Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್​ ಕಿಡ್​

Shah Rukh Khan: ಸುಹಾನಾ ಖಾನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ತುಂಬ ಫೇಮಸ್​ ಆಗಿದ್ದಾರೆ. ಶಾರುಖ್​ ಖಾನ್​ ಪುತ್ರಿಯ ನಟನೆ ನೋಡಲು ಅಭಿಮಾನಿಗಳು ಕಾದಿದ್ದಾರೆ.

Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್​ ಕಿಡ್​
ಸುಹಾನಾ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Jun 22, 2022 | 9:17 AM

ಬಾಲಿವುಡ್​ನಲ್ಲಿ ಹೊಸ ತಲೆಮಾರಿನ ನಟ-ನಟಿಯರ ಮೇಲೆ ಫೋಕಸ್​ ಹೆಚ್ಚುತ್ತಿದೆ. ಸೈಫ್​ ಅಲಿ ಖಾನ್​, ಶಾರುಖ್​ ಖಾನ್​ (Shah Rukh Khan) ಮುಂತಾದ ಸ್ಟಾರ್​ ಕಲಾವಿದರ ಮಕ್ಕಳು ಹೋದಲ್ಲಿ ಬಂದಲ್ಲಿ ಪಾಪರಾಜಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತಿವೆ. ಶಾರುಖ್​ ಖಾನ್​ ಮಗಳು ಸುಹಾನಾ ಖಾನ್ (Suhana Khan)​ ಇನ್ನೂ ಬೆಳ್ಳಿಪರದೆಯಲ್ಲಿ ಕಾಣಿಸಿಕೊಂಡಿಲ್ಲ. ಅಷ್ಟರಲ್ಲಾಗಲೇ ಅವರಿಗೆ ಸಖತ್​ ಜನಪ್ರಿಯತೆ ಸಿಕ್ಕಿದೆ. ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಅವರನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ. ಸುಹಾನಾ ಖಾನ್​ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಿದ್ದಾರೆ. ಶ್ರೀದೇವಿ ಅವರ ಎರಡನೇ ಪುತ್ರಿ ಖುಷಿ ಕಪೂರ್ (Khushi Kapoor)​ ಜೊತೆ ಇತ್ತೀಚೆಗೆ ಸುಹಾನಾ ಅವರು ಸುತ್ತಾಡುತ್ತಿರುವುದು ಕಾಣಿಸಿದೆ. ಆಗ ಅವರು ಏನೋ ಟೆನ್ಷನ್​ನಲ್ಲಿ ಇದ್ದರು ಎಂಬುದನ್ನು ಗುರುತಿಸಿದ್ದಾರೆ ಪಾಪರಾಜಿಗಳು.

ಮುಂಬೈನ ಅಂಧೇರಿಯಲ್ಲಿ ಸುಹಾನಾ ಖಾನ್​ ಮತ್ತು ಖುಷಿ ಕಪೂರ್​ ಅವರು ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರ ಫೋಟೋ ಮತ್ತು ವಿಡಿಯೋ ಸಲುವಾಗಿ ಪಾಪರಾಜಿಗಳು ಪ್ರಯತ್ನಿಸಿದ್ದಾರೆ. ಆದರೆ ಸುಹಾನಾ ಖಾನ್​ ಒಂದು ನಿಮಿಷವೂ ಅಲ್ಲಿ ನಿಂತಿಲ್ಲ. ಪಾಪರಾಜಿಗಳು ಮನವಿ ಮಾಡಿಕೊಂಡಾಗ ಸಾಮಾನ್ಯವಾಗಿ ಎಲ್ಲ ಸೆಲೆಬ್ರಿಟಿಗಳು ಒಂದರ್ಧ ನಿಮಿಷವಾದರೂ ನಿಂತು ಪೋಸ್​ ನೀಡುತ್ತಾರೆ. ಆದರೆ ಸುಹಾನಾ ಖಾನ್​ ಗಡಿಬಿಡಿಯಲ್ಲಿ ಹೊರಟು ಹೋದರು.

ಇದನ್ನೂ ಓದಿ
Image
ಶ್ವೇತ ವರ್ಣದ ಸೀರೆಯಲ್ಲಿ ಮಿಂಚಿದ ಸುಹಾನಾ ಖಾನ್; ಶಾರುಖ್ ಪುತ್ರಿಯ ಬಾಲಿವುಡ್ ಪ್ರವೇಶ ಯಾವಾಗ?
Image
Suhana Khan: ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಶಾರುಖ್ ಪುತ್ರಿ ಸುಹಾನಾ; ಮತ್ತೆ ಹಳೆಯ ಪ್ರಶ್ನೆ ಮುಂದಿಟ್ಟ ಫ್ಯಾನ್ಸ್!
Image
Suhana Khan: ಗರ್ಲ್ಸ್​ ಗ್ಯಾಂಗ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಶಾರುಖ್​ ಮಗಳು ಸುಹಾನಾ ಖಾನ್​
Image
‘ನಾನು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ’; ಪುತ್ರಿ ಸುಹಾನಾ ಬಾಯ್​ಫ್ರೆಂಡ್​ ಬಗ್ಗೆ ಶಾರುಖ್​ ಖಡಕ್​ ವಾರ್ನಿಂಗ್​

ಇದನ್ನೂ ಓದಿ: ಶಾರುಖ್​ ಪುತ್ರಿ ಸುಹಾನಾ ಖಾನ್​ ಹಾಟ್​ ಫೋಟೋಶೂಟ್ ವೈರಲ್​; ಅಪ್ಪನ ಕಮೆಂಟ್​ ಏನು?​

ಸುಹಾನಾ ಖಾನ್ ಅವರ ಈ ಗಡಿಬಿಡಿ ಕಂಡ ಪಾಪರಾಜಿಯೊಬ್ಬರು ನೇರವಾಗಿ ಪ್ರಶ್ನೆ ಕೇಳಿದ್ದಾರೆ. ‘ಸುಹಾನಾ ಅವರೇ ಸ್ವಲ್ಪ ನಿಲ್ಲಿ. ನಿಮ್ಮ ಸಿನಿಮಾ ರಿಲೀಸ್​ ಆಗಲಿದೆ. ಈಗ ಟೆನ್ಷನ್​ ಯಾಕೆ? ನಮ್ಮ ಮುಖ ನೆನಪಿಟ್ಟುಕೊಳ್ಳಿ. ನಾವು ದಿನವೂ ಸಿಗುತ್ತಿರುತ್ತೇವೆ’ ಎಂದು ಮಾತನಾಡಿಸಿದ್ದಕ್ಕೆ ಸುಹಾನಾ ಖಾನ್​ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

‘ದಿ ಆರ್ಚೀಸ್​’ ಸಿನಿಮಾದಲ್ಲಿ ಸುಹಾನಾ ಖಾನ್​, ಖುಷಿ ಕಪೂರ್​, ಅಮಿತಾಭ್​ ಬಚ್ಚನ್​ ಮೊಮ್ಮಗ ಅಗಸ್ತ್ಯ ನಂದ ಮುಂತಾದವರು ನಟಿಸುತ್ತಿದ್ದಾರೆ. ಈ ಸಿನಿಮಾ ನೆಟ್​ಫ್ಲಿಕ್ಸ್​ ಮೂಲಕ ರಿಲೀಸ್​ ಆಗಲಿದೆ. ಶಾರುಖ್​ ಪುತ್ರಿಯ ನಟನೆ ನೋಡಲು ಅವರ ಅಭಿಮಾನಿಗಳು ಕಾದಿದ್ದಾರೆ. ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ಅವರು ತುಂಬ ಫೇಮಸ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಸದ್ಯ 28 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ