AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್​

KGF Chapter 2 Trailer: : ಈ ಮೊದಲು ರಿಲೀಸ್ ಆಗಿದ್ದ ‘ತೂಫಾನ್​..’ ಹಾಡು ಅಬ್ಬರಿಸಿದೆ. ಕನ್ನಡ ವರ್ಷನ್​ಗಿಂತ ಹಿಂದಿ ವರ್ಷನ್​ನ ಹಾಡು ಹೆಚ್ಚು ವೀಕ್ಷಣೆ ಕಂಡಿದೆ. ಈಗ ಟ್ರೇಲರ್ ಅಬ್ಬರಿಸುತ್ತಿದೆ.

‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್​
ಯಶ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Mar 27, 2022 | 7:04 PM

Share

ಹಲವು ಸಮಯದಿಂದ ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ. ‘ಕೆಜಿಎಫ್​ 2’ ಚಿತ್ರದ ಟ್ರೇಲರ್ (KGF Chapter 2 Trailer)​ ಇಂದು (ಮಾರ್ಚ್​ 27) ರಿಲೀಸ್ ಆಗಿದೆ. ‘ಕೆಜಿಎಫ್​’ ಸಿನಿಮಾ ತೆರೆಕಂಡು ಮೂರು ವರ್ಷಗಳ ಬಳಿಕ ‘ಕೆಜಿಎಫ್​ 2’ ತೆರೆಗೆ ಬರುತ್ತಿದೆ. ಈ ಸಿನಿಮಾ ಹೇಗಿದೆ ಎನ್ನುವ ಝಲಕ್ ಇಂದು ರಿಲೀಸ್ ಆದ ಟ್ರೇಲರ್​ನಲ್ಲಿ ಸಿಕ್ಕಿದೆ. ಶಿವರಾಜ್​ಕುಮಾರ್ (Shivaraj Kumar) ಅವರು ಟ್ರೇಲರ್ ರಿಲೀಸ್ ಮಾಡಿ ಚಿತ್ರಕ್ಕೆ ಆಲ್​ ದಿ ಬೆಸ್ಟ್​ ಹೇಳಿದರು. ಖ್ಯಾತ ನಿರೂಪಕ ಕರಣ್​ ಜೋಹರ್ (Karan Johar)​ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.

ಕೆಜಿಎಫ್​ನ ಅಧಿಪತಿ ಆಗಿದ್ದ ಗರುಡನನ್ನು ಹತ್ಯೆ ಮಾಡಿದ ನಂತರದಲ್ಲಿ ಆ ಸಾಮ್ರಾಜ್ಯ ರಾಕಿಯ ಕೈ ಸೇರಿದೆ. ರಾಕಿ ನಟೋರಿಯಸ್​ ಗ್ಯಾಂಗ್​ಸ್ಟರ್​ ಹಾಗೂ ಉದ್ಯಮಿ ಎರಡೂ ಹೌದು. ‘ಕೆಜಿಎಫ್​ ಚಾಪ್ಟರ್​ 2 ’ ಟ್ರೇಲರ್ ತುಂಬಾನೇ ಅದ್ಭುತವಾಗಿ ಮೂಡಿ ಬಂದಿದೆ. ಯಶ್ ಪಾತ್ರ ಸಖತ್ ಹೈಲೈಟ್​ ಆಗಿದೆ. ಅಧೀರನಾಗಿ ಸಂಜಯ್​ ದತ್​ ಮಿಂಚಿದ್ದಾರೆ. ರಾಕಿ ಹಾಗೂ ಅಧೀರನ ನಡುವೆ ದೊಡ್ಡ ಫೈಟ್​ ಇದೆ ಎನ್ನುವ ಸೂಚನೆ ಟ್ರೇಲರ್​ನಲ್ಲಿ ಸಿಕ್ಕಿದೆ.

‘ರಕ್ತದಿಂದ ಬರೆದ ಕಥೆ ಇದು, ಶಾಹಿಯಿಂದ ಮುಂದುವರಿಸೋಕೆ ಆಗಲ್ಲ. ಮುಂದುವರಿಸಬೇಕು ಎಂದರೆ ಮತ್ತೆ ರಕ್ತವನ್ನೇ ಕೇಳತ್ತೆ’, ‘ಅಲ್ಲಿ ಬೀಳುವ ಹೆಣಗಳೂ ಉಪಯೋಗಕ್ಕೆ ಬರುತ್ತದೆ, ಬೇಕಿದ್ದರೆ ರಣಹದ್ದುಗಳನ್ನು ಕೇಳು’ ಎಂಬಿತ್ಯಾದಿ ಡೈಲಾಗ್​ಗಳು ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಟ್ರೇಲರ್​ನ ತೂಕವನ್ನು ಹೆಚ್ಚಿಸಿದೆ.

ಸಿನಿಮಾ ವಿಳಂಬ ಏಕೆ?

‘ಕೆಜಿಎಫ್​’ ಸಿನಿಮಾ ಸೃಷ್ಟಿಸಿದ ಹೈಪ್​ ತುಂಬಾನೇ ದೊಡ್ಡಮಟ್ಟದ್ದು. ಈ ಕಾರಣಕ್ಕೆ ‘ಕೆಜಿಎಫ್​ 2’ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಮೊದಲೇ ಸಿನಿಮಾ ತೆರೆಗೆ ಬಂದು ಅಬ್ಬರಿಸಬೇಕಿತ್ತು. ಮೊದಲ ಚಾಪ್ಟರ್​ ಪೂರ್ಣಗೊಳ್ಳುತ್ತಿದ್ದಂತೆ ಎರಡನೇ ಚಾಪ್ಟರ್​ ಕೆಲಸಗಳು ಆರಂಭಗೊಂಡಿದ್ದವು. ಆದರೆ, ಕೊವಿಡ್​ ಮೂರು ಅಲೆಗಳಿಂದ ಸಿನಿಮಾ ಕೆಲಸಗಳು ವಿಳಂಬ ಆದವು. ಈಗ ಮೂರನೇ ಅಲೆ ತಣ್ಣಗಾಗಿದೆ. ಹೀಗಾಗಿ, ಸಿನಿಮಾ ಏಪ್ರಿಲ್​ 14ರಂದು ರಿಲೀಸ್ ಆಗುತ್ತಿದೆ.

ಅಬ್ಬರಿಸಿದ್ದ ‘ತೂಫಾನ್​..’ ಸಾಂಗ್​

ಈ ಮೊದಲು ರಿಲೀಸ್ ಆಗಿದ್ದ ‘ತೂಫಾನ್​..’ ಹಾಡು ಅಬ್ಬರಿಸಿದೆ. ಕನ್ನಡ ವರ್ಷನ್​ಗಿಂತ ಹಿಂದಿ ವರ್ಷನ್​ನ ಹಾಡು ಹೆಚ್ಚು ವೀಕ್ಷಣೆ ಕಂಡಿದೆ. ಇದರಿಂದ ಸಿನಿಮಾ ಮೇಲೆ ಬಾಲಿವುಡ್​ ಮಂದಿ ಎಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದು ಸಾಬೀತಾಗಿದೆ.

ಸಿನಿಮಾದಲ್ಲಿದೆ ದೊಡ್ಡ ತಾರಾಗಣ..

‘ಕೆಜಿಎಫ್​ 2’ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಬಾಲಿವುಡ್​ನ ಖ್ಯಾತ ನಟ ಸಂಜಯ್ ದತ್​ ಅಧೀರನಾಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ರವೀನಾ ಟಂಡನ್​ ಹಲವು ವರ್ಷಗಳ ಬಳಿಕ ಸ್ಯಾಂಡಲ್​ವುಡ್​ಗೆ ಮರಳುತ್ತಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್​ ಚಿತ್ರದಲ್ಲಿ ನಟಿಸಿದ್ದಾರೆ. ಯಶ್​ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್​ 2’ ಟ್ರೇಲರ್ ಲಾಂಚ್​ಗೂ ಮುನ್ನ ಕ್ಯಾಮೆರಾಗೆ ಪೋಸ್​ ನೀಡಿದ ಸಂಜಯ್​ ದತ್​, ಪೃಥ್ವಿರಾಜ್​

‘ಕೆಜಿಎಫ್​ 2’ ಟ್ರೇಲರ್​ ಲಾಂಚ್ ಇವೆಂಟ್​​ನಲ್ಲಿ ಹಲವು ದಿಗ್ಗಜರು; ಇಲ್ಲಿದೆ ಲೈವ್ ವಿಡಿಯೋ

Published On - 6:49 pm, Sun, 27 March 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು