AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ರೀತಿಯ ಸಿನಿಮಾಗಳನ್ನು ಮಾಡಿ ನಾನು ಬೇಸತ್ತು ಹೋಗಿದ್ದೀನಿ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ರಣಬೀರ್ ಕಪೂರ್

ರಣಬೀರ್ ಅವರು ಹಲವು ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಅನೇಕ ಸಿನಿಮಾಗಳು ಹಿಟ್ ಆಗಿವೆ. ಆದರೆ, ಈಗ ಅವರು ರೊಮ್ಯಾಂಟಿಕ್ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ.

‘ಆ ರೀತಿಯ ಸಿನಿಮಾಗಳನ್ನು ಮಾಡಿ ನಾನು ಬೇಸತ್ತು ಹೋಗಿದ್ದೀನಿ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ರಣಬೀರ್ ಕಪೂರ್
ರಣಬೀರ್ ಕಪೂರ್
TV9 Web
| Edited By: |

Updated on:Jun 25, 2022 | 7:56 PM

Share

ರಣಬೀರ್ ಕಪೂರ್ (Ranbir Kapoor) ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಶ್ರಮಿಸುತ್ತಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಇತ್ತೀಚಿನ ವರ್ಷಗಳಲ್ಲಿ ರಣಬೀರ್ ಆಯ್ಕೆ ಬೇರೆಯದೇ ರೀತಿಯಲ್ಲಿದೆ. ಅವರು ಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ತೆರೆಗೆ ಬರುತ್ತಿರುವ ‘ಶಂಷೇರಾ’ ಚಿತ್ರ (Shamshera Movie) ಇದಕ್ಕೆ ಹೊಸ ಉದಾಹರಣೆ. ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈಗ ರಣಬೀರ್​ ಸಿನಿಮಾ ಪಾತ್ರಗಳ ಆಯ್ಕೆಯ ಬಗ್ಗೆ ಮಾತನಾಡಿದ್ದಾರೆ.

ರಣಬೀರ್ ಅವರು ಹಲವು ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಅನೇಕ ಸಿನಿಮಾಗಳು ಹಿಟ್ ಆಗಿವೆ. ಆದರೆ, ಈಗ ಅವರು ರೊಮ್ಯಾಂಟಿಕ್ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. 2018ರಲ್ಲಿ ತೆರೆಗೆ ಬಂದ ಸಂಜಯ್ ದತ್ ಬಯೋಪಿಕ್ ‘ಸಂಜು’ ಚಿತ್ರದಲ್ಲಿ ರಣಬೀರ್ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ರಣಬೀರ್ ಅವರು ತಮ್ಮ ಆಯ್ಕೆಯನ್ನು ಬದಲಾಯಿಸಿಕೊಂಡರು.

ರಣಬೀರ್ ಅವರು ನಟಿಸುತ್ತಿರುವ ‘ಶಂಷೇರಾ’ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಡಕಾಯಿತನ ಪಾತ್ರದಲ್ಲಿ ರಣಬೀರ್ ಲುಕ್ ಫ್ಯಾನ್ಸ್​ಗೆ ಇಷ್ಟವಾಗಿದೆ. ಈ ಸಿನಿಮಾ ಹೇಗೆ ಮೂಡಿಬರಬಹುದು ಎಂಬುದು ಸದ್ಯದ ಕುತೂಹಲ. ಈಗ ರಣಬೀರ್ ಅವರು ಈ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದೇಕೆ ಎಂಬ ವಿಚಾರವನ್ನು ಅವರು ವಿವರಿಸಿದ್ದಾರೆ.

ಇದನ್ನೂ ಓದಿ
Image
ದ್ವಿಪಾತ್ರದಲ್ಲಿ ಮಿಂಚಿದ ರಣಬೀರ್ ಕಪೂರ್​; ನಿರೀಕ್ಷೆ ಹೆಚ್ಚಿಸಿದ ‘ಶಂಷೇರಾ’ ಟ್ರೇಲರ್
Image
​‘ಬ್ರಹ್ಮಾಸ್ತ್ರ’ ಟ್ರೇಲರ್​ನಲ್ಲಿ ಗಮನ ಸೆಳೆದ ಪಾತ್ರವರ್ಗ; ಆಲಿಯಾ, ರಣಬೀರ್​ ಜತೆ ಬಚ್ಚನ್​, ನಾಗಾರ್ಜುನ ಮಿಂಚಿಂಗ್​
Image
Brahmastra Trailer: ಬೆಂಕಿಯೂ ಸುಡಲಾರದ ವ್ಯಕ್ತಿಯ ಪಾತ್ರದಲ್ಲಿ ರಣಬೀರ್​ ಕಪೂರ್​; ಹೇಗಿದೆ ‘ಬ್ರಹ್ಮಾಸ್ತ್ರ’ ಟ್ರೇಲರ್​?
Image
ಆಲಿಯಾ-ರಣಬೀರ್​ ಜತೆಯಾಗಿ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಪಡೆದ ಸಂಬಳ 42 ಕೋಟಿ ರೂ; ಇದರಲ್ಲಿ ಯಾರ ಪಾಲು ಹೆಚ್ಚು?

ಆಗತಾನೇ ಚಿತ್ರರಂಗಕ್ಕೆ ಕಾಲಿಟ್ಟ ಹೀರೋಗಳು ರೊಮ್ಯಾಂಟಿಕ್ ಸಿನಿಮಾ ಮಾಡಿದರೆ ಜನರು ಮೆಚ್ಚಿಕೊಳ್ಳುತ್ತಾರೆ. ಆದರೆ, ಹಲವು ವರ್ಷ ಅನುಭವ ಇರುವ ನಟರೂ ರೊಮ್ಯಾಂಟಿಕ್ ಕಥೆ ಇರುವ ಸಿನಿಮಾಗೆ ಜೋತು ಬಿದ್ದರೆ ಜನರು ಅಷ್ಟಾಗಿ ಮೆಚ್ಚಿಕೊಳ್ಳುವುದು ಅನುಮಾನವೇ. ಇದು ರಣಬೀರ್​ಗೆ ಅರಿವಾದಂತಿದೆ. ಈ ಬಗ್ಗೆ ‘ಶಂಷೇರಾ’ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ‘ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡಿ ನಾನು ಬೇಸತ್ತು ಹೋಗಿದ್ದೀನಿ. ಹೀಗಾಗಿ, ಆ ರೀತಿಯ ಸಿನಿಮಾಗಳ ಆಯ್ಕೆಯನ್ನು ಮಾಡುತ್ತಿಲ್ಲ’ ಎಂದಿದ್ದಾರೆ ರಣಬೀರ್​.

‘ಶಂಷೇರಾ’ ಸಿನಿಮಾ ರಣಬೀರ್ ಕಪೂರ್ ಹಾಗೂ ನಿರ್ಮಾಪಕ ಯಶ್ ಚೋಪ್ರಾ ಇಬ್ಬರಿಗೂ ಬಹುಮುಖ್ಯವಾಗಿದೆ.  ನಾಲ್ಕು ವರ್ಷಗಳ ಗ್ಯಾಪ್​ನ ನಂತರ ಬರುತ್ತಿರುವುದರಿಂದ ಅವರಿಗೆ ಗೆಲ್ಲುವ ಅನಿವಾರ್ಯತೆ ಇದೆ. ಇನ್ನು, ಈ ಚಿತ್ರಕ್ಕೆ ಯಶ್​ ಚೋಪ್ರಾ ಅವರು ಬಂಡವಾಳ ಹೂಡಿದ್ದಾರೆ. ಈ ವರ್ಷ ತೆರೆಗೆ ಬಂದ ಅವರ ನಿರ್ಮಾಣದ ‘ಜಯೇಶ್​ಭಾಯ್​ ಜೋರ್ದಾರ್​’ ಹಾಗೂ ‘ಸಾಮ್ರಾಟ್ ಪೃಥ್ವಿರಾಜ್​’ ಚಿತ್ರಗಳು ಸೋತವು. ಈ ಚಿತ್ರಗಳಿಂದ ಆದಿತ್ಯ ಚೋಪ್ರಾಗೆ ದೊಡ್ಡ ನಷ್ಟ ಉಂಟಾಗಿದೆ. ‘ಶಂಷೇರಾ’ ಚಿತ್ರ 150 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಚಿತ್ರ. ಹೀಗಾಗಿ, ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ: ಭಯ ಬೀಳಿಸುವಂತಿದೆ ರಣಬೀರ್ ಕಪೂರ್ ಹೊಸ ಲುಕ್; ಯಾವ ಸಿನಿಮಾ?

ದ್ವಿಪಾತ್ರದಲ್ಲಿ ಮಿಂಚಿದ ರಣಬೀರ್ ಕಪೂರ್​; ನಿರೀಕ್ಷೆ ಹೆಚ್ಚಿಸಿದ ‘ಶಂಷೇರಾ’ ಟ್ರೇಲರ್

Published On - 7:53 pm, Sat, 25 June 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್