ಇದು ಗೆಳೆಯರ ದಿನವಲ್ಲ ವೈರಿಗಳ ದಿನ ಎಂದ ರಾಮ್​ ಗೋಪಾಲ್​ ವರ್ಮಾ

ಇದು ಗೆಳೆಯರ ದಿನವಲ್ಲ ವೈರಿಗಳ ದಿನ ಎಂದ ರಾಮ್​ ಗೋಪಾಲ್​ ವರ್ಮಾ
ರಾಮ್​ ಗೋಪಾಲ್​ ವರ್ಮಾ

ಪ್ರತಿ ವರ್ಷ ಆಗಸ್ಟ್​ ತಿಂಗಳ ಮೊದಲ ಭಾನುವಾರವನ್ನು ಅಂತಾರಾಷ್ಟ್ರೀಯ ಫ್ರೆಂಡ್​ಶಿಪ್​ ಡೇ ಎಂದು ಆಚರಣೆ ಮಾಡಲಾಗುತ್ತದೆ. ಈ ಬಾರಿ ಫ್ರೆಂಡ್​ಶಿಪ್​ ಡೇ ಆಗಸ್ಟ್​ 1ಕ್ಕೆ ಬಂದಿದೆ.

TV9kannada Web Team

| Edited By: Rajesh Duggumane

Aug 01, 2021 | 6:05 PM

ತೆಲುಗು ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಕೆಲ ವಿಚಾರದ ಬಗ್ಗೆ ನೀಡುವ ಹೇಳಿಕೆಗಳು ಚಿತ್ರ ವಿಚಿತ್ರವಾಗಿರುತ್ತದೆ ಎಂಬುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಈ ಬಾರಿ ಆರ್​ಜಿವಿ ಕಣ್ಣು ಫ್ರೆಂಡ್​ಶಿಪ್​ ಡೇ ಮೇಲೆ ಬಿದ್ದಿದೆ. ಈ ಬಗ್ಗೆ ಅವರು ವಿಚಿತ್ರ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಪ್ರತಿ ವರ್ಷ ಆಗಸ್ಟ್​ ತಿಂಗಳ ಮೊದಲ ಭಾನುವಾರವನ್ನು ಅಂತಾರಾಷ್ಟ್ರೀಯ ಫ್ರೆಂಡ್​ಶಿಪ್​ ಡೇ ಎಂದು ಆಚರಣೆ ಮಾಡಲಾಗುತ್ತದೆ. ಈ ಬಾರಿ ಫ್ರೆಂಡ್​ಶಿಪ್​ ಡೇ ಆಗಸ್ಟ್​ 1ಕ್ಕೆ ಬಂದಿದೆ. ಈ ವಿಶೇಷ ದಿನದಂದು ಎಲ್ಲರೂ ತಮ್ಮ ಜೀವನದಲ್ಲಿ ಎದುರಾದ ಆಪತ್​ಬಾಂಧವರನ್ನು ನೆನೆದಿದ್ದಾರೆ. ಟ್ವೀಟ್​ಗಳನ್ನು ಮಾಡುವ ಮೂಲಕ ಶುಭಕೋರಿದ್ದಾರೆ. ಗೆಳೆಯರ ದಿನದ ಬಗ್ಗೆ ಸಾಕಷ್ಟು ಮೀಮ್​ಗಳು ಕೂಡ ಹರಿದಾಡುತ್ತಿದೆ. ಈ ಮಧ್ಯೆ ರಾಮ್​ ಗೋಪಾಲ್​ ವರ್ಮಾ ಅವರ ಟ್ವೀಟ್​ ವೈರಲ್​ ಆಗಿದೆ. ಫ್ರೆಂಡ್​ಶಿಪ್​ ಡೇಅನ್ನು ಅವರು ವೈರಿಗಳ ದಿನ ಎಂದು ಕರೆದಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಅವರು, ‘ನೀವು ನಿಮ್ಮ ಗೆಳೆಯರಿಗೆ ಸಹಾಯ ಮಾಡಿದಿರಿ ಎಂದಿಟ್ಟುಕೊಳ್ಳು. ಮುಂದಿನ ಬಾರಿ ಆತ ನಿಮ್ಮ ಬಳಿಯೇ ಬರುತ್ತಾನೆ’ ಎಂದು ಬರೆದುಕೊಂಡು #HappyEnemyshipDay ಎನ್ನುವ ಹ್ಯಾಷ್​ಟ್ಯಾಗ್​ ಹಾಕಿದ್ದಾರೆ.

‘ವೈರಿಗಳಲ್ಲಿರುವ ಒಳ್ಳೆಯ ಗುಣ ಎಂದರೆ ಅವರು ನಿಮ್ಮನ್ನು ಅರ್ಧದಲ್ಲಿಯೇ ಬಿಟ್ಟು ಹೋಗುವುದಿಲ್ಲ. #HappyEnemyshipDay’ ಎಂದಿದ್ದಾರೆ ಆರ್​ಜಿವಿ. ‘ಶತ್ರುಗಳು ನಿಮ್ಮ ಬಲವನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಮತ್ತು ಸ್ನೇಹಿತರು ನಿಮ್ಮ ವಿಶ್ವಾಸವನ್ನು ಕಳೆದು ಹಾಕುವಂತೆ ಮಾಡುತ್ತಾರೆ’ ಎಂದಿದ್ದಾರೆ. ಈ ಟ್ವೀಟ್​ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿವೆ.

ಇದನ್ನೂ ಓದಿ: ಇದು ನನ್ನ ಬರ್ತ್​ಡೇ ಅಲ್ಲ; ಡೆತ್​ ಡೇ! ಹುಟ್ಟುಹಬ್ಬದ ದಿನವೇ ರಾಮ್​ ಗೋಪಾಲ್​ ವರ್ಮಾ ಶಾಕಿಂಗ್​ ಮಾತು

Follow us on

Related Stories

Most Read Stories

Click on your DTH Provider to Add TV9 Kannada