Ram Gopal Varma Birthday: ಇದು ನನ್ನ ಬರ್ತ್​ಡೇ ಅಲ್ಲ; ಡೆತ್​ ಡೇ! ಹುಟ್ಟುಹಬ್ಬದ ದಿನವೇ ರಾಮ್​ ಗೋಪಾಲ್​ ವರ್ಮಾ ಶಾಕಿಂಗ್​ ಮಾತು

ಜನಪ್ರಿಯ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಆದರೆ ಅದಕ್ಕೆ ಆರ್​ಜಿವಿ ನೀಡಿದ ಉತ್ತರ ವಿಚಿತ್ರವಾಗಿದೆ.

  • TV9 Web Team
  • Published On - 11:12 AM, 7 Apr 2021
Ram Gopal Varma Birthday: ಇದು ನನ್ನ ಬರ್ತ್​ಡೇ ಅಲ್ಲ; ಡೆತ್​ ಡೇ! ಹುಟ್ಟುಹಬ್ಬದ ದಿನವೇ ರಾಮ್​ ಗೋಪಾಲ್​ ವರ್ಮಾ ಶಾಕಿಂಗ್​ ಮಾತು
ರಾಮ್​ ಗೋಪಾಲ್​ ವರ್ಮಾ

ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರಿಗೆ ಅಭಿಮಾನಿಗಳು ಇಂದು (ಏ.7) ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಆದರೆ ಆ ಶುಭ ಹಾರೈಕೆಗಳನ್ನು ಸ್ವೀಕರಿಸಲು ಆರ್​ಜಿವಿ ಸಿದ್ಧರಿಲ್ಲ. ಅಷ್ಟೇ ಅಲ್ಲ, ತಮಗೆ ಜನ್ಮದಿನದ ಶುಭಾಶಯ ತಿಳಿಸಿದವರಿಗೆ ಸಿಕ್ಕಾಪಟ್ಟೆ ವಿಚಿತ್ರವಾಗಿ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದನ್ನು ನೋಡಿದ ಅನೇಕರು ಶಾಕ್​ ಆಗಿದ್ದಾರೆ. ಹುಟ್ಟುಹಬ್ಬದ ದಿನವೇ ಸಾವಿನ ಮಾತು ಆಡುತ್ತಿದ್ದಾರೆ ವರ್ಮಾ!

ರಾಮ್​ ಗೋಪಾಲ್​ ವರ್ಮಾ ಎಂದರೆ ವಿವಾದಕ್ಕೆ, ವಿಚಿತ್ರ ವರ್ತನೆಗೆ ಫೇಮಸ್​. ಬರ್ತ್​ಡೇ ದಿನವೂ ಅವರು ತಮ್ಮ ಚಾಳಿ ಮುಂದುವರಿಸಿದ್ದಾರೆ. ಪ್ರೀತಿಯಿಂದ ಅಭಿಮಾನಿಗಳು ವಿಶ್​ ಮಾಡಿದರೆ, ಅದಕ್ಕೆ ಪ್ರತಿಯಾಗಿ ಥ್ಯಾಂಕ್ಸ್​ ಎನ್ನುವ ಬದಲು, ವರ್ಮಾ ‘ನೋ ಥ್ಯಾಂಕ್ಸ್​’ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ‘ಇದು ನನ್ನ ಡೆತ್​ ಡೇ’ ಎಂದು ಅಮಂಗಳದ ಮಾತುಗಳನ್ನು ವರ್ಮಾ ಹೇಳಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.

ರಾಮ್​ ಗೋಪಾಲ್​ ವರ್ಮಾ ಅವರ ಲಾಜಿಕ್​ ಪ್ರಕಾರ ಜನ್ಮದಿನ ಎಂದರೆ ಅದು ಸಾವಿನ ದಿನ. ‘ಇಂದು ನನ್ನ ಬರ್ತ್​ಡೇ ಅಲ್ಲ. ಇದು ಡೆತ್​ ಡೇ. ಯಾಕೆಂದರೆ, ನನ್ನ ಜೀವನದ ಇನ್ನೊಂದು ವರ್ಷ ಸತ್ತುಹೋಯಿತು’ ಎಂದು ಆರ್​ಜಿವಿ ಟ್ವೀಟ್​ ಮಾಡಿದ್ದಾರೆ. ಅಂದಹಾಗೆ, ವರ್ಮಾ ಈ ರೀತಿ ಹೇಳಿರುವುದು ಹೊಸದೇನೂ ಅಲ್ಲ. ಹಲವು ವರ್ಷಗಳಿಂದ ಅವರು ಈ ಮಾತನ್ನು ಹೇಳುತ್ತ ಬಂದಿದ್ದಾರೆ. ‘ನಾನು ಮಾಡಿರುವ ಪಾಪಗಳಿಂದ ನಾನು ಯಾವಾಗಲೋ ಸತ್ತು ಹೋಗಿದ್ದೇನೆ’ ಎಂದು 2013ರಲ್ಲಿಯೇ ಆರ್​ಜಿವಿ ಟ್ವೀಟ್​ ಮಾಡಿದ್ದರು.

ರಾಮ್​ ಗೋಪಾಲ್​ ವರ್ಮಾ ಅವರ ಈ ಹುಚ್ಚಾಟಗಳನ್ನು ನೋಡಿದ ಅವರ ಅಭಿಮಾನಿಗಳು ತಮ್ಮ ವರಸೆ ಕೂಡ ಬದಲಾಯಿಸಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಹ್ಯಾಪಿ ಬರ್ತ್​ಡೇ ಎಂದು ವಿಶ್​ ಮಾಡುವುದು ಸಹಜ. ಆದರೆ ರಾಮ್​ ಗೋಪಾಲ್​ ವರ್ಮಾಗೆ ಎಲ್ಲರೂ ಅನ್​ಹ್ಯಾಪಿ ಬರ್ತ್​ಡೇ ಎಂದು ವಿಶ್​ ಮಾಡುತ್ತಿದ್ದಾರೆ!

ಆರ್​ಜಿವಿ ರೀತಿಯೇ ಅವರ ಅಭಿಮಾನಿಗಳು ಕೂಡ ವಿಲಕ್ಷಣವಾಗಿ ವರ್ತಿಸುತ್ತಿದ್ದಾರೆ, ಸೋಶಿಯಲ್​ ಮೀಡಿಯಾದಲ್ಲಿ ಹೀಗೆ ಹಾರೈಸುತ್ತಿದ್ದಾರೆ. #unhappybirthdayrgv ಎಂಬ ಹ್ಯಾಶ್​ಟ್ಯಾಗ್​ ಮೂಲಕ ಸದ್ದು ಮಾಡುತ್ತಿದ್ದಾರೆ. ಇದು ಟ್ವಿಟರ್​ನಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: Happy Birthday Ram Gopal Varma: ವಿಚಿತ್ರ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾಗೆ ಅಷ್ಟೇ ವಿಚಿತ್ರವಾದ ಬರ್ತ್​ಡೇ ವಿಶ್​!

Ram Gopal Varma Top 5 Movies: ಸಿನಿಮಾ ರಂಗದ ದೈತ್ಯ ಪ್ರತಿಭೆ ರಾಮ್ ಗೋಪಾಲ್ ವರ್ಮಾರ 5 ವಿಲಕ್ಷಣ ಸಿನಿಮಾಗಳಿವು

 

(Ram Gopal Varma Birthday: it’s not my birthday but it’s my death day says RGV)