- Kannada News Photo gallery KGF Chapter 2 movie Toofan lyrical video song features Yash in angry young man getup
‘ತೂಫಾನ್’ ಅವತಾರದಲ್ಲಿ ಬಂದ ಯಶ್; ‘ಕೆಜಿಎಫ್ 2’ ಮೇಲಿನ ಕಾತರಕ್ಕೆ ಕಿಚ್ಚು ಹೊತ್ತಿಸಿವೆ ಈ ಲುಕ್ಗಳು
Toofan Lyrical Video | Yash: ಯಶ್ ಅಭಿಮಾನಿಗಳಿಂದ ‘ತೂಫಾನ್’ ಲಿರಿಕಲ್ ವಿಡಿಯೋಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಈ ಗೀತೆ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ.
Updated on: Mar 21, 2022 | 12:26 PM

KGF Chapter 2 movie Toofan lyrical video song features Yash in angry young man getup

KGF Chapter 2 movie Toofan lyrical video song features Yash in angry young man getup

ಈ ಹಾಡಿನಲ್ಲಿ ಯಶ್ ಗೆಟಪ್ ಗಮನ ಸೆಳೆಯುತ್ತಿದೆ. ಎಂದಿನಂತೆ ಅವರು ಆ್ಯಂಗ್ರಿ ಯಂಗ್ ಮ್ಯಾನ್ ಅವತಾರದಲ್ಲಿ ಲುಕ್ ನೀಡಿದ್ದಾರೆ. ಖಳರ ಎದೆಯಲ್ಲಿ ನಡುಕ ಹುಟ್ಟಿಸುವ ಹಾಗೆ ಅಬ್ಬರಿಸಿದ್ದಾರೆ. ಹೊರರಾಜ್ಯಗಳಲ್ಲಿ ಇರುವ ಯಶ್ ಫ್ಯಾನ್ಸ್ ಕೂಡ ಸಾಂಗ್ ನೋಡಿ ಜೈಕಾರ ಹಾಕುತ್ತಿದ್ದಾರೆ.

ಮಾ.21ರ ಬೆಳಗ್ಗೆ 11.07ಕ್ಕೆ ‘ತೂಫಾನ್’ ಲಿರಿಕಲ್ ವಿಡಿಯೋ ರಿಲೀಸ್ ಆಯಿತು. ಕೆಲವೇ ನಿಮಿಷಗಳಲ್ಲಿ ಕನ್ನಡ ವರ್ಷನ್ ಹಾಡು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಕನ್ನಡ ಮಾತ್ರವಲ್ಲದೇ ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿಯೂ ‘ತೂಫಾನ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಸಖತ್ ಮಾಸ್ ಆದಂತಹ ಹಾಡುಗಳನ್ನು ರವಿ ಬಸ್ರೂರು ಅವರು ‘ಕೆಜಿಎಫ್: ಚಾಪ್ಟರ್ 1’ ಚಿತ್ರಕ್ಕೆ ನೀಡಿದ್ದರು. ಆ ಕಾರಣದಿಂದ ‘ಕೆಜಿಎಫ್ 2’ ಸಿನಿಮಾದ ಸಾಂಗ್ಸ್ ಮೇಲೆ ನಿರೀಕ್ಷೆ ಹೆಚ್ಚಿದೆ. ಮೊದಲ ಹಾಡು ಈಗ ಬಿಡುಗಡೆ ಆಗಿದೆ. ಉನ್ನುಳಿದ ಹಾಡುಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ‘ತೂಫಾನ್’ ಹಾಡಿನಲ್ಲಿ ಒಂದೆರಡೆ ಖಡಕ್ ಡೈಲಾಗ್ಗಳು ಹೈಲೈಟ್ ಆಗಿವೆ.

ಏಪ್ರಿಲ್ 14ರಂದು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹೊರದೇಶಗಳ ಚಿತ್ರಮಂದಿರಗಳಲ್ಲಿ ಸ್ಟ್ಯಾಂಡಿಗಳನ್ನು ನಿಲ್ಲಿಸಲು ಸಿದ್ಧತೆ ನಡೆದಿದೆ.




