‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’: ವೈರಲ್​ ಆಯ್ತು ಕಾಂಡೋಮ್ ಕಂಪನಿಯ ಟ್ವೀಟ್

ಈ ಪೋಸ್ಟ್​ಗೆ ಎಲ್ಲರೂ ಶುಭಾಶಯ ತಿಳಿಸಿದ್ದರು. ಡ್ಯುರೆಕ್ಸ್ ಕಂಪನಿ ಕೂಡ ಈ ದಂಪತಿಗೆ ಶುಭಾಶಯ ತಿಳಿಸಿ ವಿಶೇಷ ಪೋಸ್ಟ್​ ಮಾಡಿದೆ.

‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’: ವೈರಲ್​ ಆಯ್ತು ಕಾಂಡೋಮ್ ಕಂಪನಿಯ ಟ್ವೀಟ್
ರಣಬೀರ್​-ಆಲಿಯಾ
TV9kannada Web Team

| Edited By: Rajesh Duggumane

Jun 27, 2022 | 8:30 PM

ನಟಿ ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor) ಮನೆಗೆ ಹೊಸ ಸದಸ್ಯನ ಆಗಮನವಾಗುತ್ತಿದೆ. ಮದುವೆ ಆಗಿ ಕೇವಲ ಎರಡೂವರೆ ತಿಂಗಳಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದೆ. ತಾವು ತಾಯಿ ಆಗುತ್ತಿರುವ ವಿಚಾರವನ್ನು ಆಲಿಯಾ ಘೋಷಿಸಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಆಲಿಯಾಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಕಡೆಯಿಂದ ಶುಭಾಶಯ ಹರಿದು ಬರುತ್ತಿದೆ. ಎಲ್ಲರೂ ಆಲಿಯಾ ಹಾಗೂ ರಣಬೀರ್ ದಂಪತಿ ಬಗ್ಗೆ ಸಂತಸದ ಮಾತುಗಳನ್ನು ಆಡುತ್ತಿದ್ದಾರೆ. ಈ ದಂಪತಿಗೆ ಕಾಂಡೋಮ್ ಕಂಪನಿ ಡ್ಯುರೆಕ್ಸ್ ಕೂಡ ಶುಭಾಶಯ ತಿಳಿಸಿದೆ. ಫನ್ನಿಯಾಗಿ ಟ್ವೀಟ್ ಮಾಡಿದೆ. ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.

ಆಲಿಯಾ ಭಟ್ ಅವರು ಇಂದು (ಜೂನ್ 27) ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಆಸ್ಪತ್ರೆಯಲ್ಲಿದ್ದಾರೆ. ರಣಬೀರ್ ಕಪೂರ್ ಕೂಡ ಆಲಿಯಾ ಜತೆ ಇದ್ದಾರೆ. ‘ಶೀಘ್ರವೇ ನಮ್ಮ ಮಗು ಬರಲಿದೆ’ ಎಂದು ಆಲಿಯಾ ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್​ಗೆ ಎಲ್ಲರೂ ಶುಭಾಶಯ ತಿಳಿಸಿದ್ದರು. ಡ್ಯುರೆಕ್ಸ್ ಕಂಪನಿ ಕೂಡ ಈ ದಂಪತಿಗೆ ಶುಭಾಶಯ ತಿಳಿಸಿ ವಿಶೇಷ ಪೋಸ್ಟ್​ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಡ್ಯುರೆಕ್ಸ್, ‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’ ಎಂದು ಬರೆದುಕೊಂಡಿದೆ. ಜತೆಗೆ ಶೀಘ್ರವೇ ತಂದೆ-ತಾಯಿ ಆಗುತ್ತಿರುವ ಈ ದಂಪತಿಗೆ ಶುಭಾಶಯ ತಿಳಿಸಿದೆ.

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಏಪ್ರಿಲ್​ 14ರಂದು ಮುಂಬೈನಲ್ಲಿ ವಿವಾಹವಾದರು. ಅವರ ದಾಂಪತ್ಯ ಜೀವನಕ್ಕೆ ಎಲ್ಲರೂ ವಿಶ್ ತಿಳಿಸಿದ್ದರು. ಈ ಸಂದರ್ಭದಲ್ಲೂ ಡ್ಯುರೆಕ್ಸ್ ಕಂಪೆನಿಯವರು ಟ್ವೀಟ್ ಒಂದನ್ನು ಮಾಡಿದ್ದರು. ‘ಪ್ರೀತಿಯ ರಣಬೀರ್ ಹಾಗೂ ಆಲಿಯಾ, ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಇಲ್ಲ ಎಂದರೆ ಫನ್​ ಇರುವುದಿಲ್ಲ’ ಎಂದು ಡ್ಯುರೆಕ್ಸ್​ನವರು ಬರೆದಿದ್ದರು.

ಡ್ಯುರೆಕ್ಸ್​​ನವರು ಈಗ ಮಾಡಿದ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಕಂಪನಿಯ ಮಾರ್ಕೆಟಿಂಗ್ ತಂತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಲ್ ಪೇಜ್​ಗಳಲ್ಲೂ ಈ ಪೋಸ್ಟ್ ಬಳಕೆ ಆಗುತ್ತಿದೆ.

ಇದನ್ನೂ ಓದಿ: ​‘ಬ್ರಹ್ಮಾಸ್ತ್ರ’ ಟ್ರೇಲರ್​ನಲ್ಲಿ ಗಮನ ಸೆಳೆದ ಪಾತ್ರವರ್ಗ; ಆಲಿಯಾ, ರಣಬೀರ್​ ಜತೆ ಬಚ್ಚನ್​, ನಾಗಾರ್ಜುನ ಮಿಂಚಿಂಗ್​

ಇದನ್ನೂ ಓದಿ

 ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada