Diganth Health Update: ಸರ್ಜರಿ ಬಳಿಕ ದಿಗಂತ್​ ಹೇಗಿದ್ದಾರೆ? ಮಾಹಿತಿ ನೀಡಿದ ಐಂದ್ರಿತಾ ರೇ

Diganth Manchale: ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ದಿಗಂತ್​ ಅವರ ಸ್ಥಿತಿ ಹೇಗಿದೆ ಎಂಬುದನ್ನು ಐಂದ್ರಿತಾ ತಿಳಿಸಿದ್ದಾರೆ. ಶೀಘ್ರದಲ್ಲೇ ಡಿಸ್ಚಾರ್ಜ್​ ಮಾಡುವುದಾಗಿ ಅವರು ಹೇಳಿದ್ದಾರೆ.

Diganth Health Update: ಸರ್ಜರಿ ಬಳಿಕ ದಿಗಂತ್​ ಹೇಗಿದ್ದಾರೆ? ಮಾಹಿತಿ ನೀಡಿದ ಐಂದ್ರಿತಾ ರೇ
ಐಂದ್ರಿತಾ ರೇ, ದಿಗಂತ್
Follow us
TV9 Web
| Updated By: ಮದನ್​ ಕುಮಾರ್​

Updated on:Jun 22, 2022 | 4:06 PM

ಸಮ್ಮರ್​ಸಾಲ್ಟ್​ ಮಾಡುವ ವೇಳೆ ಕುತ್ತಿಗೆಗೆ ತೀವ್ರ ಪೆಟ್ಟು ಮಾಡಿಕೊಂಡಿರುವ ನಟ ದಿಗಂತ್​ (Diganth Manchale) ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈಗ ಅವರ ಆರೋಗ್ಯದ ಬಗ್ಗೆ ಪತ್ನಿ ಐಂದ್ರಿತಾ ರೇ ಮಾಹಿತಿ ಹಂಚಿಕೊಂಡಿದ್ದಾರೆ. ‘ಸರ್ಜರಿ ಯಶಸ್ವಿ ಆಗಿದೆ. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಏನೂ ಚಿಂತೆ ಮಾಡಬೇಕಾದ ಅನಿವಾರ್ಯತೆ ಇಲ್ಲ. ಅವರಿಗಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೆ, ಚಿತ್ರರಂಗದ ಸ್ನೇಹಿತರಿಗೆ ಧನ್ಯವಾದಗಳು’ ಎಂದು ಐಂದ್ರಿತಾ ರೇ ಹೇಳಿದ್ದಾರೆ. ದಿಗಂತ್​ ಅವರ ಹೆಲ್ತ್​ ಅಪ್​ಡೇಟ್​ (Diganth Manchale Health Update) ತಿಳಿದ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ‘ಮತ್ತೆ ಸಮ್ಮರ್​ಸಾಲ್ಟ್​ ಮಾಡಲು ನಾನು ರೆಡಿ ಆಗಿದ್ದೇನೆ’ ಎಂದು ವೈದ್ಯರಿಗೆ ದಿಗಂತ್​ ಹೇಳಿದ್ದಾರಂತೆ. ಅಷ್ಟರಮಟ್ಟಿಗೆ ಅವರು ಚಿಕಿತ್ಸೆಗೆ ಸ್ಪಂದಿಸಿದ್ದಾರೆ ಎಂದು ಐಂದ್ರಿತಾ ರೇ (Aindrita Ray) ಮಾಹಿತಿ ಹಂಚಿಕೊಂಡಿದ್ದಾರೆ.

ಅನೇಕ ಸಿನಿಮಾಗಳಲ್ಲಿ ದಿಗಂತ್​ ಬ್ಯುಸಿ ಆಗಿದ್ದರು. ಸಿನಿಮಾ ಕೆಲಸಗಳಿಗೆ ಬಿಡುವು ನೀಡಿ ಅವರು ಗೋವಾಗೆ ತೆರಳಿದ್ದರು. ಅಲ್ಲಿ ಸಮ್ಮರ್​ಸಾಲ್ಟ್​ ಮಾಡುವಾಗ ಲ್ಯಾಂಡಿಂಗ್​ ತಪ್ಪಾಗಿದ್ದರಿಂದ ಈ ಅಚಾತುರ್ಯ ಸಂಭವಿಸಿತು ಎಂದು ಐಂದ್ರಿತಾ ರೇ ಹೇಳಿದ್ದಾರೆ. ಆ ಮೂಲಕ ಅವರು ಮೊದಲ ಬಾರಿಗೆ ರಿಯಾಕ್ಷನ್​ ನೀಡಿದ್ದಾರೆ. ‘ಗೋವಾದಲ್ಲಿ ಇದ್ದಾಗ ನನಗೆ ಟೆನ್ಷನ್​ ಆಯಿತು. ಆದರೆ ಬೆಂಗಳೂರಿಗೆ ಬಂದಾಗ ಸಮಾಧಾನ ಆಯಿತು. ಯಾಕೆಂದ್ರೆ ಇಲ್ಲಿ ಫ್ಯಾಮಿಲಿ ಮತ್ತು ಫ್ರೆಂಡ್ಸ್​ ಇದ್ದಾರೆ’ ಎಂದು ಐಂದ್ರಿತಾ ಹೇಳಿದ್ದಾರೆ.

ದಿಗಂತ್​ ಡಿಸ್ಚಾರ್ಜ್​​ ಯಾವಾಗ?

ಇದನ್ನೂ ಓದಿ
Image
Actor Diganth: ದಿಗಂತ್​ ಈಗ ಹೇಗಿದ್ದಾರೆ? ಗಾಯದ ಬಗ್ಗೆ ವೈದ್ಯರು ಹೇಳಿದ್ದೇನು?
Image
Actor Diganth: ದಿಗಂತ್​ಗೆ ಗಂಭೀರ ಗಾಯ: ಏರ್​ಲಿಫ್ಟ್​ ಮೂಲಕ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್​
Image
Actor Diganth: ಅಷ್ಟಕ್ಕೂ ನಟ ದಿಗಂತ್​ಗೆ ಆಗಿದ್ದೇನು?
Image
ದಿಗಂತ್​ ಖಾಸಗಿ ಜೀವನದ ಬಗ್ಗೆ ಜನ ಗೂಗಲ್​ನಲ್ಲಿ ಹುಡುಕಿದ ಪ್ರಶ್ನೆಗಳಿಗೆ ಅವರೇ ಕೊಟ್ರು ನೇರ ಉತ್ತರ

‘ದಿಗಂತ್​ ಈಗ ಸರಿಯಾಗಿ ಊಟ ಮಾಡಿದ್ದಾನೆ. ಮಾತನಾಡುತ್ತಿದ್ದಾನೆ. ಇವತ್ತು ಅಥವಾ ನಾಳೆ ಡಿಸ್ಚಾರ್ಜ್​ ಆಗಬಹುದು. ಗೋವಾದ ಸರ್ಕಾರದವರು ನಮಗೆ ತುಂಬ ಬೆಂಬಲ ನೀಡಿದರು. ಅದರಿಂದ ನಮಗೆ ಏರ್​ಲಿಫ್ಟ್​ ಮಾಡಲು ಸಾಧ್ಯವಾಯ್ತು. ಇನ್ಮುಂದೆ ದಿಗಂತ್​ ಹೆಚ್ಚು ಎಚ್ಚರಿಕೆಯಿಂದ ಇರಬೇಕು’ ಎಂದು ಐಂದ್ರಿತಾ ರೇ ಮಾಹಿತಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:06 pm, Wed, 22 June 22