‘ಮೊದಲ ಹೆಂಡತಿಯನ್ನು ನಾನು ಭೇಟಿ ಮಾಡಬೇಕು’; ಸೀಕ್ರೆಟ್ ಮದುವೆಯ ಬಗ್ಗೆ ಮಾತನಾಡಿದ ರಣಬೀರ್ ಕಪೂರ್
ಕೆಲವರು ರಣಬೀರ್ ಅವರನ್ನು ಮದುವೆ ಆಗಬೇಕು ಎನ್ನುವ ಕನಸನ್ನೂ ಕಂಡಿದ್ದರು. ಆಲಿಯಾ ಜತೆ ಅವರು ಮದುವೆ ಆದ ವಿಚಾರ ಕೇಳಿ ಕೆಲ ಲೇಡಿ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಿದೆ.
ನಟ ರಣಬೀರ್ ಕಪೂರ್ (Ranbir Kapoor) ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಆಲಿಯಾ ಭಟ್ (Alia Bhatt) ಜತೆ ಮದುವೆ ಆಗಿ ಎರಡೂವರೆ ತಿಂಗಳಿಗೆ ಈ ದಂಪತಿ ಖುಷಿ ಸುದ್ದಿ ನೀಡಿದ್ದಾರೆ. ಶೀಘ್ರವೇ ಕಪೂರ್ ಕುಟುಂಬಕ್ಕೆ ಮಗುವಿನ ಆಗಮನ ಆಗಲಿದೆ. ಈ ಖುಷಿಯ ವಿಚಾರ ಹಂಚಿಕೊಳ್ಳುವುದಕ್ಕೂ ಮೊದಲು ರಣಬೀರ್ ಕಪೂರ್ ಒಂದು ಅಚ್ಚರಿಯ ವಿಚಾರ ಹೇಳಿಕೊಂಡಿದ್ದರು. ತಮ್ಮ ಮೊದಲನೇ ಹೆಂಡತಿ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಶೀಘ್ರವೇ ಅವಳನ್ನು ಭೇಟಿ ಆಗುತ್ತೇನೆ ಎಂದು ರಣಬೀರ್ ಹೇಳಿದ್ದರು.
ರಣಬೀರ್ ಕಪೂರ್ ಸ್ಟಾರ್ ಕಿಡ್. ಜತೆಗೆ ಜನಪ್ರಿಯ ನಟ ಕೂಡ ಹೌದು. ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ದೇಶ ವಿದೇಶದಲ್ಲಿ ಅವರಿಗೆ ಫ್ಯಾನ್ಸ್ ಇದ್ದಾರೆ. ರಣಬೀರ್ ಅವರನ್ನು ಭೇಟಿ ಮಾಡಬೇಕು ಎಂಬುದು ಅನೇಕರ ಕನಸು. ಕೆಲವರು ರಣಬೀರ್ ಅವರನ್ನು ಮದುವೆ ಆಗಬೇಕು ಎನ್ನುವ ಕನಸನ್ನೂ ಕಂಡಿದ್ದರು. ಆಲಿಯಾ ಜತೆ ಅವರು ಮದುವೆ ಆದ ವಿಚಾರ ಕೇಳಿ ಕೆಲ ಲೇಡಿ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಿದೆ. ಈಗ ರಣಬೀರ್ ಅವರು ಒಂದು ಅಚ್ಚರಿಯ ಘಟನೆ ಹೇಳಿದ್ದಾರೆ. ಅಭಿಮಾನಿಯೊಬ್ಬಳು ರಣಬೀರ್ ಅವರ ಮನೆಯ ಗೇಟ್ಅನ್ನೇ ಮದುವೆ ಆಗಿದ್ದಳಂತೆ!
‘ಒಂದು ಹುಡುಗಿ ಇದ್ದಾಳೆ. ಆಕೆ ನನ್ನ ಫ್ಯಾನ್. ನಾನು ಅವಳನ್ನು ಎಂದಿಗೂ ಭೇಟಿ ಮಾಡಿಲ್ಲ. ಆದರೆ, ನಮ್ಮ ಮನೆಯ ಸೆಕ್ಯುರಿಟಿ ಗಾರ್ಡ್ ಅವಳ ಬಗ್ಗೆ ಹೇಳಿದ್ದ. ಅವಳು ಪೂಜಾರಿ ಜತೆ ನನ್ನ ಮನೆಯ ಗೇಟ್ ಬಳಿ ಬಂದಿದ್ದಳು. ಮತ್ರಪಠಣದೊಂದಿಗೆ ನಮ್ಮ ಮನೆಯ ಗೇಟ್ಅನ್ನೇ ಮದುವೆ ಆಗಿದ್ದಳು. ಗೇಟ್ಗೆ ಅರಿಶಿಣದ ಕೊಂಬಿರುವ ದಾರ ಕಟ್ಟಿದ್ದಳು. ಹೂವನ್ನು ಕೂಡ ಹಾಕಲಾಗಿತ್ತು. ನಿಜಕ್ಕೂ ಅದು ಕ್ರೇಜಿ’ ಎಂದಿದ್ದಾರೆ ರಣಬೀರ್ ಕಪೂರ್.
‘ಅವಳು ನನ್ನ ಮೊದಲ ಹೆಂಡತಿ. ಆದರೆ, ನಾನು ಅವಳನ್ನು ಎಂದಿಗೂ ಭೇಟಿ ಮಾಡಿಲ್ಲ. ಮುಂದೊಂದು ದಿನ ಅವಳನ್ನು ನಾನು ಭೇಟಿ ಮಾಡುತ್ತೇನೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ ರಣಬೀರ್ ಕಪೂರ್.
ರಣಬೀರ್ ಕಪೂರ್ ನಟನೆಯ ‘ಶಂಷೇರಾ’ ಸಿನಿಮಾ ತೆರೆಗೆ ಬರುತ್ತಿದೆ. ಜುಲೈ 22ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಟ್ರೇಲರ್ ಈಗಾಗಲೇ ನಿರೀಕ್ಷೆ ಮೂಡಿಸಿದೆ. 2018ರಲ್ಲಿ ತೆರೆಗೆ ಬಂದ ‘ಸಂಜು’ ಬಳಿಕ ರಣಬೀರ್ ಅವರ ಯಾವ ಚಿತ್ರವೂ ತೆರೆಗೆ ಬಂದಿಲ್ಲ.
ಇದನ್ನೂ ಓದಿ: ‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’: ವೈರಲ್ ಆಯ್ತು ಕಾಂಡೋಮ್ ಕಂಪನಿಯ ಟ್ವೀಟ್
ಪ್ರೆಗ್ನೆನ್ಸಿ ಘೋಷಣೆಗೂ ಮೊದಲು ಆಲಿಯಾ ಭಟ್ ತೆಗೆದುಕೊಂಡಿದ್ರು ಒಂದು ಮಹತ್ವದ ನಿರ್ಧಾರ