ನಟಿಯ ಜತೆ ಮನ ಬಂದಂತೆ ಡ್ಯಾನ್ಸ್​ ಮಾಡಿ ಕಾಲಿಗೆ ನಮಸ್ಕರಿಸಿದ ಆರ್​ಜಿವಿ; ವಿಡಿಯೋ ವೈರಲ್

ಈ ವಿಡಿಯೋದಲ್ಲಿ ರಾಮ್ ಗೋಪಾಲ್ ವರ್ಮಾ ಅವರು ಇನಾಯಾ ಸುಲ್ತಾನ ಜತೆ ಡಾನ್ಸ್​ ಮಾಡಿದ್ದಾರೆ. ವಿಡಿಯೋದಲ್ಲಿರುವುದು ಇವರಿಬ್ಬರೇ ಅನ್ನೋದು ಸ್ಪಷ್ಟವಾಗಿದೆ.

ನಟಿಯ ಜತೆ ಮನ ಬಂದಂತೆ ಡ್ಯಾನ್ಸ್​ ಮಾಡಿ ಕಾಲಿಗೆ ನಮಸ್ಕರಿಸಿದ ಆರ್​ಜಿವಿ; ವಿಡಿಯೋ ವೈರಲ್
ವೈರಲ್ ಆಗಿದ್ದ ಆರ್​ಜಿವಿ ಹಾಗೂ ಇನಯಾ ನೃತ್ಯದ ವಿಡಿಯೊ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 23, 2021 | 1:12 PM

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾ ಹಾಗೂ ಖಾಸಗಿ ಜೀವನದ ವಿಚಾರದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಹಂಚಿಕೊಂಡ ವಿಡಿಯೋ. ಅವರು ವಿಡಿಯೋದಲ್ಲಿ ಡಾನ್ಸ್​ ಮಾಡಿದ್ದಾರೆ, ನಟಿಯ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ನಂತರ, ವಿಡಿಯೋದಲ್ಲಿರುವ ವ್ಯಕ್ತಿ ತಾವಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ರಾಮ್ ಗೋಪಾಲ್ ವರ್ಮಾ ಅವರು ಇನಾಯಾ ಸುಲ್ತಾನ ಜತೆ ಡಾನ್ಸ್​ ಮಾಡಿದ್ದಾರೆ. ವಿಡಿಯೋದಲ್ಲಿರುವುದು ಇವರಿಬ್ಬರೇ ಅನ್ನೋದು ಸ್ಪಷ್ಟವಾಗಿದೆ. ಆದರೆ, ವಿಡಿಯೋದಲ್ಲಿರುವ ವ್ಯಕ್ತಿ ತಾವಲ್ಲ ಎಂದಿದ್ದಾರೆ ಆರ್​ಜಿವಿ. ‘ಈ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ. ಕೆಂಪು ಬಟ್ಟೆ ಧರಿಸಿರುವುದು ಇನಾಯಾ ಅಲ್ಲ. ಬೇಕಿದ್ದರೆ ನಾನು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಮೇಲೆ ಪ್ರಮಾಣ ಮಾಡುತ್ತೇನೆ’ ಎಂದಿದ್ದಾರೆ ಅವರು.

ವಿಡಿಯೋದಲ್ಲಿ ಕಾಣುವ ವ್ಯಕ್ತಿ ರಾಮ್ ಗೋಪಾಲ್ ಅವರೇ ಅನ್ನೋದು ಅಭಿಮಾನಿಗಳಿಗೆ ಗೊತ್ತಾಗಿದೆ. ಈ ವಿಡಿಯೋ ವಿಚಾರವಾಗಿಟ್ಟುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀತಿಯಲ್ಲಿ ಟೀಕಿಸಲಾಗುತ್ತಿದೆ. ಇನ್ನು, ಆರ್​ಜಿವಿ ನಟಿಯ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

ಈ ರೀತಿಯ ಚಿತ್ರ ವಿಚಿತ್ರ ಟ್ವೀಟ್​ ಮಾಡುವುದರಲ್ಲಿ ಆರ್​ಜಿವಿ ಎತ್ತಿದ ಕೈ. ಫ್ರೆಂಡ್​ಶಿಪ್​ ಡೆ ಬಗ್ಗೆ ಸರಣಿ ಟ್ವೀಟ್​ ಮಾಡಿದ್ದ ಅವರು, ‘ನೀವು ನಿಮ್ಮ ಗೆಳೆಯರಿಗೆ ಸಹಾಯ ಮಾಡಿದಿರಿ ಎಂದಿಟ್ಟುಕೊಳ್ಳು. ಮುಂದಿನ ಬಾರಿ ಆತ ನಿಮ್ಮ ಬಳಿಯೇ ಬರುತ್ತಾನೆ’ ಎಂದು ಬರೆದುಕೊಂಡು #HappyEnemyshipDay ಎನ್ನುವ ಹ್ಯಾಷ್​ಟ್ಯಾಗ್​ ಹಾಕಿದ್ದರು.

ಇದನ್ನೂ ಓದಿ: ಇದು ಗೆಳೆಯರ ದಿನವಲ್ಲ ವೈರಿಗಳ ದಿನ ಎಂದ ರಾಮ್​ ಗೋಪಾಲ್​ ವರ್ಮಾ

ಆಮೀರ್ ಖಾನ್​​ಗಿಂತ ವೇಯ್ಟರ್​ ಉತ್ತಮವಾಗಿ ಆ್ಯಕ್ಟ್​ ಮಾಡಿದ್ದ; ಆರ್​ಜಿವಿ ಹೀಗೆ ಹೇಳಿದ್ದರ ಹಿಂದಿತ್ತು ಬೇರೆ ಉದ್ದೇಶ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ