‘ತೂಫಾನ್’ ಅವತಾರದಲ್ಲಿ ಬಂದ ಯಶ್​; ‘ಕೆಜಿಎಫ್​ 2’ ಮೇಲಿನ ಕಾತರಕ್ಕೆ ಕಿಚ್ಚು ಹೊತ್ತಿಸಿವೆ ಈ ಲುಕ್​ಗಳು

Toofan Lyrical Video | Yash: ಯಶ್​ ಅಭಿಮಾನಿಗಳಿಂದ ‘ತೂಫಾನ್​’ ಲಿರಿಕಲ್​ ವಿಡಿಯೋಗೆ ಸಖತ್​ ರೆಸ್ಪಾನ್ಸ್​ ಸಿಗುತ್ತಿದೆ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಈ ಗೀತೆ ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀವ್ಸ್​ ಪಡೆದು ಮುನ್ನುಗ್ಗುತ್ತಿದೆ.

TV9 Web
| Updated By: ಮದನ್​ ಕುಮಾರ್​

Updated on: Mar 21, 2022 | 12:26 PM

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ‘ತೂಫಾನ್​..’ ಸಾಂಗ್​ ಬಿಡುಗಡೆ ಆಗಿದೆ. ಲಿರಿಕಲ್​ ಸಾಂಗ್​ ನೋಡಿ ಯಶ್​ ಅಭಿಮಾನಿಗಳು​ ಖುಷಿಪಟ್ಟಿದ್ದಾರೆ. ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಲು ಈ ಸಾಂಗ್​ ಸಹಕಾರಿ ಆಗಿದೆ. ಬಹುಭಾಷೆಯಲ್ಲಿ ‘ತೂಫಾನ್​’ ಸೌಂಡು ಮಾಡುತ್ತಿದೆ.

KGF Chapter 2 movie Toofan lyrical video song features Yash in angry young man getup

1 / 6
ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ‘ಕೆಜಿಎಫ್​ 2’ ಚಿತ್ರದಿಂದ ‘ತೂಫಾನ್​..’ ಹಾಡು ಮೂಡಿಬಂದಿದೆ. ಈ ಲಿರಿಕಲ್​ ವಿಡಿಯೋ​ ನೋಡಿದ ಅಭಿಮಾನಿಗಳು ಶಹಭಾಷ್​ ಎನ್ನುತ್ತಿದ್ದಾರೆ. ರವಿ ಬಸ್ರೂರು ಅವರ ಸಂಗೀತ ನಿರ್ದೇಶನದಲ್ಲಿ ಈ ಸಾಂಗ್​ ತಯಾರಾಗಿದೆ. ಸಾಹಿತ್ಯ ಕೂಡ ಅವರೇ ಬರೆದಿದ್ದಾರೆ.

KGF Chapter 2 movie Toofan lyrical video song features Yash in angry young man getup

2 / 6
ಈ ಹಾಡಿನಲ್ಲಿ ಯಶ್​ ಗೆಟಪ್​ ಗಮನ ಸೆಳೆಯುತ್ತಿದೆ. ಎಂದಿನಂತೆ ಅವರು ಆ್ಯಂಗ್ರಿ ಯಂಗ್​ ಮ್ಯಾನ್​ ಅವತಾರದಲ್ಲಿ ಲುಕ್​ ನೀಡಿದ್ದಾರೆ. ಖಳರ ಎದೆಯಲ್ಲಿ ನಡುಕ ಹುಟ್ಟಿಸುವ ಹಾಗೆ ಅಬ್ಬರಿಸಿದ್ದಾರೆ. ಹೊರರಾಜ್ಯಗಳಲ್ಲಿ ಇರುವ ಯಶ್​ ಫ್ಯಾನ್ಸ್​ ಕೂಡ ಸಾಂಗ್​ ನೋಡಿ ಜೈಕಾರ ಹಾಕುತ್ತಿದ್ದಾರೆ.

3 / 6
‘ತೂಫಾನ್’ ಅವತಾರದಲ್ಲಿ ಬಂದ ಯಶ್​; ‘ಕೆಜಿಎಫ್​ 2’ ಮೇಲಿನ ಕಾತರಕ್ಕೆ ಕಿಚ್ಚು ಹೊತ್ತಿಸಿವೆ ಈ ಲುಕ್​ಗಳು

ಮಾ.21ರ ಬೆಳಗ್ಗೆ 11.07ಕ್ಕೆ ‘ತೂಫಾನ್​’ ಲಿರಿಕಲ್​ ವಿಡಿಯೋ ರಿಲೀಸ್​ ಆಯಿತು. ಕೆಲವೇ ನಿಮಿಷಗಳಲ್ಲಿ ಕನ್ನಡ ವರ್ಷನ್​ ಹಾಡು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಕನ್ನಡ ಮಾತ್ರವಲ್ಲದೇ ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿಯೂ ‘ತೂಫಾನ್​’ ಹಾಡಿನ ಲಿರಿಕಲ್​ ವಿಡಿಯೋ ರಿಲೀಸ್​ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

4 / 6
‘ತೂಫಾನ್’ ಅವತಾರದಲ್ಲಿ ಬಂದ ಯಶ್​; ‘ಕೆಜಿಎಫ್​ 2’ ಮೇಲಿನ ಕಾತರಕ್ಕೆ ಕಿಚ್ಚು ಹೊತ್ತಿಸಿವೆ ಈ ಲುಕ್​ಗಳು

ಸಖತ್​ ಮಾಸ್​ ಆದಂತಹ ಹಾಡುಗಳನ್ನು ರವಿ ಬಸ್ರೂರು ಅವರು ‘ಕೆಜಿಎಫ್​​: ಚಾಪ್ಟರ್​ 1’ ಚಿತ್ರಕ್ಕೆ ನೀಡಿದ್ದರು. ಆ ಕಾರಣದಿಂದ ‘ಕೆಜಿಎಫ್​ 2’ ಸಿನಿಮಾದ ಸಾಂಗ್ಸ್​ ಮೇಲೆ ನಿರೀಕ್ಷೆ ಹೆಚ್ಚಿದೆ. ಮೊದಲ ಹಾಡು ಈಗ ಬಿಡುಗಡೆ ಆಗಿದೆ. ಉನ್ನುಳಿದ ಹಾಡುಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ‘ತೂಫಾನ್​’ ಹಾಡಿನಲ್ಲಿ ಒಂದೆರಡೆ ಖಡಕ್​ ಡೈಲಾಗ್​ಗಳು ಹೈಲೈಟ್​ ಆಗಿವೆ.

5 / 6
‘ತೂಫಾನ್’ ಅವತಾರದಲ್ಲಿ ಬಂದ ಯಶ್​; ‘ಕೆಜಿಎಫ್​ 2’ ಮೇಲಿನ ಕಾತರಕ್ಕೆ ಕಿಚ್ಚು ಹೊತ್ತಿಸಿವೆ ಈ ಲುಕ್​ಗಳು

ಏಪ್ರಿಲ್​ 14ರಂದು ‘ಕೆಜಿಎಫ್​: ಚಾಪ್ಟರ್ 2’ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹೊರದೇಶಗಳ ಚಿತ್ರಮಂದಿರಗಳಲ್ಲಿ ಸ್ಟ್ಯಾಂಡಿಗಳನ್ನು ನಿಲ್ಲಿಸಲು ಸಿದ್ಧತೆ ನಡೆದಿದೆ.

6 / 6
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ