ಹುಡುಗಿಯ​ ಅಂಗದ ಬಗ್ಗೆ ಮಾತನಾಡಿ ಕಾಫಿ ಶಾಪ್​ನಲ್ಲಿ ಕೆನ್ನೆಗೆ ಏಟು ತಿಂದ ರಾಮ್​ ಗೋಪಾಲ್​ ವರ್ಮಾ

ಯುವ ನಟಿಯರ ಜತೆ ಕಾಣಿಸಿಕೊಳ್ಳುವ ಅವರು ಭಿನ್ನ ವಿಡಿಯೋಗಳನ್ನು ಮಾಡಿ ಪೋಸ್ಟ್​ ಮಾಡುತ್ತಿದ್ದಾರೆ. ಕೆಲವು ವಿಡಿಯೋಗಳು ತುಂಬಾನೇ ಬೋಲ್ಡ್ ಹಾಗೂ ಸೆನ್ಸಾರ್​ ರಹಿತವಾಗಿರುತ್ತದೆ.

ಹುಡುಗಿಯ​ ಅಂಗದ ಬಗ್ಗೆ ಮಾತನಾಡಿ ಕಾಫಿ ಶಾಪ್​ನಲ್ಲಿ ಕೆನ್ನೆಗೆ ಏಟು ತಿಂದ ರಾಮ್​ ಗೋಪಾಲ್​ ವರ್ಮಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 03, 2021 | 6:03 PM

ರಾಮ್​ ಗೋಪಾಲ್​ ವರ್ಮಾ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರು ಚಿತ್ರವಿಚಿತ್ರವಾಗಿ ನಡೆದುಕೊಳ್ಳುತ್ತಿರುವುದು. ಯುವ ನಟಿಯರ ಜತೆ ಕಾಣಿಸಿಕೊಳ್ಳುವ ಅವರು ಭಿನ್ನ ವಿಡಿಯೋಗಳನ್ನು ಮಾಡಿ ಪೋಸ್ಟ್​ ಮಾಡುತ್ತಿದ್ದಾರೆ. ಕೆಲವು ವಿಡಿಯೋಗಳು ತುಂಬಾನೇ ಬೋಲ್ಡ್ ಹಾಗೂ ಸೆನ್ಸಾರ್​ ರಹಿತವಾಗಿರುತ್ತದೆ. ಇದಕ್ಕೆ ಈಗ ಹೊಸದೊಂದು ಸೇರ್ಪಡೆ ಆಗಿದೆ. ಮಾಡೆಲ್​ ಹಾಗೂ ನಟಿ ಆಶು ರೆಡ್ಡಿ ಜತೆ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ ರಾಮ್​ ಗೋಪಾಲ್​ ವರ್ಮಾ.

ಆಶು ರೆಡ್ಡಿ ಕಾಫಿ ಶಾಪ್​ನಲ್ಲಿ ಕೂತಿರುತ್ತಾರೆ. ಈ ವೇಳೆ ಐಷಾರಾಮಿ ಕಾರಿನಲ್ಲಿ ಬರುತ್ತಾರೆ ರಾಮ್​ ಗೋಪಾಲ್​ ವರ್ಮಾ. ಕಾಫಿ ಶಾಪ್​ ಒಳಗೆ ಬರುವ ಆರ್​ಜಿವಿ, ‘ನಾನು ಯಾರು ಎಂದು ಗೊತ್ತಾಯ್ತಾ’ ಎಂದು ನಟಿಯನ್ನು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಆ ಕಡೆಯಿಂದ ಇಲ್ಲ ಎನ್ನುವ ಉತ್ತರ ಬರುತ್ತದೆ. ನಂತರ ಇಬ್ಬರೂ ಮಾತುಕತೆ ಆರಂಭಿಸುತ್ತಾರೆ. ಈ ವೇಳೆ ಆರ್​ಜಿವಿ, ‘ನಿಮ್ಮ ತೊಡೆ ಉತ್ತಮವಾಗಿದೆ’ ಎನ್ನುತ್ತಾರೆ. ಈ ವೇಳೆ ಕೋಪಗೊಳ್ಳುವ ಆಶು, ಆರ್​ಜಿವಿ ಕೆನ್ನೆಗೆ ಬಾರಿಸುತ್ತಾರೆ.

ಅಂದಹಾಗೆ ಇದು ಸಂಪೂರ್ಣವಾಗಿ ಸ್ಕ್ರಿಪ್ಟೆಡ್​. ಆಶು ಜತೆ ಸಂದರ್ಶನ ನಡೆಸಿದ್ದಾರೆ ಆರ್​ಜಿವಿ. ಇದರ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ. ಪೂರ್ತಿ ಸಂದರ್ಶನದ ವಿಡಿಯೋ ಇನ್ನಷ್ಟೇ ಬರಬೇಕಿದೆ. ಈ ವಿಡಿಯೋ ನೋಡಿದ ಅನೇಕರು ಚಿತ್ರವಿಚಿತ್ರವಾಗಿ ಕಮಂಟ್​ ಮಾಡಿದ್ದಾರೆ.

ಇತ್ತೀಚೆಗೆ ರಾಮ್ ಗೋಪಾಲ್ ವರ್ಮಾ ಅವರು ಇನಾಯಾ ಸುಲ್ತಾನ ಜತೆ ಡಾನ್ಸ್​ ಮಾಡಿದ್ದರು. ವಿಡಿಯೋದಲ್ಲಿರುವುದು ಅವರಿಬ್ಬರೇ ಅನ್ನೋದು ತಿಳಿದು ಬಂದಿತ್ತು. ಆದರೆ, ವಿಡಿಯೋದಲ್ಲಿರುವ ವ್ಯಕ್ತಿ ತಾವಲ್ಲ ಎಂದಿದ್ದರು ಆರ್​ಜಿವಿ. ‘ಈ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ. ಕೆಂಪು ಬಟ್ಟೆ ಧರಿಸಿರುವುದು ಇನಾಯಾ ಅಲ್ಲ. ಬೇಕಿದ್ದರೆ ನಾನು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಮೇಲೆ ಪ್ರಮಾಣ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದರು ರಾಮ್​ ಗೋಪಾಲ್​ ವರ್ಮಾ. ಈ ವಿಡಿಯೋ ವಿಚಾರವಾಗಿಟ್ಟುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀತಿಯಲ್ಲಿ ಟೀಕಿಸಲಾಗಿತ್ತು.

ಇದನ್ನೂ ಓದಿ: ನಟಿಯ ಜತೆ ಮನ ಬಂದಂತೆ ಡ್ಯಾನ್ಸ್​ ಮಾಡಿ ಕಾಲಿಗೆ ನಮಸ್ಕರಿಸಿದ ಆರ್​ಜಿವಿ; ವಿಡಿಯೋ ವೈರಲ್

Ram Gopal Varma Birthday: ಇದು ನನ್ನ ಬರ್ತ್​ಡೇ ಅಲ್ಲ; ಡೆತ್​ ಡೇ! ಹುಟ್ಟುಹಬ್ಬದ ದಿನವೇ ರಾಮ್​ ಗೋಪಾಲ್​ ವರ್ಮಾ ಶಾಕಿಂಗ್​ ಮಾತು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ