Updated on:Aug 23, 2021 | 3:59 PM
ಶಿವರಾಜ್ಕುಮಾರ್ ನಟನೆಯ ವಜ್ರಕಾಯ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದವರು ನಟಿ ನಭಾ ನಟೇಶ್. 2015ರಲ್ಲಿ ತೆರೆಗೆ ಬಂದ ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.
ನಂತರ ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿದ ನಭಾ, ಟಾಲಿವುಡ್ಗೆ ಜಿಗಿದರು. ಸಾಲುಸಾಲು ತೆಲುಗು ಆಫರ್ಗಳು ಅವರಿಗೆ ಬಂದವು.
2019ರಲ್ಲಿ ತೆರೆಗೆ ಬಂದ ‘ಇಸ್ಮಾರ್ಟ್ ಶಂಕರ್’ ನಭಾಗೆ ದೊಡ್ಡ ಹಿಟ್ ತಂದುಕೊಟ್ಟಿತು.
ಸದ್ಯ, ತೆಲುಗಿನ ‘ಮೆಸ್ಟ್ರೋ’ ಸಿನಿಮಾದಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಅವರು ಸೀರೆ ಉಟ್ಟು ಫೋಟೋ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ.
ನಭಾ ನಟೇಶ್
Published On - 3:50 pm, Mon, 23 August 21