ಉಪೇಂದ್ರ ಹೊಸ ಚಿತ್ರಕ್ಕೆ ರಾಮ್​ ಗೋಪಾಲ್ ವರ್ಮ ನಿರ್ದೇಶನ; ಗ್ಯಾಂಗ್​ಸ್ಟರ್​ ಕಥೆಯಲ್ಲಿ ಉಪ್ಪಿ

ಸಿನಿಮಾಗಳನ್ನು ರಾ ಆಗಿ ಮಾಡೋಕೆ ಆರ್​ಜಿವಿ ಎತ್ತಿದ ಕೈ. ಕ್ರೈಮ್​ ಥ್ರಿಲ್ಲರ್​ ಮಾದರಿಯ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಈಗ ಅವರು ಗ್ಯಾಂಗ್​ಸ್ಟರ್​ ಕಥೆ ಹೇಳುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ಹುಟ್ಟಿದೆ.

ಉಪೇಂದ್ರ ಹೊಸ ಚಿತ್ರಕ್ಕೆ ರಾಮ್​ ಗೋಪಾಲ್ ವರ್ಮ ನಿರ್ದೇಶನ; ಗ್ಯಾಂಗ್​ಸ್ಟರ್​ ಕಥೆಯಲ್ಲಿ ಉಪ್ಪಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 25, 2022 | 4:20 PM

ರಾಮ್​ ಗೋಪಾಲ್​ ವರ್ಮ (Ram Gopal Varma) ಅವರು ನಿರ್ದೇಶನದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಸ್ಯಾಂಡಲ್​​ವುಡ್​ ಸ್ಟಾರ್ ನಟರ ಜತೆ ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ಈಗ ಉಪೇಂದ್ರ (Upendra) ಜತೆ ಆರ್​ಜಿವಿ (RJV) ಕೈ ಜೋಡಿಸಿದ್ದಾರೆ. ಇಬ್ಬರೂ ಸೇರಿ ಹೊಸ ಸಿನಿಮಾ ಮಾಡುತ್ತಿದ್ದು, ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಟ್ವಿಟರ್​ನಲ್ಲಿ ರಾಮ್​ ಗೋಪಾಲ್ ವರ್ಮ ಈ ಬಗ್ಗೆ ಅನೌನ್ಸ್​ಮೆಂಟ್​ ಮಾಡಿದ್ದಾರೆ. ವಿಶೇಷ ಎಂದರೆ, ಭಾರತದ ದೊಡ್ಡ ಗ್ಯಾಂಗ್​ಸ್ಟರ್​ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಸಿನಿಮಾ ಬಗ್ಗೆ ರಿಲೀಸ್ ಆಗಿರುವ ಚಿಕ್ಕ ವಿಡಿಯೋ ತುಣುಕು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ಸಿನಿಮಾಗಳನ್ನು ರಾ ಆಗಿ ಮಾಡೋಕೆ ಆರ್​ಜಿವಿ ಎತ್ತಿದ ಕೈ. ಕ್ರೈಮ್​ ಥ್ರಿಲ್ಲರ್​ ಮಾದರಿಯ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಈಗ ಅವರು ಗ್ಯಾಂಗ್​ಸ್ಟರ್​ ಕಥೆ ಹೇಳುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ಹುಟ್ಟಿದೆ. ‘ನನ್ನ ಹೊಸ ಸಿನಿಮಾ ಘೋಷಿಸಲು ಸಂತೋಷವಾಗುತ್ತಿದೆ. ಭಾರತದ ಕ್ರಿಮಿನಲ್ ಇತಿಹಾಸದಲ್ಲಿ ವಿಸ್ಮಯಕಾರಿಯಾಗಿ ಹಾಗೂ ವಿಶಿಷ್ಟ ದರೋಡೆಕೋರ ಎನಿಸಿಕೊಂಡಿರುವ ವ್ಯಕ್ತಿಯ ಜೀವನ ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇದಕ್ಕೆ ‘ಆರ್​’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರವನ್ನು ಎ ಸ್ಕ್ವೇರ್ ಪ್ರೊಡಕ್ಷನ್ಸ್ ನಿರ್ಮಿಸಲಿದೆ’ ಎಂದು ರಾಮ್​ ಗೋಪಾಲ್​ ವರ್ಮ ಬರೆದುಕೊಂಡಿದ್ದಾರೆ.

ಹಂಚಿಕೊಂಡಿರುವ ಸಣ್ಣ ವಿಡಿಯೋ ತುಣುಕಿನಲ್ಲಿ ಉಪೇಂದ್ರ ಅವರು ಚಾಕು ಹಿಡಿದು ಕಾಣಿಸಿಕೊಂಡಿದ್ದಾರೆ. ಅಲ್ಲದೆ, ವಿಡಿಯೋದಲ್ಲಿ ಅವರು ಚಾಕುಗೆ ಮುತ್ತು ಕೊಡುತ್ತಿದ್ದಾರೆ. ಮುಳ್ಳು ಬೇಲಿಗಳ ಮಧ್ಯೆ ‘ಆರ್​’ ಚಿತ್ರದ ಶೀರ್ಷಿಕೆ ಇದೆ. ಅಲ್ಲದೆ, ಬ್ಯಾಕ್​ಗ್ರೌಂಡ್​ನಲ್ಲಿ ರಕ್ತದ ಕಲೆ ಇದೆ. ಈ ಮೂಲಕ ಸಿನಿಮಾದಲ್ಲಿ ರಕ್ತದೋಕುಳಿ ಇರಲಿದೆ ಎಂಬುದು ಪಕ್ಕಾ ಆಗಿದೆ.

ಈ ಮೊದಲು ರಾಮ್​ ಗೋಪಾಲ್​ ವರ್ಮ ಅವರು ಶಿವರಾಜ್​ಕುಮಾರ್​ಗೆ ಆ್ಯಕ್ಷನ್​ ಕಟ್​ ಹೇಳಿದ್ದರು. ‘ಕಿಲ್ಲಿಂಗ್​ ವೀರಪ್ಪನ್​’ ಸಿನಿಮಾ ಆರ್​ಜಿವಿ ಅವರ ಮೊದಲ ಕನ್ನಡ ಸಿನಿಮಾ. ತೆಲುಗು ಭಾಷೆಯಲ್ಲೂ ಚಿತ್ರ ರಿಲೀಸ್ ಆಗಿತ್ತು. ಆ ಬಳಿಕ ಡಾಲಿ ಧನಂಜಯ ನಟನೆಯ ‘ಭೈರವ ಗೀತ’ ಚಿತ್ರವನ್ನು ಆರ್​ಜಿವಿ ನಿರ್ಮಾಣ ಮಾಡಿದ್ದರು. ಇದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್​ ಆಗಿತ್ತು. ಈಗ ಉಪೇಂದ್ರ ಜತೆ ಅವರು ಸಿನಿಮಾ ಮಾಡುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ? ಇದು ಯಾರ ಬಗ್ಗೆ ಮಾಡುತ್ತಿರುವ ಸಿನಿಮಾ, ತಾಂತ್ರಿಕ ವರ್ಗ ಹೇಗಿರಲಿದೆ ಎಂಬ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ: ಹುಡುಗಿಯ​ ಅಂಗದ ಬಗ್ಗೆ ಮಾತನಾಡಿ ಕಾಫಿ ಶಾಪ್​ನಲ್ಲಿ ಕೆನ್ನೆಗೆ ಏಟು ತಿಂದ ರಾಮ್​ ಗೋಪಾಲ್​ ವರ್ಮಾ

‘ಪುನೀತ್​ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್​ ಗೋಪಾಲ್​ ವರ್ಮಾ

Published On - 2:33 pm, Fri, 25 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ