Salman Khan: ಸಲ್ಮಾನ್ ಖಾನ್ ಚಿತ್ರದಲ್ಲಿ 10 ನಾಯಕಿಯರು..!

Salman Khan: ಸಲ್ಮಾನ್ ಖಾನ್ ಚಿತ್ರದಲ್ಲಿ 10 ನಾಯಕಿಯರು..!
ಸಾಂದರ್ಭಿಕ ಚಿತ್ರ

Salman Khan's No Entry Mein Entry: ಚಿತ್ರದ ಚಿತ್ರಕಥೆಯು ಪೂರ್ಣಗೊಂಡಿದ್ದು, ಇತ್ತ ಸಲ್ಮಾನ್ ಖಾನ್ ಕೂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

TV9kannada Web Team

| Edited By: Zahir PY

Jun 22, 2022 | 6:38 PM

2005 ರಲ್ಲಿ ತೆರೆಕಂಡು ಬಾಲಿವುಡ್​ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ ನೋ ಎಂಟ್ರಿ ಸಿನಿಮಾ ನಿಮಗೆ ನೆನಪಿರಬಹುದು. ಸಲ್ಮಾನ್ ಖಾನ್ (Salman Khan), ಅನಿಲ್ ಕಪೂರ್ ಹಾಗೂ ಫರ್ದೀನ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಹಾಸ್ಯಭರಿತ ಚಿತ್ರದ 2ನೇ ಭಾಗವನ್ನು ತೆರೆಗೆ ತರಲು ಇದೀಗ ಚಿತ್ರತಂಡ ಮುಂದಾಗಿದೆ. ಅನೀಸ್ ಬಾಜ್ಮಿ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರದ ಮುಂದುವರೆದ ಭಾಗಕ್ಕೆ ನೋ ಎಂಟ್ರಿ ಮೇ ಎಂಟ್ರಿ (No Entry Mein Entry) ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದಾರೆ. ವಿಶೇಷ ಎಂದರೆ ಈ ಬಾರಿ ನಿರ್ದೇಶಕರು ಪಾತ್ರಗಳನ್ನು ಎರಡು ಪಟ್ಟು ಹೆಚ್ಚಿಸಿದ್ದಾರೆ. ಅಂದರೆ ಇಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿರುವ ಸಲ್ಮಾನ್ ಖಾನ್, ಅನಿಲ್ ಕಪೂರ್, ಫರ್ದೀನ್ ಖಾನ್ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗಾಗಿ   ಒಟ್ಟು 10 ನಾಯಕಿಯರನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ ನಿರ್ದೇಶಕರು.

ಅಂದರೆ ಇಲ್ಲಿ ತ್ರಿಪಾತ್ರದಲ್ಲಿರುವ ನಾಯಕರುಗಳಿಗೆ ಬೇರೆ ಬೇರೆ ನಾಯಕಿಯರು ಇರಲಿದ್ದಾರೆ. ಒಂದೊಂದು ಪಾತ್ರಕ್ಕೆ ಬೇರೆ ಬೇರೆ ನಾಯಕಿಯರಂತೆ ಒಟ್ಟು 9 ಹೀರೋಯಿನ್ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ವಿಶೇಷ ಪಾತ್ರದಲ್ಲಿ ಇನ್ನೊಬ್ಬರು ನಾಯಕಿ ಎಂಟ್ರಿ ಕೊಡಲಿದ್ದಾರೆ. ಈ ಮೂಲಕ ನೋ ಎಂಟ್ರಿ ಮೇ ಎಂಟ್ರಿ ಚಿತ್ರದಲ್ಲಿ ಒಟ್ಟು 10 ಹೀರೋಯಿನ್​ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಬಿಟೌನ್​ನಿಂದ ಹೊರಬಿದ್ದಿದೆ.

ಈಗಾಗಲೇ ನಿರ್ದೇಶಕ ಅನೀಸ್ ಬಾಜ್ಮಿ ನಾಯಕಿಯರ ಆಯ್ಕೆಯಲ್ಲಿ ತೊಡಗಿದ್ದು, ಈ ಪಟ್ಟಿಯಲ್ಲಿ ಸೌತ್ ಸುಂದರಿ ಸಮಂತಾ ರುತ್​ ಪ್ರಭು ಹೆಸರು ಕೂಡ ಕಾಣಿಸಿಕೊಂಡಿದೆ. ವಿಶೇಷ ಎಂದರೆ ರಶ್ಮಿಕಾ ಮಂದಣ್ಣ ಕೂಡ ಹತ್ತು ನಾಯಕಿಯರಲ್ಲಿ ಒಬ್ಬರು ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಇನ್ನುಳಿದಂತೆ ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ ಹೆಸರುಗಳು ಮುಂಚೂಣಿಯಲ್ಲಿದೆ. ಇದಲ್ಲದೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಈಗಾಗಲೇ ಚಿತ್ರಕ್ಕೆ ಓಕೆ ಅಂದಿದ್ದಾರಂತೆ.

ಸದ್ಯ ಚಿತ್ರದ ಚಿತ್ರಕಥೆಯು ಪೂರ್ಣಗೊಂಡಿದ್ದು, ಇತ್ತ ಸಲ್ಮಾನ್ ಖಾನ್ ಕೂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೀಗ 10 ನಾಯಕಿಯರ ಆಯ್ಕೆಯಲ್ಲಿ ತೊಡಗಿಸಿಕೊಂಡಿರುವ ಅನೀಸ್ ಬಾಜ್ಮಿ, ಹೀರೋಯಿನ್ಸ್ ಫೈನಲ್ ಆಗುತ್ತಿದ್ದಂತೆ ನೋ ಎಂಟ್ರಿ ಮೇ ಎಂಟ್ರಿ ಚಿತ್ರವನ್ನು ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada