದಾರೆ. ಖ್ಯಾತ ನಿರ್ಮಾಪಕ ಕರಣ್​ ಜೋಹರ್​, ಪುರಿ ಜಗನ್ನಾಥ್​, ಚಾರ್ಮಿ ಕೌರ್​ ಹಾಗೂ ಅಪೂರ್ವ ಮೆಹ್ತಾ ಅವರು ‘ಲೈಗರ್​’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ಬಣ್ಣ ಹಚ್ಚಿದ್ದಾರೆ. ಬಾಕ್ಸಿಂಗ್ ಲೋಕದಲ್ಲಿ ದೊಡ್ಡ ಹೆಸರು ಮಾಡಿದ ಮೈಕ್ ಟೈಸನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್​ 25ರಂದು ‘ಲೈಗರ್​’ ಸಿನಿಮಾ ಬಿಡುಗಡೆ ಆಗಲಿದೆ.  ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ರಿಲೀಸ್​ ಆಗಲಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ