AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಟಿ ಸಾಂಗ್ ಕೊಡೋಕೆ ರೆಡಿ ಆದ ‘ಲೈಗರ್’; ಟೀಸರ್ ಮೂಲಕ ಸಿಕ್ತು ‘ಅಕ್ಡಿ ಪಕ್ಡಿ’ ಝಲಕ್

ದೊಡ್ಡ ಬಜೆಟ್​ನ ಕಮರ್ಷಿಯಲ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಒಂದು ಪಾರ್ಟಿ ಸಾಂಗ್ ಇಡುವ ಟ್ರೆಂಡ್ ಶುರುವಾಗಿದೆ. ‘ಲೈಗರ್’ ಚಿತ್ರತಂಡ ಕೂಡ ಇದನ್ನು ಹಿಂಬಾಲಿದೆ.

ಪಾರ್ಟಿ ಸಾಂಗ್ ಕೊಡೋಕೆ ರೆಡಿ ಆದ ‘ಲೈಗರ್’; ಟೀಸರ್ ಮೂಲಕ ಸಿಕ್ತು ‘ಅಕ್ಡಿ ಪಕ್ಡಿ’ ಝಲಕ್
ಅನನ್ಯಾ-ವಿಜಯ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 08, 2022 | 5:34 PM

‘ಲೈಗರ್’ ಸಿನಿಮಾದ (Liger Movie) ಪ್ರಮೋಷನ್ ಭರ್ಜರಿಯಾಗಿ ಸಾಗುತ್ತಿದೆ. ಈ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಈಗ ಎರಡನೇ ಸಾಂಗ್ ರಿಲೀಸ್​ಗೆ ರೆಡಿ ಇದೆ. ‘ಅಕ್ಡಿ ಪಕ್ಡಿ..’ ಹೆಸರಿನ (Akdi Pakdi) ಈ ಸಾಂಗ್ ಜುಲೈ 11ರಂದು ಸಂಜೆ 4 ಗಂಟೆಗೆ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಈ ಹಾಡು ಹೇಗಿರಲಿದೆ ಎಂಬ ಝಲಕ್​ಅನ್ನು ಟೀಸರ್ ಮೂಲಕ ‘ಲೈಗರ್’ ತಂಡ ಪ್ರೇಕ್ಷಕರ ಎದುರು ಇಟ್ಟಿದೆ. ಟೀಸರ್​ ಸಖತ್​ ಕಿಕ್ ನೀಡುತ್ತಿದ್ದು, ಸಾಂಗ್​ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ದೊಡ್ಡ ಬಜೆಟ್​ನ ಕಮರ್ಷಿಯಲ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಒಂದು ಪಾರ್ಟಿ ಸಾಂಗ್ ಇಡುವ ಟ್ರೆಂಡ್ ಶುರುವಾಗಿದೆ. ಅನೇಕ ಸಿನಿಮಾ ತಂಡಗಳು ಇದನ್ನು ಫಾಲೋ ಮಾಡುತ್ತಿವೆ. ‘ಲೈಗರ್’ ಚಿತ್ರತಂಡ ಕೂಡ ಇದನ್ನು ಹಿಂಬಾಲಿಸಿದಂತಿದೆ. ಈ ಕಾರಣಕ್ಕೆ ಒಂದು ಸಖತ್ ಎನರ್ಜಿಟಿಕ್ ಪಾರ್ಟಿ ಸಾಂಗ್ ಇಟ್ಟಿದೆ. ಸಿನಿಮಾ ತೆರೆಗೆ ಬರಲು ಒಂದೂವರೆ ತಿಂಗಳು ಬಾಕಿ ಇರುವಾಗ ಈ ಹಾಡು ರಿಲೀಸ್ ಆಗುತ್ತಿದೆ.

‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್​ಗಳು ಸಾಕಷ್ಟು ನಿರೀಕ್ಷೆ ಮೂಡಿಸಿವೆ. ಈಗ ಸಿನಿಮಾದ ‘ಅಕ್ಡಿ ಪಕ್ಡಿ..’ ಹಾಡಿನ ಬಗ್ಗೆ ನಿರೀಕ್ಷೆ ಹುಟ್ಟಿಸುವಂತಹ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ಇದರಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಸಖತ್ ಮಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಪೂರ್ತಿ ಹಾಡು ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ
Image
ಧೂಳೆಬ್ಬಿಸಿದ ವಿಜಯ್ ದೇವರಕೊಂಡ ಹೊಸ ಅವತಾರ; ಇಲ್ಲಿದೆ ‘ಲೈಗರ್’ ಚಿತ್ರದ ಪೋಸ್ಟರ್​
Image
Mike Tyson: ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​ ಜನ್ಮದಿನಕ್ಕೆ ವಿಶೇಷ ವಿಡಿಯೋ ಮೂಲಕ ವಿಶ್​ ಮಾಡಿದ ‘ಲೈಗರ್​’ ತಂಡ
Image
ಧೂಳೆಬ್ಬಿಸಿದ ‘ಲೈಗರ್​’ ಗ್ಲಿಂಪ್ಸ್​ ವಿಡಿಯೋ; ವಿಜಯ್​ ದೇವರಕೊಂಡಗೆ ಭಾರೀ ಮೆಚ್ಚುಗೆ
Image
20 ಮಿಲಿಯನ್​ ವೀವ್ಸ್​, 5 ಲಕ್ಷ ಲೈಕ್ಸ್​ ಪಡೆದ ‘ಲೈಗರ್​’ ಗ್ಲಿಂಪ್ಸ್​; ವಿಜಯ್​ ದೇವರಕೊಂಡಗೆ ಫ್ಯಾನ್ಸ್​ ಉಘೇ ಉಘೇ

ಬಾಕ್ಸರ್ ಲೋಕದಲ್ಲಿ ಮೈಕ್​ ಟೈಸನ್ ಅವರು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರ ಬರ್ತ್​ಡೇ ಹಿನ್ನೆಲೆಯಲ್ಲಿ ಹೊಸ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಇದಕ್ಕೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

ಕರಣ್​ ಜೋಹರ್​, ಪುರಿ ಜಗನ್ನಾಥ್​, ಚಾರ್ಮಿ ಕೌರ್​ ಹಾಗೂ ಅಪೂರ್ವ ಮೆಹ್ತಾ ಅವರು ‘ಲೈಗರ್​’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ. ಬಾಕ್ಸಿಂಗ್ ಲೋಕದಲ್ಲಿ ದೊಡ್ಡ ಹೆಸರು ಮಾಡಿದ ಮೈಕ್ ಟೈಸನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಬಗ್ಗೆ ಸಿಕ್ತು ಎರಡೆರಡು ಅಪ್​ಡೇಟ್

ಆಗಸ್ಟ್​ 25ರಂದು ‘ಲೈಗರ್​’ ಸಿನಿಮಾ ಬಿಡುಗಡೆ ಆಗಲಿದೆ.  ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ರಿಲೀಸ್​ ಆಗಲಿದೆ. ಪ್ಯಾನ್​ ಇಂಡಿಯಾ ಹೀರೋ ಆಗಿ ಸದ್ದು ಮಾಡಲು ವಿಜಯ್​ ದೇವರಕೊಂಡ ಸಜ್ಜಾಗಿದ್ದಾರೆ. ಸದ್ಯ ಈ ಚಿತ್ರಕ್ಕೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ.

Published On - 5:34 pm, Fri, 8 July 22