ರೀ-ರಿಲೀಸ್​ ಆಗ್ತಿದೆ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ; ಈ ಆಫರ್​ ಸಿಗೋದು ಕೆಲವೇ ದಿನಗಳು ಮಾತ್ರ

KGF Chapter 1: ಏ.8ರಿಂದ ಏ.13ರವರೆಗೆ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ ಪ್ರದರ್ಶನ ಕಾಣಲಿದೆ ಎಂದು ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

ರೀ-ರಿಲೀಸ್​ ಆಗ್ತಿದೆ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ; ಈ ಆಫರ್​ ಸಿಗೋದು ಕೆಲವೇ ದಿನಗಳು ಮಾತ್ರ
ಯಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Mar 31, 2022 | 1:33 PM

ಸಿನಿಪ್ರಿಯರ ವಲಯದಲ್ಲಿ ಈಗ ಎಲ್ಲೆಲ್ಲೂ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದ ಚರ್ಚೆಯೇ ನಡೆಯುತ್ತಿದೆ. ನರಾಚಿಯಲ್ಲಿ ಗರುಡನ ಹತ್ಯೆ ಮಾಡಿದ ಬಳಿಕ ರಾಕಿ ಭಾಯ್​ ಮಾಡಿದ್ದೇನು? ಕಥೆಯಲ್ಲಿ ಮುಂದೇನು ನಡೆಯಿತು ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಏ.14ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ‘ಕೆಜಿಎಫ್​ 2’ (KGF 2) ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್​ ಬಿಡುಗಡೆಯಾಗಿ ಸಖತ್​ ಸದ್ದು ಮಾಡುತ್ತಿದೆ. ಯಶ್​ ನಟನೆ, ಡೈಲಾಗ್​ ಡೆಲಿವರಿ, ರೋಚಕವಾದ ಫೈಟಿಂಗ್​ ದೃಶ್ಯಗಳು, ಬೃಹತ್​ ಸೆಟ್​ಗಳು ಈ ಸಿನಿಮಾದಲ್ಲಿ ಹೇಗಿದೆ ಎಂಬುದಕ್ಕೆ ಈ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಶೀಘ್ರದಲ್ಲೇ ‘ಕೆಜಿಎಫ್​ 2’ ಟಿಕೆಟ್​ಗಳ ಬುಕಿಂಗ್​ ಕೂಡ ಓಪನ್​ ಆಗಲಿದೆ. ಆದರೆ ಅದಕ್ಕೂ ಮುನ್ನ ‘ಕೆಜಿಎಫ್​: ಚಾಪ್ಟರ್​ 1’ (KGF Chapter 1) ಸಿನಿಮಾ ಮರು ಬಿಡುಗಡೆ ಆಗಲಿದೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ದೇಶಾದ್ಯಂತ ವಿನಾಯಿತಿ ದರದಲ್ಲಿ ‘ಕೆಜಿಎಫ್​: ಚಾಪ್ಟರ್​ 1’ ಚಿತ್ರವನ್ನು ಪ್ರದರ್ಶನ ಮಾಡಲು ತೀರ್ಮಾನಿಸಲಾಗಿದೆ.

‘ಕೆಜಿಎಫ್​: ಚಾಪ್ಟರ್​ 1’ ತೆರೆಕಂಡಿದ್ದು 2018ರ ಡಿಸೆಂಬರ್​ನಲ್ಲಿ. ಅದಾಗಿ ಮೂರೂವರೆ ವರ್ಷವೇ ಕಳೆದಿದೆ. ಹಾಗಾಗಿ ಅನೇಕರಿಗೆ ಈ ಸಿನಿಮಾದ ಕಥೆಯ ವಿವರಗಳು ಮರೆತು ಹೋಗಿರಬಹುದು. ಕೆಲವರು ಚಿತ್ರಮಂದಿರದಲ್ಲಿ ಈ ಚಿತ್ರವನ್ನು ನೋಡಿಲ್ಲದೇ ಇರಬಹುದು. ಹಾಗಾಗಿ ಇನ್ನೊಮ್ಮೆ ಬಿಡುಗಡೆ ಮಾಡುವುದು ಸೂಕ್ತ ಎಂದು ತಂಡ ನಿರ್ಧರಿಸಿದೆ. ಆದ್ದರಿಂದ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 1’ ಚಿತ್ರ ಮರು ಬಿಡುಗಡೆ ಆಗಲಿದೆ.

ಏ.8ರಿಂದ ಏ.13ರವರೆಗೆ ಈ ಸಿನಿಮಾ ಪ್ರದರ್ಶನ ಕಾಣಲಿದೆ ಎಂದು ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಟ್ವೀಟ್​ ಮಾಡಿದ್ದಾರೆ. ಒಂದು ಕಥೆಯನ್ನು ಎರಡು ಪಾರ್ಟ್​ಗಳಲ್ಲಿ ಹೇಳುವುದು ಈಗ ಟ್ರೆಂಡ್​ ಆಗಿದೆ. ‘ಬಾಹುಬಲಿ’ ಸಿನಿಮಾ ಬಿಡುಗಡೆ ಆದ ಬಳಿಕ ಈ ಟ್ರೆಂಡ್​ ಚಾಲ್ತಿಗೆ ಬಂತು. ‘ಬಾಹುಬಲಿ 2’ ಸಿನಿಮಾ ತೆರೆ ಕಾಣುವುದಕ್ಕಿಂತ ಕೆಲವೇ ದಿನಗಳ ಮುನ್ನ ‘ಬಾಹುಬಲಿ 1’ ಚಿತ್ರವನ್ನು ರೀ-ರಿಲೀಸ್​ ಮಾಡಲಾಗಿತ್ತು. ಈಗ ಅದೇ ಮಾದರಿಯಲ್ಲಿ ‘ಕೆಜಿಎಫ್​: ಚಾಪ್ಟರ್​ 1’ ಚಿತ್ರ ಮರು ಬಿಡುಗಡೆ ಆಗುತ್ತಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಬಾಲಿವುಡ್​ ಕಲಾವಿದರಾದ ರವೀನಾ ಟಂಡನ್​ ಮತ್ತು ಸಂಜಯ್​ ದತ್​ ಅವರು ನಟಿಸಿರುವುದರಿಂದ ಉತ್ತರ ಭಾರತದ ಪ್ರೇಕ್ಷಕರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಇವರಿಬ್ಬರ ಪಾತ್ರಗಳು ಅಬ್ಬರಿಸಿವೆ. ರಮಿಕಾ ಸೇನ್​ ಎಂಬ ಪಾತ್ರದಲ್ಲಿ ರವೀನಾ ಟಂಡನ್​ ಕಾಣಿಸಿಕೊಂಡಿದ್ದರೆ, ಅಧೀರ ಎಂಬ ಪಾತ್ರಕ್ಕೆ ಸಂಜಯ್​ ದತ್​ ಬಣ್ಣ ಹಚ್ಚಿದ್ದಾರೆ.

‘ಕೆಜಿಎಫ್​ 2’ ರೀತಿಯೇ ತಮಿಳಿನ ‘ಬೀಸ್ಟ್​’ ಕೂಡ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆ ಕಾಣುತ್ತಿದೆ. ಆ ಚಿತ್ರ ‘ಕೆಜಿಎಫ್​ 2’ಗಿಂತ ಒಂದು ದಿನ ಮುಂಚೆ, ಅಂದರೆ ಏ.13ರಂದು ರಿಲೀಸ್​ ಆಗಲಿದೆ. ಆ ಕ್ಲ್ಯಾಶ್​ ಬಗ್ಗೆ ಇತ್ತೀಚೆಗೆ ಯಶ್​ ಪ್ರತಿಕ್ರಿಯೆ ನೀಡಿದರು. ‘ನಾವು ತುಂಬ ಮುಂಚೆಯೇ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದ್ವಿ. ಯಾವ ಸಿನಿಮಾ ರಿಲೀಸ್​ ಆಗುತ್ತದೆ ಅನ್ನೋದು ನಮಗೆ ಗೊತ್ತಿರಲಿಲ್ಲ. ಈಗ ವಿಜಯ್​ ಅವರ ಬೀಸ್ಟ್​ ಚಿತ್ರ ಬರುತ್ತಿದೆ. ಬೀಸ್ಟ್​ ವರ್ಸಸ್​ ಕೆಜಿಎಫ್​ ಅಂತ ಹೇಳಬಾರದು. ಬೀಸ್ಟ್​ ಮತ್ತು ಕೆಜಿಎಫ್​ ಎನ್ನಬೇಕು. ಎರಡೂ ಕೂಡ ಇಂಡಿಯನ್​ ಸಿನಿಮಾ. ಇದು ಎಲೆಕ್ಷನ್​ ಅಲ್ಲ, ಸಿನಿಮಾ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾತು ಇದರಲ್ಲಿ ಬರಲ್ಲ. ಎರಡೂ ಸಿನಿಮಾವನ್ನೂ ನೋಡೋಣ. ವಿಜಯ್ ಸರ್​ ನನಗಿಂತ ಸೀನಿಯರ್​. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್​ ಅವರ ಅಭಿಮಾನಿಗಳಿಗೂ ‘ಕೆಜಿಎಫ್​ 2’ ಸಿನಿಮಾ ಇಷ್ಟ ಆಗಲಿದೆ’ ಎಂದು ಯಶ್​ ಹೇಳಿದ್ದಾರೆ.

ಇದನ್ನೂ ಓದಿ:

ಯಶ್​ ಅವರಿಗೆ ಹಗ್​ ನೀಡಿದ ಸಂಜಯ್​ ದತ್​; ಇಲ್ಲಿದೆ ಫೋಟೋ ಗ್ಯಾಲರಿ

 ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ಗೆ ಕೋಟಿಕೋಟಿ ವೀಕ್ಷಣೆ; ಯಶ್ ಅವರನ್ನು ತಡೆಯುವವರೇ ಇಲ್ಲ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ