AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಸಾಥ್​​ ನೀಡಿದ ಪರಭಾಷೆಯ ಸ್ಟಾರ್​ ನಟರು

‘ದಿ ಡೆವಿಲ್ಸ್​ ಅರೈವಲ್​’ ಹೆಸರಿನಲ್ಲಿ ‘ವಿಕ್ರಾಂತ್​ ರೋಣ’ ಟೀಸರ್ ಏಪ್ರಿಲ್​ 2ರಂದು ಬೆಳಗ್ಗೆ 9.55ಕ್ಕೆ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗುತ್ತಿದೆ. ಈ ಟೀಸರ್​ಅನ್ನು ಮಲಯಾಳಂನಲ್ಲಿ ಮೋಹನ್​ ಲಾಲ್, ತೆಲುಗಿನಲ್ಲಿ ಚಿರಂಜೀವಿ ಅವರು​ ಅವರು ಲಾಂಚ್ ಮಾಡುತ್ತಿದ್ದಾರೆ.

ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಸಾಥ್​​ ನೀಡಿದ ಪರಭಾಷೆಯ ಸ್ಟಾರ್​ ನಟರು
ಮೋಹನ್​ ಲಾಲ್​-ಸುದೀಪ್​-ಚರಿಂಜೀವಿ
TV9 Web
| Edited By: |

Updated on: Mar 31, 2022 | 1:45 PM

Share

‘ವಿಕ್ರಾಂತ್​ ರೋಣ’ ಸಿನಿಮಾ (Vikrant Rona Movie) ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಮೂಡಿದೆ. ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ. ಈ ಮಧ್ಯೆ, ಸಿನಿಮಾ ತಂಡ ಭರ್ಜರಿ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಪ್ರಚಾರ ಕೆಲಸ ದೊಡ್ಡ ಮಟ್ಟದಲ್ಲೇ ನಡೆಯಲಿದೆ ಎಂಬುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಪ್ರಚಾರ ಕಾರ್ಯದ ಮ್ಯಾಪ್​ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಈಗ ಈ ಸಿನಿಮಾವನ್ನು ಬೆಂಬಲಿಸೋಕೆ ಪರಭಾಷೆಯ ಸ್ಟಾರ್ ನಟರಾದ ಮೋಹನ್​​ ಲಾಲ್​, ‘ಮೆಗಾಸ್ಟಾರ್​’ ಚಿರಂಜೀವಿ ಮುಂದೆ ಬಂದಿದ್ದಾರೆ.

‘ವಿಕ್ರಾಂತ್​ ರೋಣ’ ಸಿನಿಮಾ ತಂಡ ಇತ್ತೀಚೆಗೆ ಟೀಸರ್​ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇತ್ತೀಚೆಗೆ ಸುದೀಪ್​ ಡಬ್ಬಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಕಿಚ್ಚ ಡಬ್​ ಮಾಡಿದ ದೃಶ್ಯ ಹಾಗೂ ಡೈಲಾಗ್​ಗಳು ಸಾಕಷ್ಟು ಗಮನ ಸೆಳೆದಿದ್ದವು. ಈ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಕೌತುಕ ಸೃಷ್ಟಿ ಆಗಿದೆ. ಈಗ ಚಿತ್ರತಂಡ ಹೊಸ ಟೀಸರ್​ ರಿಲೀಸ್ ಮಾಡುತ್ತಿದೆ.

‘ದಿ ಡೆವಿಲ್ಸ್​ ಅರೈವಲ್​’ ಹೆಸರಿನಲ್ಲಿ ‘ವಿಕ್ರಾಂತ್​ ರೋಣ’ ಟೀಸರ್ ಏಪ್ರಿಲ್​ 2ರಂದು ಬೆಳಗ್ಗೆ 9.55ಕ್ಕೆ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗುತ್ತಿದೆ. ಈ ಟೀಸರ್​ನಲ್ಲಿ ಯಾವೆಲ್ಲ ವಿಚಾರ ಇರಲಿದೆ? ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟುಕೊಡಲಿದೆಯೇ? ಸುದೀಪ್​ ಅವರ ಹೊಸ ಲುಕ್​ ಅನಾವರಣಗೊಳ್ಳಲಿದೆಯೇ? ಎಂಬಿತ್ಯಾದಿ ಕುತೂಹಲ ಮೂಡಿದೆ. ಈ ಎಲ್ಲ ಪ್ರಶ್ನೆಗೆ ಟೀಸರ್​ನಲ್ಲೇ ಉತ್ತರ ಸಿಗಬೇಕಿದೆ. ಈ ಟೀಸರ್​ಅನ್ನು ಮಲಯಾಳಂನಲ್ಲಿ ಮೋಹನ್​ ಲಾಲ್, ತೆಲುಗಿನಲ್ಲಿ ಚಿರಂಜೀವಿ ಅವರು​ ಅವರು ಲಾಂಚ್ ಮಾಡುತ್ತಿದ್ದಾರೆ.

ಹಾಗಾದರೆ, ಟೀಸರ್ ಲಾಂಚ್​ ಮಾಡೋಕೆ ಈ ಸ್ಟಾರ್​ ನಟರು​ ಬೆಂಗಳೂರಿಗೆ ಬರುತ್ತಿದ್ದಾರಾ? ಅದ್ದೂರಿ ಕಾರ್ಯಕ್ರಮ ನಡೆಯಲಿದೆಯೇ? ಇಲ್ಲ. ಸದ್ಯ, ಕೊವಿಡ್ ಕಡಿಮೆ ಆದರೂ ಎಲ್ಲವೂ ಸರಿ ಸ್ಥಿತಿಗೆ ಬಂದಿಲ್ಲ. ಈ ಕಾರಣಕ್ಕೆ ಅವರು ಬೆಂಗಳೂರಿಗೆ ಆಗಮಿಸುತ್ತಿಲ್ಲ. ಬದಲಿಗೆ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಟೀಸರ್​ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಲಿದ್ದಾರೆ.  ಈ ವಿಚಾರವನ್ನು ನಿರ್ದೇಶಕ ಅನೂಪ್​ ಭಂಡಾರಿ ಘೋಷಣೆ ಮಾಡಿದ್ದಾರೆ.

‘ವಿಕ್ರಾಂತ್​ ರೋಣ’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ‘ರಂಗಿತರಂಗ’ ಖ್ಯಾತಿಯ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್​ ಪಾಂಡಿಯನ್​ ಬಂಡವಾಳ ಹೂಡಿದ್ದಾರೆ. ಮುಖ್ಯಪಾತ್ರದಲ್ಲಿ ಕಿಚ್ಚ ಸುದೀಪ್​, ನೀತಾ ಅಶೋಕ್​, ನಿರೂಪ್​ ಭಂಡಾರಿ, ಜಾಕ್ವೆಲಿನ್​ ಫರ್ನಾಂಡಿಸ್​ ಮುಂತಾದವರು ನಟಿಸಿದ್ದಾರೆ. ಬೃಹತ್​ ಸೆಟ್​ಗಳನ್ನು ನಿರ್ಮಿಸಿ ‘ವಿಕ್ರಾಂತ್​ ರೋಣ’ ಚಿತ್ರೀಕರಣ ಮಾಡಲಾಗಿದೆ. ಸುದೀಪ್​ ಕೂಡ ಈ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್​ಗಳು ಗಮನ ಸೆಳೆದಿವೆ. ಬುರ್ಜ್​ ಖಲೀಫಾ ಕಟ್ಟಡದ ಮೇಲೆ ಟೈಟಲ್​ ಲಾಂಚ್​ ಮಾಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: Jacqueline Fernandez: ‘ವಿಕ್ರಾಂತ್ ರೋಣ’ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಮನಮೋಹಕ ಫೋಟೋಗಳು ಇಲ್ಲಿವೆ

Vikrant Rona Teaser: ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್ ಘೋಷಣೆ; ಯುಗಾದಿ ಕಿಚ್ಚನ ಅಭಿಮಾನಿಗಳಿಗೆ ಮತ್ತಷ್ಟು ವಿಶೇಷ!

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್