‘ನಟನೆ ಬರದಿದ್ದರೂ ಪ್ರಮೋಷನ್​ಗೆ ಬರುತ್ತಾರೆ’; ಸಂದರ್ಶನದಲ್ಲಿ ಟ್ರೋಲ್ ಆದ ರಣಬೀರ್ ಕಪೂರ್ ​

ಈ ಸಂದರ್ಶನದ ವಿಶೇಷತೆ ಎಂದರೆ ಸಂದರ್ಶನ ಮಾಡುವ ವ್ಯಕ್ತಿ ರಣಬೀರ್, ಸಂದರ್ಶನಕ್ಕೆ ಒಳಗಾದ ವ್ಯಕ್ತಿಯೂ ರಣಬೀರ್. ಅಂದರೆ, ದ್ವಿಪಾತ್ರದ ರೀತಿಯಲ್ಲಿ ಈ ಸಂದರ್ಶನ ಮೂಡಿ ಬಂದಿದೆ.

‘ನಟನೆ ಬರದಿದ್ದರೂ ಪ್ರಮೋಷನ್​ಗೆ ಬರುತ್ತಾರೆ’; ಸಂದರ್ಶನದಲ್ಲಿ ಟ್ರೋಲ್ ಆದ ರಣಬೀರ್ ಕಪೂರ್ ​
ರಣಬೀರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 08, 2022 | 6:06 PM

ಸಿನಿಮಾ ಫ್ಲಾಪ್ ಆದರೂ ಅದರಲ್ಲಿ ನಟಿಸಿದ ಹೀರೋ-ಹೀರೋಯಿನ್​ಗಳು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ತಮ್ಮ ನಟನೆ ಅದ್ಭುತವಾಗಿದೆ ಎಂದು ಹೇಳಿಕೊಳ್ಳುತ್ತಾರೆ. ‘ಸಿನಿಮಾ ಚೆನ್ನಾಗಿತ್ತು ಆದರೆ, ಪ್ರೇಕ್ಷಕರು ಅದನ್ನು ಏಕೆ ಒಪ್ಪಿಕೊಳ್ಳಲಿಲ್ಲವೋ ಗೊತ್ತಿಲ್ಲ’ ಎಂದು ತೇಪೆ ಹಚ್ಚುವ ಕೆಲಸ ಮಾಡುತ್ತಾರೆ. ಆದರೆ, ರಣಬೀರ್ ಕಪೂರ್ (Ranbir Kapoor) ಹಾಗಲ್ಲ. ಅವರು ತಮ್ಮನ್ನು ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ. ಹೊಸ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ರಣಬೀರ್ ನಟನೆಯ ‘ಶಂಷೇರಾ’ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ಜುಲೈ 22ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. 2018ರಲ್ಲಿ ರಿಲೀಸ್ ಆದ ‘ಸಂಜು’ ಚಿತ್ರದ ನಂತರ ರಿಲೀಸ್ ಆಗುತ್ತಿರುವ ಅವರ ನಟನೆಯ ಮೊದಲ ಸಿನಿಮಾ ಇದು. ಈ ಚಿತ್ರದಲ್ಲಿ ರಣಬೀರ್ ಡಬಲ್ ರೋಲ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಈ ಚಿತ್ರದ ಪ್ರಮೋಷನ್​ಅನ್ನು ಭಿನ್ನ ರೀತಿಯಲ್ಲಿ ಮಾಡಲಾಗುತ್ತಿದೆ. ಯಶ್ ರಾಜ್​ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್​​​ನಲ್ಲಿ ರಣಬೀರ್ ಕಪೂರ್ ಸಂದರ್ಶನವನ್ನು ಪೋಸ್ಟ್ ಮಾಡಲಾಗಿದೆ.

ಈ ಸಂದರ್ಶನದ ವಿಶೇಷತೆ ಎಂದರೆ ಸಂದರ್ಶನ ಮಾಡುವ ವ್ಯಕ್ತಿ ರಣಬೀರ್, ಸಂದರ್ಶನಕ್ಕೆ ಒಳಗಾದ ವ್ಯಕ್ತಿಯೂ ರಣಬೀರ್. ಅಂದರೆ, ದ್ವಿಪಾತ್ರದ ರೀತಿಯಲ್ಲಿ ಈ ಸಂದರ್ಶನ ಮೂಡಿ ಬಂದಿದೆ. ಇದಕ್ಕೆ ‘ದಿ ಅದರ್ ಕಪುರ್ ಶೋ’ ಎಂದು ಹೆಸರು ಇಡಲಾಗಿದೆ. ಇದರಲ್ಲಿ ರಣಬೀರ್ ತಮ್ಮನ್ನೇ ತಾವು ಟ್ರೋಲ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
ಪ್ರೆಗ್ನೆನ್ಸಿ ಘೋಷಣೆಗೂ ಮೊದಲು ಆಲಿಯಾ ಭಟ್ ತೆಗೆದುಕೊಂಡಿದ್ರು ಒಂದು ಮಹತ್ವದ ನಿರ್ಧಾರ
Image
‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’: ವೈರಲ್​ ಆಯ್ತು ಕಾಂಡೋಮ್ ಕಂಪನಿಯ ಟ್ವೀಟ್
Image
Alia Bhatt Pregnant: ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​
Image
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ

ಇದನ್ನೂ ಓದಿ: Alia Bhatt: ಪತ್ನಿ ಆಲಿಯಾ ಗರ್ಭಿಣಿ, ಆದ್ರೆ ಬೇರೆ ನಟಿ ಜೊತೆ ಹೆಚ್ಚಿತು ರಣಬೀರ್​ ಹಾಟ್ನೆಸ್​; ಎಚ್ಚರಿಕೆ ನೀಡಿದ ಫ್ಯಾನ್ಸ್

‘ಶಂಷೇರಾ’ ಸಿನಿಮಾದ ಪ್ರಮೋಷನ್​ಗಾಗಿ ರಣಬೀರ್ ಆಗಮಿಸುತ್ತಾರೆ. ಅಲ್ಲಿ ಅವರನ್ನು ಕಾಲೆಳೆಯುವ ಪ್ರಯತ್ನ ನಡೆಯುತ್ತದೆ. ‘ಬರ್ಫಿ ಚಿತ್ರದಲ್ಲಿ ಚಾಪ್ಲಿನ್ ಕಾಪಿ ಮಾಡಿದ್ರಿ, ಜಗ್ಗಾ ಜಾಸೂಸ್​ನಲ್ಲಿ ಟಿಂಟಿನ್ ಕಾಪಿ ಮಾಡಿದ್ರಿ, ಸಂಜು ಚಿತ್ರದಲ್ಲಿ ಸಂಜಯ್ ದತ್ ಅವರನ್ನು ಅನುಕರಿಸಿದಿರಿ. ತಮಾಷಾ ಚಿತ್ರದ ಪಾತ್ರ ಯೇ ಜವಾನಿ ಹೇ ದಿವಾನಿ ಸಿನಿಮಾದ ಪಾತ್ರದ ರೀತಿಯಲ್ಲೇ ಇತ್ತು’ ಎಂದು ರಣಬೀರ್ ಅವರನ್ನು ಟೀಕೆ ಮಾಡಲಾಗಿದೆ. ಆಲಿಯಾ ಭಟ್-ರಣಬೀರ್ ಮದುವೆ ಬಗ್ಗೆಯೂ ಇಲ್ಲಿ ಟೀಕೆ ಮಾಡಲಾಯಿತು. ಸಂದರ್ಶಕರು ಕೊನೆಯಲ್ಲಿ ಎದ್ದು ಹೋಗುವಾಗ ‘ನಟನೆ ಬರದಿದ್ದರೂ ಪ್ರಮೋಷನ್​ಗೆ ಬರುತ್ತಾರೆ’ ಎಂಬ ಮಾತನ್ನು ರಣಬೀರ್​ಗೆ ಹೇಳುತ್ತಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ