AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakshit Shetty: ನಂಗೆ ಲವ್ ಫೈಲ್ಯುರ್ ಆಗಿಲ್ಲ: ರವಿಚಂದ್ರನ್ ಮುಂದೆ ಮನಬಿಚ್ಚಿದ ರಕ್ಷಿತ್ ಶೆಟ್ಟಿ

Ravichandran and Rakshit Shetty's Interview: ಶ್ರೀಘ್ರದಲ್ಲೇ ಸಿಂಪಲ್ ಸ್ಟಾರ್-ಕ್ರೇಜಿ ಸ್ಟಾರ್ ನಡುವಣ ಈ ವಿಶೇಷ ಸಂದರ್ಶನದ ವಿಡಿಯೋ ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಲಿದೆ.

Rakshit Shetty: ನಂಗೆ ಲವ್ ಫೈಲ್ಯುರ್ ಆಗಿಲ್ಲ: ರವಿಚಂದ್ರನ್ ಮುಂದೆ ಮನಬಿಚ್ಚಿದ ರಕ್ಷಿತ್ ಶೆಟ್ಟಿ
Rakshit Shetty-Ravichandran
Follow us
TV9 Web
| Updated By: ಝಾಹಿರ್ ಯೂಸುಫ್

Updated on:May 28, 2022 | 2:18 PM

ಪ್ರೇಮಲೋಕದಲ್ಲಿ ರಿಚ್ಚಿ ಕಾಣಿಸಿಕೊಂಡು..ಎಂತಾ ಸಾವ, ಶೂಟ್ ಮಾಡ್ಬೇಕಾ ಎಂದು ಕೇಳಿದ್ರೆ ಹೇಗಿರುತ್ತೆ? ಇಂತಹದೊಂದು ಅಪೂರ್ವ ಸಂಗಮಕ್ಕೆ ವೇದಿಕೆ ರೂಪಿಸಿದ್ದಾರೆ ಖ್ಯಾತ ನಿರೂಪಕಿ ಅನುಶ್ರೀ. ಹೌದು, ಅನುಶ್ರೀ ನಡೆಸಿಕೊಡುವ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ ಪ್ರೇಮಲೋಕದ ಸೃಷ್ಟಿಕರ್ತ ವಿ ರವಿಚಂದ್ರನ್ (V Ravichandran) ಹಾಗೂ ಕಿರಿಕ್ ಪಾರ್ಟಿ ಕರ್ಣ ರಕ್ಷಿತ್ ಶೆಟ್ಟಿ (Rakshit Shetty) ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಕಾರ್ಯಕ್ರಮದಲ್ಲಿ ರವಿಚಂದ್ರನ್ ಮುಂದೆ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಕೂಡ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಈ ಇಂಟರ್​ವ್ಯೂನ ವಿಡಿಯೋ ತುಣುಕನ್ನು ಖುದ್ದು ರವಿಚಂದ್ರನ್ ಅವರೇ ಹಂಚಿಕೊಂಡಿದ್ದು, ಪ್ರೊಮೊ ವಿಡಿಯೋದಲ್ಲೇ ಇಬ್ಬರು ನಟರುಗಳ ಹಲವು ಆಸಕ್ತಿಕರ ವಿಷಯಗಳನ್ನು ಶೇರ್ ಮಾಡಿರುವುದು ಕಂಡು ಬರುತ್ತದೆ.

ಅದರಲ್ಲೂ ರವಿಚಂದ್ರನ್ ಅವರಿಗೆ ರಕ್ಷಿತ್ ಶೆಟ್ಟಿ ರ್ಯಾಪಿಡ್​ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಸ್ಯಾಂಡಲ್​ವುಡ್​ನ ಅನೇಕ ಸ್ಟಾರ್ ನಟರುಗಳ ಹೆಸರುಗಳು ಉತ್ತರವಾಗಿ ಬಂದಿರುವುದು ಮತ್ತೊಂದು ವಿಶೇಷ. ಹಾಗಿದ್ರೆ ಪ್ರೊಮೊದಲ್ಲಿ ಇರುವಂತೆ ರವಿಮಾಮನಿಗೆ ಕಿರಿಕ್ ಕರ್ಣ ಕೇಳಿದ ಕೆಲ ಪ್ರಶ್ನೆಗಳೇನು, ಅದಕ್ಕೆ ಕ್ರೇಜಿಸ್ಟಾರ್ ನೀಡಿದ ಉತ್ತರವೇನು ನೋಡೋಣ..

ಇದನ್ನೂ ಓದಿ
Image
Vikrant Rona: ‘ವಿಕ್ರಾಂತ್​ ರೋಣ’ ಚಿತ್ರದ ಬಿಗ್​ ಅನೌನ್ಸ್​ಮೆಂಟ್​; ಕಾತರದಿಂದ ಕಾಯುತ್ತಿರುವ ಕಿಚ್ಚ ಸುದೀಪ್ ಫ್ಯಾನ್ಸ್​
Image
ರಾಷ್ಟ್ರ ಭಾಷೆ ವಿವಾದದ ಬಳಿಕ ಗಲ್ಲಾ ಪೆಟ್ಟಿಗೆಯಲ್ಲೂ ಕಿಚ್ಚ ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಪೈಪೋಟಿ
Image
‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಕಿಚ್ಚನ ಚಪ್ಪಾಳೆ; ಸುದೀಪ್​ ಬರೆದ ದೀರ್ಘ ಪತ್ರದಲ್ಲಿ ಏನೇನಿದೆ?
Image
ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಸಾಥ್​​ ನೀಡಿದ ಪರಭಾಷೆಯ ಸ್ಟಾರ್​ ನಟರು

ರಕ್ಷಿತ್ ಶೆಟ್ಟಿ ಪ್ರಶ್ನೆ: ಈ ಜನರೇಷನ್​ನ ನಿಮ್ಮ ನೆಚ್ಚಿನ ನಟ? ರವಿಚಂದ್ರನ್ ಉತ್ತರ: ಯಶ್

ಪ್ರಶ್ನೆ: ಈಗ ಶಾಂತಿಕ್ರಾಂತಿ ಚಿತ್ರ ಮಾಡಿದ್ರೆ ಯಾರು ನಾಯಕರಾಗಬಹುದು? ಉತ್ತರ: ಸುದೀಪ್

ಪ್ರಶ್ನೆ: ರಣಧೀರ ಚಿತ್ರ ಯಾರು ಮಾಡಿದ್ರೆ ಉತ್ತಮ? ಉತ್ತರ: ಮನೋರಂಜನ್

ಪ್ರಶ್ನೆ: ಪ್ರೇಮಲೋಕ ಚಿತ್ರವನ್ನು ಈಗ ಯಾರು ಮಾಡಬಹುದು? ಉತ್ತರ: ಯಾರಿಗೂ ಕೊಡಲ್ಲ, ಅದು ನಾನೊಬ್ಬನೇ ಮಾಡೋದು.

ಪ್ರಶ್ನೆ: ಸಿಪಾಯಿ ಚಿತ್ರಕ್ಕೆ ಈಗಿನ ನಟರಲ್ಲಿ ಯಾರು ಸೂಕ್ತ? ಉತ್ತರ: ದರ್ಶನ್

ಇನ್ನು ನಾನು ನಿಮ್ಮ ಯಾವ ಚಿತ್ರವನ್ನು ರಿಮೇಕ್ ಮಾಡಬಹುದು ಎಂದು ರಕ್ಷಿತ್ ಶೆಟ್ಟಿ ಕೇಳಿದಾಗ, ರಾಮಾಚಾರಿ ಚಿತ್ರ ಮಾಡಿ, ಹೀರೋಯಿನ್ ಆಗಿ ಮಾಲಾಶ್ರೀ ಅವರ ಮಗಳು ಕೂಡ ರೆಡಿಯಿದ್ದಾಳೆ ಎಂದು ರವಿಚಂದ್ರನ್ ಹಾಸ್ಯಚಟಾಕಿ ಹಾರಿಸಿದರು. ಇದೇ ವೇಳೆ ರಕ್ಷಿತ್ ಶೆಟ್ಟಿಗೆ ನೀವು ಇಷ್ಟ ಪಡುವ ಕನ್ನಡ ನಟಿ ಯಾರು ಎಂದು ಅನುಶ್ರೀ ಕೇಳಿದ್ದಾರೆ. ಇದಕ್ಕೆ ಸಿಂಪಲ್ ಸ್ಟಾರ್ ಕಡೆಯಿಂದ ಬಂದ ಉತ್ತರ ಮೋಹಕ ತಾರೆ ರಮ್ಯಾ.

ಇವೆಲ್ಲದರ ನಡುವೆ ನಿಮಗೆ ಲವ್ ಫೈಲ್ಯುರ್ ಆಗಿದಕ್ಕೆ ನೀವು ಇಂದು ಇಷ್ಟೊಂದು ಸಕ್ಸಸ್ ಆಗಿದ್ದೀರಿ ಎಂದು ರವಿಚಂದ್ರನ್ ಹೇಳಿದ್ದಾರೆ. ಈ ವೇಳೆ ಮಾತು ಮುಂದುವರೆಸಿದ ರಕ್ಷಿತ್ ಶೆಟ್ಟಿ ನನ್ನ ಪ್ರಕಾರ ನಂಗೆ ಲವ್ ಫೈಲ್ಯುರ್ ಆಗಿಲ್ಲ. ಆದರೆ ಜಗತ್ತು ಪೂರ್ತಿ ಅದನ್ನು ಲವ್ ಫೆಲ್ಯುರ್ ಅಂದ್ಕೊಂಡಿದೆ ಎಂದು ಹೇಳಿದರು.

ಸದ್ಯ ಆ್ಯಂಕರ್ ಅನುಶ್ರೀ ಈ ಸಂದರ್ಶನದ ವಿಡಿಯೋ ಪ್ರೊಮೊವನ್ನು ಮಾತ್ರ ಬಿಡುಗಡೆ ಮಾಡಿದ್ದು, ಇದಾಗ್ಯೂ ಈ ಕಾರ್ಯಕ್ರಮ ಯಾವಾಗ ಪ್ರಸಾರವಾಗಲಿದೆ ಎಂಬುದರ ಮಾಹಿತಿ ಹಂಚಿಕೊಂಡಿಲ್ಲ. ಅದಾಗ್ಯೂ ಶ್ರೀಘ್ರದಲ್ಲೇ ಸಿಂಪಲ್ ಸ್ಟಾರ್-ಕ್ರೇಜಿ ಸ್ಟಾರ್ ನಡುವಣ ಈ ವಿಶೇಷ ಸಂದರ್ಶನದ ವಿಡಿಯೋ ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ.

ವಿ.ಸೂ: ಮೇಲೆ ನೀಡಲಾದ ಪ್ರಶ್ನೋತ್ತರವನ್ನು ಪ್ರೊಮೊ ವಿಡಿಯೋದಲ್ಲಿ ತೋರಿಸಿದಂತೆ ನೀಡಲಾಗಿದೆ. ಇಲ್ಲಿ ಪ್ರಶ್ನೆ ಮತ್ತು ಉತ್ತರ ನಡುವೆ ವಿಡಿಯೋ ಎಡಿಟರ್ ಬುದ್ದಿವಂತಿಕೆ ಪ್ರದರ್ಶಿಸಿದ್ದರೆ ಉತ್ತರಗಳು ಬದಲಾಗಬಹುದು. ಹಾಗಾಗಿ ಸಿಂಪಲ್ ಸ್ಟಾರ್ ಕೇಳಿದ ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ನೀಡಿರುವ ಉತ್ತರಗಳೇನು ಎಂದು ತಿಳಿಯಲು ನೀವು ಈ ಸಂದರ್ಶನದ ವಿಡಿಯೋ ಬಿಡುಗಡೆ ಆಗುವ ತನಕ ಕಾಯಲೇಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:15 pm, Sat, 28 May 22

ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್