AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Ram Gopal Varma: ವಿಚಿತ್ರ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾಗೆ ಅಷ್ಟೇ ವಿಚಿತ್ರವಾದ ಬರ್ತ್​ಡೇ ವಿಶ್​!

Unhappy Birthday RGV: ಹುಟ್ಟುಹಬ್ಬಕ್ಕೆ ಹ್ಯಾಪಿ ಬರ್ತ್​ಡೇ ಎಂದು ವಿಶ್​ ಮಾಡುವುದು ಸಹಜ. ಆದರೆ ರಾಮ್​ ಗೋಪಾಲ್​ ವರ್ಮಾಗೆ ಎಲ್ಲರೂ ಅನ್​ಹ್ಯಾಪಿ ಬರ್ತ್​ಡೇ ಎಂದು ವಿಶ್​ ಮಾಡುತ್ತಿದ್ದಾರೆ! ಹೌದು, ಆರ್​ಜಿವಿ ರೀತಿಯೇ ಅವರ ಅಭಿಮಾನಿಗಳು ಕೂಡ ವಿಲಕ್ಷಣವಾಗಿಯೇ ವರ್ತಿಸುತ್ತಿದ್ದಾರೆ.

Happy Birthday Ram Gopal Varma: ವಿಚಿತ್ರ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾಗೆ ಅಷ್ಟೇ ವಿಚಿತ್ರವಾದ ಬರ್ತ್​ಡೇ ವಿಶ್​!
ರಾಮ್​ ಗೋಪಾಲ್​ ವರ್ಮಾ
ಮದನ್​ ಕುಮಾರ್​
|

Updated on: Apr 07, 2021 | 8:58 AM

Share

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರಿಗೆ ಇಂದು (ಏ.7) ಜನ್ಮದಿನ. ಅವರಿಗೆ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿವೆ. ಬಹುಭಾಷೆಯಲ್ಲಿ ಅಪಾರ ಜನಪ್ರಿಯತೆ ಪಡೆದ ಆರ್​ಜಿವಿ 59ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೂರು ದಶಕಗಳ ವೃತ್ತಿಜೀವನದಲ್ಲಿ ಅವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಆದರೂ ಅವರನ್ನು ಇಷ್ಟಪಡುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಇಂದು ರಾಮ್​ ಗೋಪಾಲ್​ ವರ್ಮಾಗೆ ಶುಭಕೋರುತ್ತಿದ್ದಾರೆ.

ಸಂಪೂರ್ಣ ಡಿಫರೆಂಟ್​ ಆಗಿ ಆಲೋಚಿಸುವಲ್ಲಿ ರಾಮ್​ ಗೋಪಾಲ್​ ವರ್ಮಾ ಫೇಮಸ್​. ಡಿಫರೆಂಟ್​ ಎನ್ನುವುದಕ್ಕಿಂತಲೂ ವಿಚಿತ್ರ ಮತ್ತು ವಿಲಕ್ಷಣ ಎಂಬ ಪದಗಳು ಆರ್​ಜಿವಿಗೆ ಹೆಚ್ಚು ಸೂಕ್ತ ಎನಿಸುತ್ತವೆ. ಎಲ್ಲರೂ ಒಂದು ರೀತಿಯಲ್ಲಿ ಯೋಚಿಸಿದರೆ ಆರ್​ಜಿವಿ ಅದಕ್ಕೆ ತದ್ವಿರುದ್ಧವಾಗಿ ಯೋಚಿಸುವಂತವರು. ಅದೇ ಕಾರಣಕ್ಕೋ ಏನೂ ಈಗ ನೆಟ್ಟಿಗರು ಕೂಡ ವರ್ಮಾಗೆ ಸಿಕ್ಕಾಪಟ್ಟೆ ವಿಚಿತ್ರವಾಗಿ ವಿಶ್​ ಮಾಡುತ್ತಿದ್ದಾರೆ.

ಹುಟ್ಟುಹಬ್ಬಕ್ಕೆ ಹ್ಯಾಪಿ ಬರ್ತ್​ಡೇ ಎಂದು ವಿಶ್​ ಮಾಡುವುದು ಸಹಜ. ಆದರೆ ರಾಮ್​ ಗೋಪಾಲ್​ ವರ್ಮಾಗೆ ಎಲ್ಲರೂ ಅನ್​ಹ್ಯಾಪಿ ಬರ್ತ್​ಡೇ ಎಂದು ವಿಶ್​ ಮಾಡುತ್ತಿದ್ದಾರೆ! ಹೌದು, ಆರ್​ಜಿವಿ ರೀತಿಯೇ ಅವರ ಅಭಿಮಾನಿಗಳು ಕೂಡ ವಿಲಕ್ಷಣವಾಗಿಯೇ ವರ್ತಿಸುತ್ತಿದ್ದಾರೆ, ಸೋಶಿಯಲ್​ ಮೀಡಿಯಾದಲ್ಲಿ ಹೀಗೆ ಹಾರೈಸುತ್ತಿದ್ದಾರೆ. #unhappybirthdayrgv ಎಂಬ ಹ್ಯಾಶ್​ಟ್ಯಾಗ್​ ಮೂಲಕ ಸದ್ದು ಮಾಡುತ್ತಿದ್ದಾರೆ. ಇದು ಟ್ವಿಟರ್​ನಲ್ಲಿ ವೈರಲ್​ ಆಗುತ್ತಿದೆ.

ಸ್ಟಾರ್​ ನಟರ ಹುಟ್ಟುಹಬ್ಬದ ಸಂದರ್ಭದಲ್ಲಿ ಕಾಮನ್​ ಡಿಪಿ ಬಿಡುಗಡೆ ಮಾಡಲಾಗುತ್ತದೆ. ಹಾಗೆಯೇ ಆರ್​ಜಿವಿ ಬರ್ತ್​ಡೇ ಪ್ರಯುಕ್ತ ಅವರ ಅಭಿಮಾನಿಗಳು ಒಂದು ಪೋಸ್ಟರ್​ ಹಂಚಿಕೊಂಡಿದ್ದು, ಅದರಲ್ಲಿ ‘ಅನ್​ಹ್ಯಾಪಿ ಬರ್ತ್​​ಡೇ ಬಾಸ್​’ ಎಂದು ಬರೆದಿರುವುದು ಕಣ್ಣು ಕುಕ್ಕುತ್ತಿದೆ. ಈ ಟ್ವೀಟ್​ಗಳಿಗೆ ವರ್ಮಾ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.

1989ರಲ್ಲಿ ಅಕ್ಕಿನೇನಿ ನಾಗಾರ್ಜುನ ನಟನೆಯ ‘ಶಿವ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ರಾಮ್​ ಗೋಪಾಲ್​ ವರ್ಮಾ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ಹೀಗೆ ತೆಲುಗು ಚಿತ್ರರಂಗದಿಂದ ಸಿನಿಜರ್ನಿ ಆರಂಭಿಸಿದ ಅವರು ನಂತರ ಬಾಲಿವುಡ್​ಗೂ ಕಾಲಿಟ್ಟು ಗಮನ ಸೆಳೆದರು. ಅಮಿತಾಭ್​ ಬಚ್ಚನ್​, ಅಜಯ್​ ದೇವಗನ್​ ಮುಂತಾದ ನಟರ ಜೊತೆ ಸಿನಿಮಾ ಮಾಡಿ ಸೈ ಎನಿಸಿಕೊಂಡರು. ಕನ್ನಡದಲ್ಲಿ ಶಿವರಾಜ್​ಕುಮಾರ್​ ನಟನೆಯ ‘ಕಿಲ್ಲಿಂಗ್​ ವೀರಪ್ಪನ್​’ ಚಿತ್ರಕ್ಕೆ ನಿರ್ದೇಶನ ಮಾಡಿದರು. ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿಯ ಸಿನಿಮಾಗಳನ್ನು ಮಾಡಿ, ಆನ್​ಲೈನ್​ನಲ್ಲಿ ರಿಲೀಸ್​ ಮಾಡುವ ಮೂಲಕ ತಮ್ಮದೇ ಹಾದಿಯಲ್ಲಿ ಆರ್​ಜಿವಿ ಸಾಗುತ್ತಿದ್ದಾರೆ.

ಇದನ್ನೂ ಓದಿ: Ram Gopal Varma Top 5 Movies: ಸಿನಿಮಾ ರಂಗದ ದೈತ್ಯ ಪ್ರತಿಭೆ ರಾಮ್ ಗೋಪಾಲ್ ವರ್ಮಾರ 5 ವಿಲಕ್ಷಣ ಸಿನಿಮಾಗಳಿವು

(Ram Gopal Varma Birthday: Fans wish Unhappy Birthday to controversial director RGV)

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್