‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಗೂ ಮುನ್ನವೇ ಅನಾವರಣ ಆಗಲಿದೆ ರಾಕಿ ಭಾಯ್ ಮೆಟಾವರ್ಸ್ ಜಗತ್ತು
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಪ್ರಚಾರಕ್ಕೆ ಮೆಟಾವರ್ಸ್ ತಂತ್ರಜ್ಞಾನ ಬಳಕೆ ಆಗುತ್ತಿದೆ. ಭಾರತೀಯ ಸಿನಿಮಾ ಜಗತ್ತಿನಲ್ಲಿ ಇಂಥದ್ದೊಂದು ವಿಭಿನ್ನ ಪ್ರಯತ್ನ ಮಾಡುವ ಮೂಲಕ ಈ ಚಿತ್ರ ಗಮನ ಸೆಳೆಯುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಏ.14ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಯಶ್ ಅಭಿಮಾನಿಗಳು ‘ಕೆಜಿಎಫ್ 2’ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ವಿಜಯ್ ಕಿರಗಂದೂರು ಅವರು ಈ ಸಿನಿಮಾವನ್ನು ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಮಾಡಿದ್ದಾರೆ. ನರಾಚಿಯ ಕರಾಳ ಲೋಕವನ್ನು ನಿರ್ದೇಶಕರು ಈಗಾಗಲೇ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಮೂಲಕ ಪ್ರೇಕ್ಷಕರಿಗೆ ತೋರಿಸಿದ್ದಾರೆ. ಈಗ ಅದರ ಮುಂದುವರಿದ ಭಾಗ ‘ಕೆಜಿಎಫ್: ಚಾಪ್ಟರ್ 2’ನಲ್ಲಿ ಇರಲಿದೆ. ಒಟ್ಟಾರೆ ರಾಕಿ ಭಾಯ್ ಜಗತ್ತು ಹೇಗಿರಲಿದೆ ಎಂಬುದು ಏ.14ರಂದು ತಿಳಿಯಲಿದೆ. ಆದರೆ ಅದಕ್ಕೂ ಮುನ್ನ ಮೆಟಾವರ್ಸ್ (Metaverse) ಮೂಲಕ ಈ ಪ್ರಪಂಚ ಅನಾವರಣ ಆಗಲಿದೆ. ಹೌದು, ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ‘ಕೆಜಿಎಫ್’ ಲೋಕವನ್ನು (KGF Verse) ತೋರಿಸಲು ಪ್ಲ್ಯಾನ್ ಮಾಡಲಾಗಿದೆ. ಈ ವಿಷಯ ಕೇಳಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಮೆಟಾವರ್ಸ್ ಎಂದರೆ ಏನು? ಅದರಲ್ಲಿ ‘ಕೆಜಿಎಫ್: ಚಾಪ್ಟರ್ 2’ ಜಗತ್ತು ಹೇಗಿರಲಿದೆ? ಇದರಲ್ಲಿ ಜನರು ಏನೆಲ್ಲ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಟ್ರೇಲರ್ ಲಾಂಚ್ ಆಯಿತು. ಈ ಸಂದರ್ಭದಲ್ಲಿ ಕೆಜಿಎಫ್ ಮೆಟಾವರ್ಸ್ ಬಗ್ಗೆ ನಿರೂಪಕ ಕರಣ್ ಜೋಹರ್ ಅವರು ಘೋಷಣೆ ಮಾಡಿದರು. ಆದರೆ ಅದೇನು ಎಂಬುದನ್ನು ಚಿತ್ರತಂಡದವರು ವಿವರಿಸಲಿಲ್ಲ. ‘ಕೆಜಿಎಫ್’ ಸಿನಿಮಾದ ಅಭಿಮಾನಿಗಳು ಮೆಟಾವರ್ಸ್ ಜಗತ್ತಿನಲ್ಲಿ ಹಲವು ವಿಷಯಗಳನ್ನು ನೋಡಬಹುದು. ಎಲ್ಲವೂ ಇಲ್ಲಿ ವರ್ಚುವಲ್ ರಿಯಾಲಿಟಿ ರೀತಿ ಇರಲಿದೆ. ಈ ಹೊಸ ಪ್ರಕಾರದ ದುನಿಯಾದಲ್ಲಿ ಏನುಂಟು ಏನಿಲ್ಲ ಎಂಬುದನ್ನು ತಿಳಿಯಲು ಎಲ್ಲರಲ್ಲೂ ಕೌತುಕ ಮೂಡಿದೆ.
ಏಪ್ರಿಲ್ 7ರಿಂದ ‘ಕೆಜಿಎಫ್: ಚಾಪ್ಟರ್ 2’ ರಾಕಿ ಭಾಯ್ ಮೆಟಾವರ್ಸ್ ಸೇಲ್ಸ್ ಆರಂಭ ಆಗಲಿದೆ. ಇದಕ್ಕೆ ಸಂಬಂಧಿಸಿದ ವೆಬ್ಸೈಟ್ ಕೂಡ ಈಗ ಸಿದ್ಧವಾಗಿದೆ. ಈ ಬಗ್ಗೆ ಮಾಹಿತಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಚಿತ್ರತಂಡ ಹಂಚಿಕೊಂಡಿದೆ. Non-fungible token ಮೂಲಕ ಕೆಜಿಎಫ್ ಮೆಟಾವರ್ಸ್ಗೆ ಪ್ರವೇಶ ಪಡೆಯಬಹುದು. ಅಲ್ಲಿ ಗೇಮ್ ಡೆವೆಲಪ್ ಮಾಡಬಹುದು, ವಸ್ತುಗಳನ್ನು ಹಾಗೂ ಸ್ಥಳಗಳನ್ನು ವರ್ಚುವಲ್ ಆಗಿ ಖರೀದಿಸಬಹುದು. ಇನ್ನೂ ಹಲವಾರು ಸಾಧ್ಯತೆಗಳು ಈ ದುನಿಯಾದಲ್ಲಿ ಇದೆ. ಒಟ್ಟಿನಲ್ಲಿ ಜನರಿಗೆ ಹೊಸದೊಂದು ಅನುಭೂತಿ ನೀಡಲು ‘ಕೆಜಿಎಫ್ ಮೆಟಾವರ್ಸ್’ ಸಿದ್ಧವಾಗುತ್ತಿದೆ.
ಮೆಟಾವರ್ಸ್ ಎಂಬುದು ಇಂಟರ್ನೆಟ್ ಲೋಕದ ಹೊಸ ಆವಿಷ್ಕಾರ. ಸೋಶಿಯಲ್ ಮೀಡಿಯಾಗಳ ಸ್ವರೂಪವನ್ನೇ ಇದು ಸಂಪೂರ್ಣವಾಗಿ ಬದಲಾಯಿಸಲಿದೆ. ಸಿನಿಮಾ ನೋಡುವ, ಶಾಪಿಂಗ್ ಮಾಡುವ, ಜನರ ಜೊತೆ ಸ್ನೇಹ ಬೆಳೆಸುವ, ಚರ್ಚೆ ನಡೆಸುವ.. ಹೀಗೆ ಎಲ್ಲ ಕ್ರಿಯೆಗಳೂ ಇಲ್ಲಿ ಹೊಸ ರೂಪ ಪಡೆದುಕೊಳ್ಳಲಿವೆ. ಇದು ಈಗ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಪ್ರಚಾರಕ್ಕೆ ಬಳಕೆ ಆಗುತ್ತಿದೆ. ಭಾರತೀಯ ಸಿನಿಮಾ ಜಗತ್ತಿನಲ್ಲಿ ಇಂಥದ್ದೊಂದು ವಿಭಿನ್ನ ಪ್ರಯತ್ನ ಮಾಡುವ ಮೂಲಕ ಈ ಚಿತ್ರ ಗಮನ ಸೆಳೆಯುತ್ತಿದೆ.
Get immersed in the digital space and become a part of the #KGFVerse by owning digital assets.
Stay tuned as the sale goes live on April 7th.
Check out for more: https://t.co/S1nl4zudU3#KGFChapter2 @TheNameIsYash @prashanth_neel @VKiragandur @hombalefilms pic.twitter.com/45HlhmK6q9
— Hombale Films (@hombalefilms) March 30, 2022
ಕನ್ನಡ ಚಿತ್ರರಂಗವನ್ನು ದೊಡ್ಡ ಸ್ಥಾನಕ್ಕೆ ಕೊಂಡೊಯ್ದ ಖ್ಯಾತಿ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾಗೆ ಇದೆ. ಈಗ ಈ ಸಿನಿಮಾದ ಎರಡನೇ ಪಾರ್ಟ್ ಬಿಡುಗಡೆ ಆಗುತ್ತಿದ್ದು ಸಹಜವಾಗಿಯೇ ನಿರೀಕ್ಷೆ ಮುಗಿಲು ಮುಟ್ಟಿದೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಂಜಯ್ ದತ್, ರವೀನಾ ಟಂಡನ್ ಮುಂತಾದವರು ಅಭಿನಯಿಸಿರುವುದರಿಂದ ಉತ್ತರ ಭಾರತದಲ್ಲೂ ಈ ಚಿತ್ರದ ಬಗ್ಗೆ ಹೈಪ್ ಸೃಷ್ಟಿ ಆಗಿದೆ. ಯಶ್ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಸೂಪರ್ ಹಿಟ್ ಆಗಿದೆ.
ಇದನ್ನೂ ಓದಿ:
‘ಕೆಜಿಎಫ್ 2’, ಉಪೇಂದ್ರ ಮತ್ತು ಸ್ಯಾಂಡಲ್ವುಡ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೇಳೋದು ಏನು?
‘ಕೆಜಿಎಫ್ 2’ ಮತ್ತು ‘ಬೀಸ್ಟ್’ ನಿರ್ದೇಶಕರ ನಡುವೆ ದೋಸ್ತಿ ಹೇಗಿದೆ ನೋಡಿ; ಕ್ಲ್ಯಾಶ್ ವಿಷಯ ಬಿಟ್ಟುಬಿಡಿ