AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apsara Rani: ಬಿಕಿನಿ ತೊಟ್ಟ ಅಪ್ಸರಾ ರಾಣಿ ಬಳಿ ಟವೆಲ್ ಬ್ರ್ಯಾಂಡ್​​​ ಕೇಳಿದ ರಾಮ್​​ ಗೋಪಾಲ್​ ವರ್ಮಾ!

ಅಪ್ಸಾರಾ ರಾಣಿ ಸ್ವಿಮ್ಮಿಂಗ್​ ಫೂಲ್​ ಪಕ್ಕದಲ್ಲಿ ಬಿಕಿನಿ ತೊಟ್ಟು ಕೈನಲ್ಲಿ ಟವೆಲ್​ ಹಿಡಿದು ನಿಂತಿದ್ದರು. ಈ ಫೋಟೋವನ್ನು ರಾಮ್​ ಗೋಪಾಲ್​ ವರ್ಮಾ ಪೋಸ್ಟ್​ ಮಾಡಿದ್ದಾರೆ.

Apsara Rani: ಬಿಕಿನಿ ತೊಟ್ಟ ಅಪ್ಸರಾ ರಾಣಿ ಬಳಿ ಟವೆಲ್ ಬ್ರ್ಯಾಂಡ್​​​ ಕೇಳಿದ ರಾಮ್​​ ಗೋಪಾಲ್​ ವರ್ಮಾ!
ರಾಜೇಶ್ ದುಗ್ಗುಮನೆ
|

Updated on: Feb 26, 2021 | 1:46 PM

Share

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆ್ಯಕ್ಟಿವ್​ ಆಗಿದ್ದಾರೆ. ಒಂದಿಲ್ಲೊಂದು ಪೋಸ್ಟ್​ ಹಾಕುತ್ತಾ ಅಭಿಮಾನಿಗಳನ್ನು ಖುಷಿಪಡಿಸುತ್ತಿರುತ್ತಾರೆ. ಇನ್ನು ಅನೇಕ ಹೀರೋಯಿನ್​ಗಳ ಫೋಟೋಗಳನ್ನು ಹಾಕಿ, ಅವರ ಬಗ್ಗೆ ಏನನ್ನಿಸುತ್ತದೆ ಎನ್ನುವ ಬಗ್ಗೆ ಬರೆದುಕೊಂಡ ಉದಾಹರಣೆ ಕೂಡ ಇದೆ. ಈಗ ಟಾಲಿವುಡ್​ನ ಹಾಟೆಸ್ಟ್​​ ನಟಿ ಎನ್ನುವ ಖ್ಯಾತಿಗೆ ಪಾತ್ರರಾಗಿರುವ ಅಪ್ಸರಾ ರಾಣಿ ಬಳಿ ರಾಮ್​​ ಗೋಪಾಲ್​ ವರ್ಮಾ ಟವೆಲ್​ ಕೇಳಿದ್ದಾರೆ! ಅಪ್ಸಾರಾ ರಾಣಿ ಸ್ವಿಮ್ಮಿಂಗ್​ ಫೂಲ್​ ಪಕ್ಕದಲ್ಲಿ ಬಿಕಿನಿ ತೊಟ್ಟು ಕೈನಲ್ಲಿ ಟವೆಲ್​ ಹಿಡಿದು ನಿಂತಿದ್ದರು. ಈ ಫೋಟೋವನ್ನು ರಾಮ್​ ಗೋಪಾಲ್​ ವರ್ಮಾ ಪೋಸ್ಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ನನಗೆ ಟವೆಲ್​ ಇಷ್ಟವಾಯಿತು. ಅದನ್ನು ಎಲ್ಲಿ ಖರೀದಿಸಿದ್ದೀರಿ? ಬ್ರ್ಯಾಂಡ್​ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ.

ರಾಮ್​ ಗೋಪಾಲ್​ ಪ್ರಶ್ನೆಗೆ ಉತ್ತರಿಸಿರುವ ಅಪ್ಸರಾ, ನೀವು ಟವೆಲ್​ಅನ್ನು ಗಮನಿಸಿದ್ದಕ್ಕೆ ಸಂತೋಷವಾಯಿತು ಎಂದಿದ್ದಾರೆ. ಇದಕ್ಕೆ ರಾಮ್​ ಗೋಪಾಲ್​ ವರ್ಮಾ ಮರು ಉತ್ತರ ನೀಡಿದ್ದಾರೆ. ನಾನು ಟವೆಲ್ ಅನ್ನು ಮಾತ್ರ ನೋಡುತ್ತಿದ್ದೇನೆ ಎಂದು ದೇವರ ಮೇಲೆ ಪ್ರತಿಜ್ಞೆ ಮಾಡುತ್ತೇನೆ.. ಚಿತ್ರದಲ್ಲಿ ನೋಡೋಕೆ ಬೇರೆ ಏನಾದರೂ ಇದೆಯೇ? ಎಂದು ನಕ್ಕಿದ್ದಾರೆ.

ಇಷ್ಟಕ್ಕೇ ಮಾತು ನಿಂತಿಲ್ಲ. ನಾನು ನಿಮ್ಮನ್ನು ನಂಬುತ್ತೇನೆ. ಆದರೆ, ನನಗೆ ಈಗ ಅನುಮಾನ ಪ್ರಾರಂಭವಾಗಿದೆ ಎಂದು ಅಪ್ಸರಾ ಹೇಳಿದ್ದಾರೆ. ನಂತರ ಅಪ್ಸರಾ ಸ್ವಿಮ್ಮಿಂಗ್​ ಫೂಲ್​ನಲ್ಲಿರು ವಿಡಿಯೋವನ್ನು ರಾಮ್​ ಗೋಪಾಲ್​ ವರ್ಮಾ ಹಂಚಿಕೊಂಡಿದ್ದಾರೆ.

 ಇದನ್ನೂ ಓದಿ: ನಟಿಯರ ಬಿಕಿನಿ ಫೋಟೋ.. ಜನರನ್ನು ಮಾಲ್ಡೀವ್ಸ್​ಗೆ ಕರೆಸಿಕೊಳ್ಳುವ ಹೊಸ ಪ್ಲಾನ್?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ