KGF Chapter 2: ಸೆನ್ಸಾರ್ ಪ್ರಕ್ರಿಯೆ ಮುಗಿಸಿದ ‘ಕೆಜಿಎಫ್​ ಚಾಪ್ಟರ್​ 2’; ಚಿತ್ರದ ಅವಧಿ ಎಷ್ಟು?

ಈ ಸಿನಿಮಾದ ಅವಧಿ ಎಷ್ಟು? ಆ ಪ್ರಶ್ನೆಗೂ ಉತ್ತರ ಇದೆ. ‘ಕೆಜಿಎಫ್​ ಚಾಪ್ಟರ್​ 1’ ಅವಧಿ 2.35 ನಿಮಿಷ ಇತ್ತು. ಸಿನಿಮಾದ ಮೇಕಿಂಗ್​ ನೋಡಿ ಬಾಲಿವುಡ್​ ಮಂದಿಯೂ ಬೆರಗಾಗಿದ್ದರು. ಈಗ ‘ಕೆಜಿಎಫ್​ 2’ ಬರುತ್ತಿದೆ.

KGF Chapter 2: ಸೆನ್ಸಾರ್ ಪ್ರಕ್ರಿಯೆ ಮುಗಿಸಿದ ‘ಕೆಜಿಎಫ್​ ಚಾಪ್ಟರ್​ 2’; ಚಿತ್ರದ ಅವಧಿ ಎಷ್ಟು?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 31, 2022 | 2:36 PM

‘ಬಾಹುಬಲಿ’ (Bahubali) ತೆರೆಕಂಡ ನಂತರದಲ್ಲಿ ‘ಬಾಹುಬಲಿ 2’ ಚಿತ್ರದ ಬಗ್ಗೆ ದೊಡ್ಡ ಕೌತುಕ ಸೃಷ್ಟಿ ಆಗಿತ್ತು. ಆ ಬಳಿಕ ಸೀಕ್ಚೆಲ್ ಚಿತ್ರವೊಂದು ಹೆಚ್ಚು ನಿರೀಕ್ಷೆ ಸೃಷ್ಟಿ ಮಾಡಿದೆ ಎಂದರೆ ಅದು ಯಶ್ (Yash) ನಟನೆಯ ‘ಕೆಜಿಎಫ್​ 2’ (KGF Chapter 2) ಮಾತ್ರ. ಈ ಸಿನಿಮಾ ತೆರೆಗೆ ಬರೋಕೆ ಇನ್ನು ಕೇವಲ ಎರಡು ವಾರ ಬಾಕಿ ಇದೆ. ಚಿತ್ರದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾ ಟ್ರೇಲರ್ ಸೃಷ್ಟಿ ಮಾಡಿದ ದಾಖಲೆ ತುಂಬಾನೇ ದೊಡ್ಡದು. ಎಲ್ಲಾ ಭಾಷೆಗಳಲ್ಲಿ ಈ ಟ್ರೇಲರ್ ಕೋಟಿ ಕೋಟಿ ವೀಕ್ಷಣೆ ಕಂಡಿದೆ. ಈಗ ಚಿತ್ರದ ಸೆನ್ಸಾರ್​ ಪ್ರಕ್ರಿಯೆ ಮುಗಿದಿದೆ. ಈ ಚಿತ್ರ ಯಾವ ಪ್ರಮಾಣಪತ್ರ ಪಡೆದಿದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿದೆ.

‘ಕೆಜಿಎಫ್​ ಚಾಪ್ಟರ್​ 2’ ಚಿತ್ರವನ್ನು ಸೆನ್ಸಾರ್ ಮಂಡಳಿಯ ಎದುರು ಇಡಲಾಗಿತ್ತು. ಸಿನಿಮಾವನ್ನು ನೋಡಿರುವ ಸೆನ್ಸಾರ್ ಮಂಡಳಿಯವರು ‘ಯು/ಎ’ ಸರ್ಟಿಫಿಕೇಟ್​ ನೀಡಿದ್ದಾರೆ. ಅಂದರೆ, ಈ ಸಿನಿಮಾವನ್ನು ಎಲ್ಲರೂ ವೀಕ್ಷಣೆ ಮಾಡಬಹುದು. ಆದರೆ, 12 ವರ್ಷಕ್ಕಿಂತ ಕೆಳಗಿನವರು ತಂದೆ-ತಾಯಿಯ ಜತೆಯಲ್ಲಿ ಈ ಚಿತ್ರ ವೀಕ್ಷಣೆ ಮಾಡಬಹುದು.

ಹಾಗಾದರೆ, ಈ ಸಿನಿಮಾದ ಅವಧಿ ಎಷ್ಟು? ಆ ಪ್ರಶ್ನೆಗೂ ಉತ್ತರ ಇದೆ. ‘ಕೆಜಿಎಫ್​ ಚಾಪ್ಟರ್​ 1’ ಅವಧಿ 2.35 ನಿಮಿಷ ಇತ್ತು. ಸಿನಿಮಾದ ಮೇಕಿಂಗ್​ ನೋಡಿ ಬಾಲಿವುಡ್​ ಮಂದಿಯೂ ಬೆರಗಾಗಿದ್ದರು. ಈಗ ‘ಕೆಜಿಎಫ್​ 2’ ಬರುತ್ತಿದೆ. ಎರಡನೇ ಚಾಪ್ಟರ್​ನ ಅವಧಿ 168 ನಿಮಿಷ ಇದೆ. ಅಂದರೆ 2 ಗಂಟೆ 48 ನಿಮಿಷ ಸಿನಿಮಾ ಪ್ರದರ್ಶನ ಕಾಣಲಿದೆ.  ತಮಿಳು ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಕಾರ್ತಿಕ್​ ರವಿವರ್ಮ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಏಪ್ರಿಲ್​ 14ರಂದು ಐದು ಭಾಷೆಗಳಲ್ಲಿ ‘ಕೆಜಿಎಫ್​ 2’ ಸಿನಿಮಾ ತೆರೆಗೆ ಬರುತ್ತಿದೆ. ಮಾರ್ಚ್​ 27ರಂದು ನಡೆದ ನಡೆದ ಗ್ರ್ಯಾಂಡ್​ ಇವೆಂಟ್​ನಲ್ಲಿ ಐದೂ ಭಾಷೆಗಳಲ್ಲಿ ಟ್ರೇಲರ್ ಲಾಂಚ್​ ಆಗಿದೆ. ಇಂದು (ಮಾರ್ಚ್​ 31) ಮಧ್ಯಾಹ್ನ 1 ಗಂಟೆ ವೇಳೆಗೆ ಕನ್ನಡದಲ್ಲಿ ಈ ಸಿನಿಮಾದ ಟ್ರೇಲರ್ 2.2 ಕೋಟಿ (17 ಮಿಲಿಯನ್​) ವೀಕ್ಷಣೆ ಕಂಡಿದೆ. ಹಿಂದಿಯಲ್ಲಿ ಅತಿ ಹೆಚ್ಚು ಅಂದರೆ, 6.7 ಕೋಟಿ (67ಮಿಲಿಯನ್​) ವೀವ್ಸ್​ ಆಗಿದೆ. ತಮಿಳಿನಲ್ಲಿ 1.6 ಕೋಟಿ (16 ಮಿಲಿಯನ್​), ತೆಲುಗಿನಲ್ಲಿ 2.5 ಕೋಟಿ (25 ಮಿಲಿಯನ್​) ವೀಕ್ಷಣೆ ಕಂಡಿದೆ. ಮಲಯಾಳಂನಲ್ಲೂ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುವ ಸೂಚನೆ ಸಿಕ್ಕಿದೆ. ಮಲಯಾಳಂನಲ್ಲಿ ಈ ಸಿನಿಮಾದ ಟ್ರೇಲರ್​ 96 ಲಕ್ಷ ಬಾರಿ ವೀಕ್ಷಣೆ ಕಂಡಿದೆ.

ಇದನ್ನೂ ಓದಿ: ‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್​

 ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ಗೆ ಕೋಟಿಕೋಟಿ ವೀಕ್ಷಣೆ; ಯಶ್ ಅವರನ್ನು ತಡೆಯುವವರೇ ಇಲ್ಲ

Published On - 2:30 pm, Thu, 31 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ