AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕೆಲಸ ಮಾಡಿದ್ರೆ ಅಭಿಮಾನಿಗಳಿಗೆ ಸಿಗುತ್ತೆ ಉಪೇಂದ್ರ ಜೊತೆ ಊಟ ಮಾಡುವ ಚಾನ್ಸ್​; ಏನಿದು ಟಾಸ್ಕ್​?

Home Minister Challenge: ಉಪೇಂದ್ರ ಹೇಳಿದ ರೀತಿಯಲ್ಲಿ ತುಂಬ ಚೆನ್ನಾಗಿ ರೀಲ್ಸ್​ ಮಾಡುವ ಮೂವರಿಗೆ ‘ಹೋಮ್ ಮಿನಿಸ್ಟರ್​’ ಸಿನಿಮಾದ ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಸಿಗಲಿದೆ. ಉಪ್ಪಿ ಜೊತೆ ಊಟ ಮಾಡುವ ಅವಕಾಶ ಕೂಡ ಸಿಗಲಿದೆ.

ಈ ಕೆಲಸ ಮಾಡಿದ್ರೆ ಅಭಿಮಾನಿಗಳಿಗೆ ಸಿಗುತ್ತೆ ಉಪೇಂದ್ರ ಜೊತೆ ಊಟ ಮಾಡುವ ಚಾನ್ಸ್​; ಏನಿದು ಟಾಸ್ಕ್​?
ಉಪೇಂದ್ರ
TV9 Web
| Edited By: |

Updated on: Mar 28, 2022 | 9:11 AM

Share

‘ರಿಯಲ್​ ಸ್ಟಾರ್​’ ಉಪೇಂದ್ರ (Upendra) ಅವರ ಅಭಿಮಾನಿ ಬಳಗ ದೊಡ್ಡದು. ನಟನಾಗಿ, ನಿರ್ದೇಶಕನಾಗಿ ಅವರು ಮಾಡಿರುವ ಸಾಧನೆ ಅಪಾರ. ಸೋಶಿಯಲ್​ ಮೀಡಿಯಾದಲ್ಲಿ ಉಪ್ಪಿ ಆ್ಯಕ್ಟೀವ್​ ಆಗಿರುತ್ತಾರೆ. ಈಗ ಅವರ ಹೊಸ ಸಿನಿಮಾ ‘ಹೋಮ್​ ಮಿನಿಸ್ಟರ್’ (Home Minister Movie) ಬಿಡುಗಡೆಗೆ ಸಜ್ಜಾಗಿದೆ. ಏ.1ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ತಮ್ಮ ಅಭಿಮಾನಿಗಳಿಗಾಗಿ ಉಪೇಂದ್ರ ಒಂದು ಟಾಸ್ಕ್​ ನೀಡಿದ್ದಾರೆ. ಅದನ್ನು ಚೆನ್ನಾಗಿ ಮಾಡಿದವರಿಗೆ ಎರಡು ಬಂಪರ್​ ಆಫರ್​ ಸಿಗಲಿದೆ. ‘ಹೋಮ್​ ಮಿನಿಸ್ಟರ್​’ ಸಿನಿಮಾ ವೀಕ್ಷಿಸಲು ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಉಚಿತವಾಗಿ ಸಿಗಲಿದೆ. ಅದಕ್ಕಿಂತಲೂ ಸೂಪರ್​ ಅವಕಾಶ ಎಂದರೆ ಉಪೇಂದ್ರ ಜೊತೆ ಕುಳಿತು ಊಟ ಮಾಡಬಹುದು! ಹೌದು, ಈ ಬಗ್ಗೆ ಉಪೇಂದ್ರ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಈ ಎರಡು ಚಾನ್ಸ್​ ಪಡೆಯಲು ಅಭಿಮಾನಿಗಳು (Upendra Fans) ಏನು ಮಾಡಬೇಕು? ಉಪ್ಪಿ ಹಾಕಿರುವ ಒಂದು ಸವಾಲನ್ನು ಸ್ವೀಕರಿಸಬೇಕು. ಉಪೇಂದ್ರ ಹೇಳಿದ ಕೆಲಸವನ್ನು ತುಂಬ ಚೆನ್ನಾಗಿ ಮಾಡುವ ಮೂವರಿಗೆ ಮಾತ್ರ ಈ ಚಾನ್ಸ್​ ಸಿಗಲಿದೆ. ಈ ಕುರಿತು ಉಪ್ಪಿ ಹಂಚಿಕೊಂಡಿರುವ ಒಂದು ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

‘ಹೋಮ್​ ಮಿನಿಸ್ಟರ್​’ ಚಿತ್ರದಲ್ಲಿ ಉಪೇಂದ್ರ ಮತ್ತು ವೇದಿಕಾ ಅವರು ಜೋಡಿಯಾಗಿ ನಟಿಸಿದ್ದಾರೆ. ಸಿನಿಮಾದ ಥೀಮ್​ಗೆ ತಕ್ಕಂತೆ ಉಪ್ಪಿ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಮನೆಯಲ್ಲಿ ತಮ್ಮ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಅನೇಕ ಕೆಲಸಗಳನ್ನು ಉಪ್ಪಿ ಮಾಡಿಕೊಟ್ಟಿದ್ದಾರೆ. ಮನೆ ಕ್ಲೀನ್​ ಮಾಡುವುದು, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಹೆಂಡತಿಯ ಸೇವೆ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಉಪೇಂದ್ರ ನಿಭಾಯಿಸಿದ್ದಾರೆ. ಅದೇ ರೀತಿ ಅಭಿಮಾನಿಗಳು ಕೂಡ ತಮ್ಮ ತಮ್ಮ ಮನೆಗಳಲ್ಲಿ ಈ ಕೆಲಸವನ್ನು ಮಾಡಬೇಕು. ಅದರ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಉಪೇಂದ್ರ ಅವರಿಗೆ ಟ್ಯಾಗ್​ ಮಾಡುವ ಮೂಲಕ ಹಂಚಿಕೊಳ್ಳಬೇಕು. ಹೀಗೆ ತುಂಬ ಚೆನ್ನಾಗಿ ರೀಲ್ಸ್​ ಮಾಡುವ ಮೂವರಿಗೆ ‘ಹೋಮ್ ಮಿನಿಸ್ಟರ್​’ ಸಿನಿಮಾದ ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಮತ್ತು ಉಪ್ಪಿ ಜೊತೆ ಊಟ ಮಾಡುವ ಅವಕಾಶ ಸಿಗಲಿದೆ.

View this post on Instagram

A post shared by Upendra (@nimmaupendra)

ಉಪೇಂದ್ರ ಹಾಕಿರುವ ಸವಾಲನ್ನು ಅನೇಕ ಅಭಿಮಾನಿಗಳು ಈಗಾಗಲೇ ಸ್ವೀಕರಿಸಿದ್ದಾರೆ. ಆ ಪೈಕಿ ಕೆಲವು ರೀಲ್ಸ್​ಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಉಪೇಂದ್ರ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಉಪೇಂದ್ರ ಅವರು ಹುಡುಗಿ ರೀತಿ ಡ್ರೆಸ್​ ಮಾಡಿಕೊಂಡಿದ್ದ ಫೋಟೋ ವೈರಲ್​ ಆಗಿತ್ತು. ಆ ಮೂಲಕ ‘ಹೋಮ್​ ಮಿನಿಸ್ಟರ್​’ ಬಗ್ಗೆ ಅಭಿಮಾನಿಗಳಲ್ಲಿ ಇನ್ನಷ್ಟು ಕೌತುಕ ಹೆಚ್ಚಿದೆ. ಈ ಚಿತ್ರಕ್ಕೆ ಸುಜಯ್​ ಕೆ. ಶ್ರೀಹರಿ ನಿರ್ದೇಶನ ಮಾಡಿದ್ದಾರೆ.

‘ಇದು ವಿಭಿನ್ನವಾದಂತಹ ಪ್ರಯತ್ನ. ಸಿನಿಮಾ ನೋಡಿದರೆ ಜನರಿಗೆ ಗೊತ್ತಾಗುತ್ತದೆ. ನಾವು ಮಾಡಿದ ಸಿನಿಮಾವನ್ನು ನಾವೇ ಹೊಗಳಬಾರದು. ಹೋಮ್ ಮಿನಿಸ್ಟರ್ ಎಂಬ ಟೈಟಲ್ ಕೇಳಿ ಥಿಯೇಟರ್ ಒಳಗೆ ಹೋದರೆ ನೀವು ಶಾಕ್ ಆಗ್ತೀರಿ. ಅಲ್ಲಿ ಬೇರೆಯದೇ ಹೋಮ್ ಮಿನಿಸ್ಟರ್ ಇರುತ್ತಾರೆ. ಈ ಸಿನಿಮಾದಲ್ಲಿ ಅದೇ ಸಸ್ಪೆನ್ಸ್. ನನಗಿಂತ ವೇದಿಕಾ ಪಾತ್ರ ಹೆಚ್ಚು ಚೆನ್ನಾಗಿದೆ. ಸಿನಿಮಾದಲ್ಲಿ ಅವರು ನನ್ನನ್ನು ಆಟ ಆಡಿಸ್ತಾರೆ. ಅವರು ತುಂಬ ಚೆನ್ನಾಗಿ ನಟಿಸಿದ್ದಾರೆ. ಹಲವು ಹುಡುಗಿಯರು ಈ ಸಿನಿಮಾದಲ್ಲಿ ಇದ್ದಾರೆ. ನಮ್ಮ ನಿರ್ಮಾಪಕರಿಗೆ ಗ್ಲಾಮರ್ ಎಂದರೆ ಇಷ್ಟ. ಮಲೇಷಿಯಾ, ಥಾಯ್ಲೆಂಡ್​ನಲ್ಲಿ ಶೂಟಿಂಗ್ ಮಾಡಲಾಗಿದೆ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ಹೇಳಿದ್ದರು.

ಹಲವಾರು ಪ್ರಾಜೆಕ್ಟ್​ಗಳಲ್ಲಿ ಉಪೇಂದ್ರ ಬ್ಯುಸಿ ಆಗಿದ್ದಾರೆ. ತಮ್ಮದೇ ನಿರ್ದೇಶನದ ಹೊಸ ಚಿತ್ರವನ್ನು ಅವರು ಇತ್ತೀಚೆಗೆ ಅನೌನ್ಸ್ ಮಾಡಿದರು. ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಜೊತೆಗಿನ ಹೊಸ ಪ್ರಾಜೆಕ್ಟ್​ ಕೂಡ ಘೋಷಣೆ ಆಗಿದೆ.

ಇದನ್ನೂ ಓದಿ:

ಉಪ್ಪಿ ಡೈರೆಕ್ಷನ್​ ಸಿನಿಮಾ ಟೈಟಲ್​ ಅರ್ಥವೇನು?; ಎಲ್ಲವನ್ನೂ ವಿವರಿಸಿದ ಪ್ರಿಯಾಂಕಾ ಉಪೇಂದ್ರ

ಕೊಂಬು ಇರುವ ಕುದುರೆ ಏರಿ ಬಂದ ಉಪೇಂದ್ರ; ನಿರ್ದೇಶನದ ಹೊಸ ಚಿತ್ರದಲ್ಲಿ ಹೇಗಿದೆ ನೋಡಿ ಉಪ್ಪಿ ಫಸ್ಟ್​ ಲುಕ್​

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ