AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರರಂಗದಲ್ಲಿ ಶಾರುಖ್ 30 ವರ್ಷ; ಫ್ಯಾನ್ಸ್​ಗೆ ಸಿಕ್ತು ಕಿಂಗ್ ಖಾನ್​ ಕಡೆಯಿಂದ ದೊಡ್ಡ ಗಿಫ್ಟ್

‘ಶಾರುಖ್​ ಖಾನ್​ ಹೀರೋ ಆಗಿ ನಟಿಸಿದ್ದ ‘ದೀವಾನ’ ಸಿನಿಮಾ 1992ರ ಜೂನ್​ 25ರಂದು ಬಿಡುಗಡೆ ಆಯಿತು. ಇದು ಅವರ ಮೊದಲ ಸಿನಿಮಾ. ಈ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಈ ಸಿನಿಮಾದಿಂದ ಬಾಲಿವುಡ್​ನಲ್ಲಿ ಅವರಿಗೆ ಭದ್ರ ಬುನಾದಿ ಸಿಕ್ಕಿ

ಚಿತ್ರರಂಗದಲ್ಲಿ ಶಾರುಖ್ 30 ವರ್ಷ; ಫ್ಯಾನ್ಸ್​ಗೆ ಸಿಕ್ತು ಕಿಂಗ್ ಖಾನ್​ ಕಡೆಯಿಂದ ದೊಡ್ಡ ಗಿಫ್ಟ್
ಶಾರುಖ್​ ಖಾನ್
TV9 Web
| Edited By: |

Updated on: Jun 25, 2022 | 2:40 PM

Share

ಶಾರುಖ್ ಖಾನ್ (Shah Rukh Khan) ಅವರು ಚಿತ್ರರಂಗದಲ್ಲಿ ಮೂರು ದಶಕ ಕಳೆದಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದೆ ಬಾಲಿವುಡ್​ಗೆ ಬಂದು ಇಷ್ಟು ದೊಡ್ಡ ಮಟ್ಟದ ಸ್ಟಾರ್ ಪಟ್ಟ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. 30 ವರ್ಷಗಳ ಜರ್ನಿಯಲ್ಲಿ ಶಾರುಖ್ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಶಾರುಖ್​ ಖಾನ್ ಅವರ ನಟನೆಯ ‘ಪಠಾಣ್​’ ಚಿತ್ರದ (Pathan Movie) ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಮೂಲಕ ಫ್ಯಾನ್ಸ್​ಗೆ ಗುಡ್​ ನ್ಯೂಸ್ ನೀಡಲಾಗಿದೆ.

‘ಶಾರುಖ್​ ಖಾನ್​ ಹೀರೋ ಆಗಿ ನಟಿಸಿದ್ದ ‘ದೀವಾನ’ ಸಿನಿಮಾ 1992ರ ಜೂನ್​ 25ರಂದು ಬಿಡುಗಡೆ ಆಯಿತು. ಇದು ಅವರ ಮೊದಲ ಸಿನಿಮಾ. ಈ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಈ ಸಿನಿಮಾದಿಂದ ಬಾಲಿವುಡ್​ನಲ್ಲಿ ಅವರಿಗೆ ಭದ್ರ ಬುನಾದಿ ಸಿಕ್ಕಿತು. ಶಾರುಖ್ ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಲ್ಲರೂ ಅವರಿಗೆ ಶುಭ ಕೋರುತ್ತಿದ್ದಾರೆ.

ಶಾರುಖ್​ ಖಾನ್ ನಟನೆಯ ‘ಜೀರೋ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೀನಾಯವಾಗಿ ಸೋಲು ಕಂಡಿತು. ಇದಾದ ಬಳಿಕ ಶಾರುಖ್ ಸುಮಾರು ನಾಲ್ಕು ವರ್ಷಗಳ ಕಾಲ ನಟನೆಯಿಂದ ಅಂತರ ಕಾಯ್ದುಕೊಂಡರು. ಈಗ ಶಾರುಖ್​ ಒಟ್ಟೊಟ್ಟಿಗೆ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್ ನೀಡಿದ್ದಾರೆ. ಅವರು ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಪಠಾಣ್​’ ಚಿತ್ರತಂಡ ಹೊಸ ರಗಡ್ ಪೋಸ್ಟರ್ ರಿಲೀಸ್ ಮಾಡಿದೆ. ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟರ್​ ಹಂಚಿಕೊಂಡಿರುವ ಶಾರುಖ್ ಖಾನ್​, ವಿಶೇಷ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅಭಿಮಾನಿಗಳು ತೋರಿದ ಪ್ರೀತಿಗೆ ಖುಷಿ ವ್ಯಕ್ತಪಡಿಸಿದ್ದಾರೆ. ‘ಪಠಾಣ್​’ ಪೋಸ್ಟರ್​​ನಿಂದ ಫ್ಯಾನ್ಸ್​ಗೆ ದೊಡ್ಡ ಉಡುಗೊರೆ ಸಿಕ್ಕಂತೆ ಆಗಿದೆ.

‘ಪಠಾಣ್​’ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ವಾರ್​’ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ದೀಪಿಕಾ ಪಡುಕೋಣೆ ಚಿತ್ರದ ನಾಯಕಿ. ‘ಚೆನ್ನೈ ಎಕ್ಸ್​ಪ್ರೆಸ್​’ ಚಿತ್ರದಲ್ಲಿ ಶಾರುಖ್ ಹಾಗೂ ದೀಪಿಕಾ ಕೆಮಿಸ್ಟ್ರಿ ವರ್ಕ್​ ಆಗಿತ್ತು. ಜಾನ್​ ಅಬ್ರಾಹಂ ಅವರು ‘ಪಠಾಣ್​’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಶಾರುಖ್​ ಖಾನ್​ ಅವರು ಸಿನಿಮಾ ಜಗತ್ತಿಗೆ ಕಾಲಿಡುವುದಕ್ಕೂ ಮುನ್ನ ಕಿರುತೆರೆಯಲ್ಲಿ ನಟಿಸುತ್ತಿದ್ದರು. ಬಳಿಕ ಅವರಿಗೆ ದೊಡ್ಡ ಪರದೆಯಲ್ಲಿ ಬ್ರೇಕ್​ ಸಿಕ್ಕಿತು. 90ರ ದಶಕದಲ್ಲಿ ಶಾರುಖ್​ ಖಾನ್​ ಅವರು ಮೋಸ್ಟ್​ ಸೆಲೆಬ್ರೇಟೆಡ್​ ನಟನಾಗಿ ಮೆರೆದರು. 1993ರಲ್ಲಿ ‘ಬಾಜಿಗರ್​’, ‘ಡರ್​’ ಸಿನಿಮಾಗಳಲ್ಲಿನ ಅವರ ಅಭಿನಯಕ್ಕೆ ಜನರು ಫಿದಾ ಆದರು. ಈ ಎರಡೂ ಚಿತ್ರಗಳಿಗೆ ಅವರು ಫಿಲ್ಮ್​ ಫೇರ್​ ಪ್ರಶಸ್ತಿ ಪಡೆದುಕೊಂಡರು. ಮರುವರ್ಷ ತೆರೆಕಂಡ ‘ಕಭಿ ಹಾ ಕಭಿ ನಾ’ ಸಿನಿಮಾಗೂ ಶಾರುಖ್​ ಫಿಲ್ಮ್​ ಫೇರ್ ಅವಾರ್ಡ್​ ಬಾಚಿಕೊಂಡರು.

ಇದನ್ನೂ ಓದಿ: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್​ ಕಿಡ್​

 ಶಾರುಖ್​ ಖಾನ್​ ಬಾಲಿವುಡ್​ಗೆ ಕಾಲಿಟ್ಟು ಕಳೆಯಿತು 30 ವರ್ಷ; 14 ಬಾರಿ ‘ಫಿಲ್ಮ್​ಫೇರ್’​ ಪಡೆದ ಕಿಂಗ್​ ಖಾನ್

ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ