Diganth Manchale: ಸರ್ಜರಿ ಬಳಿಕ ವಾರ್ಡ್​ಗೆ ಶಿಫ್ಟ್​ ಆದ ದಿಗಂತ್​; ಥಂಬ್ಸ್​ ಅಪ್​ ಮೂಲಕ ಸಿಗ್ನಲ್​ ನೀಡಿದ ನಟ​

Diganth Manchale: ಸರ್ಜರಿ ಬಳಿಕ ವಾರ್ಡ್​ಗೆ ಶಿಫ್ಟ್​ ಆದ ದಿಗಂತ್​; ಥಂಬ್ಸ್​ ಅಪ್​ ಮೂಲಕ ಸಿಗ್ನಲ್​ ನೀಡಿದ ನಟ​

TV9 Web
| Updated By: ಮದನ್​ ಕುಮಾರ್​

Updated on:Jun 22, 2022 | 11:11 AM

Diganth Manchale Health Update: ಕುತ್ತಿಗೆ ಸರ್ಜರಿ ಬಳಿಕ ತಾವು ಕ್ಷೇಮ ಎಂದು ದಿಗಂತ್ ಮಂಚಾಲೆ ಸಿಗ್ನಲ್​ ನೀಡಿದ್ದಾರೆ. ಸದ್ಯ ಈ ಫೋಟೋಗಳು ವೈರಲ್​ ಆಗುತ್ತಿವೆ.

ನಟ ದಿಗಂತ್​ ಮಂಚಾಲೆ ಅವರ ಅಭಿಮಾನಿಗಳಲ್ಲಿ ಮೂಡಿದ್ದ ಆತಂಕ ಕೊಂಚ ಕಡಿಮೆ ಆಗಿದೆ. ಗೋವಾದಲ್ಲಿ ಕುತ್ತಿಗೆಗೆ ತೀವ್ರವಾಗಿ ಪೆಟ್ಟು ಮಾಡಿಕೊಂಡಿದ್ದ ಅವರಿಗೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಪರೇಷನ್​ ಸಕ್ಸಸ್​ ಆಗಿದ್ದು, ದಿಗಂತ್​ (Diganth) ಈಗ ಚೇರಿಸಿಕೊಳ್ಳುತ್ತಿದ್ದಾರೆ. ಈ ಸುದ್ದಿ ಕೇಳಿ ಅವರ ಫ್ಯಾನ್ಸ್​ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಸರ್ಜರಿ ಮುಗಿದ ಬಳಿಕ ಅವರನ್ನು ವಾರ್ಡ್​ಗೆ ಶಿಫ್ಟ್​ ಮಾಡಲಾಗಿದೆ. ಈ ವೇಳೆ ದಿಗಂತ್​ ಅವರು ಥಂಬ್ಸ್​ ಅಪ್​ ಮಾಡಿದ್ದಾರೆ. ಆ ಮೂಲಕ ತಾವು ಕ್ಷೇಮ ಎಂದು ಸಿಗ್ನಲ್​ ನೀಡಿದ್ದಾರೆ. ಸದ್ಯ ಈ ಫೋಟೋಗಳು ವೈರಲ್​ ಆಗುತ್ತಿವೆ. ಅವರ ಆರೋಗ್ಯದ ಬಗ್ಗೆ ಅಪ್​ಡೇಟ್​ (Diganth Health Update) ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ಈ ಬಗ್ಗೆ ಐಂದ್ರಿತಾ ರೇ (Aindrita Ray) ಮತ್ತು ವೈದ್ಯರು ಮಾಹಿತಿ ನೀಡುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Jun 22, 2022 11:11 AM