Actor Diganth: ದಿಗಂತ್ಗೆ ಗಂಭೀರ ಗಾಯ: ಏರ್ಲಿಫ್ಟ್ ಮೂಲಕ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್
Actor Diganth: ದಿಗಂತ್ ಸದ್ಯ ಗಾಳಿಪಟ-2 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಿರುವ ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲೇ ಛಾಪು ಮೂಡಿಸುವ ವಿಶ್ವಾಸದಲ್ಲಿದ್ದಾರೆ.
ಗೋವಾದಲ್ಲಿ ಗಾಯಗೊಂಡಿದ್ದ ಸ್ಯಾಂಡಲ್ವುಡ್ ನಟ ದಿಗಂತ್ (Actor Diganth) ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿದೆ. ಕುಟುಂಬಸ್ಥರೊಂದಿಗೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದ ದಿಗಂತ್ ಅವರು ಸಮ್ಮರ್ ಸಾಲ್ಟ್ ಮಾಡಿದ್ದ ವೇಳೆ ತೀವ್ರವಾಗಿ ಗಾಯಗೊಂಡಿದ್ದರು. ಸಮುದ್ರ ತೀರದಲ್ಲಿ ಬ್ಯಾಕ್ ಫ್ಲಿಪ್ ಮಾಡಲು ಯತ್ನಿಸಿದಾಗ ಆಚಾನಕ್ಕಾಗಿ ನೆಲಕ್ಕೆ ಬಿದ್ದು ಕುತ್ತಿಗೆಗೆ ಹಾಗೂ ಬೆನ್ನುಮೂಳೆಗೆ ಗಾಯ ಮಾಡಿಕೊಂಡಿದ್ದರು. ತಕ್ಷಣವೇ ಅವರನ್ನು ಗೋವಾದ ಆಸ್ಪತ್ರೆಗೆ ದಾಖಲಾಯಿಸಲಾಗಿತ್ತು. ಇದೀಗ ಪತ್ನಿ ಆಂದ್ರಿತಾ ರೇ ಹಾಗೂ ಕುಟುಂಬಸ್ಥರು ದಿಗಂತ್ರನ್ನು ಏರ್ ಆ್ಯಂಬುಲೆನ್ಸ್ ಮೂಲಕ ಹೆಚ್ಚಿನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತಂದಿದ್ದಾರೆ.
ಗೋವಾದಿಂದ ಹೆಚ್ಎಎಲ್ ಏರ್ಪೋರ್ಟ್ಗೆ ಏರ್ ಆ್ಯಂಬುಲೆನ್ಸ್ ಮೂಲಕ ಕರೆ ತರಲಾಗಿದ್ದು, ಇದೀಗ ಮಣಿಪಾಲ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ದಿಗಂತ್ ಅವರ ಗಾಯವು ಗಂಭೀರವಾಗಿದೆ ಎಂದು ತಿಳಿದು ಬಂದಿದ್ದು, ಕುತ್ತಿಗೆ ಭಾಗಕ್ಕೆ ಮತ್ತು ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರ ಮೂಲಗಳು ತಿಳಿಸಿವೆ.
ಕೆಲ ದಿನಗಳ ಹಿಂದೆ ದಿಗಂತ್ ತಮ್ಮ ಆಪ್ತರು ಮತ್ತು ಕುಟುಂಬಸ್ಥರೊಂದಿಗೆ ಗೋವಾಗೆ ಪ್ರವಾಸ ಹೋಗಿದ್ದರು. ಈ ವೇಳೆ ಟ್ರೆಕ್ಕಿಂಗ್ ಸೇರಿದಂತೆ ಅನೇಕ ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಗೋವಾ ಬೀಚ್ನಲ್ಲಿ ಸಖತ್ ಮೋಜು ಮಸ್ತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಮುದ್ರ ತಟದಲ್ಲಿ ಸಾಹಸ ಮಾಡುವುದು ಎಂದರೆ ದಿಗಂತ್ಗೆ ಅಚ್ಚು ಮೆಚ್ಚು. ಹೀಗಾಗಿಯೇ ಅಲ್ಲೂ ಕೂಡ ಬ್ಯಾಕ್ ಫ್ಲಿಪ್ ಮಾಡಿದ್ದಾರೆ.
ಆದರೆ ದುರಾದೃಷ್ಟವಶಾತ್ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ದಿಗಂತ್ ಅವರ ಕುತ್ತಿಗೆಗೆ ಮತ್ತು ಬೆನ್ನು ಮೂಳೆಗೆ ತೀವ್ರ ಪೆಟ್ಟಾಗಿದೆ. ಹೀಗಾಗಿ ಕೂಡಲೇ ಅವರ ಆಪ್ತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲಾಗಿದೆ. ಫ್ಲಿಪ್ ಅಂತ್ಯದಲ್ಲಿ ನೆಲಕ್ಕೆ ಜೋರಾಗಿ ತಲೆ ಬಡಿದಿದ್ದು, ಇದರಿಂದ ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಅಲ್ಲದೆ ಕತ್ತಿನ ಮೂಳೆಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.