ಸೆಪ್ಟೆಂಬರ್​ನಿಂದ ಬಿಗ್​ ಬಾಸ್ ಹೊಸ ಸೀಸನ್?​; ಪ್ರೋಮೋ ರಿಲೀಸ್​ ಮಾಡಿದ ವಾಹಿನಿ

ಸೆಪ್ಟೆಂಬರ್​ನಿಂದ ಬಿಗ್​ ಬಾಸ್ ಹೊಸ ಸೀಸನ್?​; ಪ್ರೋಮೋ ರಿಲೀಸ್​ ಮಾಡಿದ ವಾಹಿನಿ
ಬಿಗ್​ ಬಾಸ್​

Bigg Boss Telugu: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್​ ತಿಂಗಳಲ್ಲೇ ಬಿಗ್​ ಬಾಸ್​ ಆರಂಭಗೊಳ್ಳಬೇಕಿತ್ತು. ಆದರೆ,  ಕೊವಿಡ್​ ಎರಡನೇ ಅಲೆ ಇದಕ್ಕೆ ಆಸ್ಪದ ನೀಡಿಲ್ಲ.

TV9kannada Web Team

| Edited By: Apurva Kumar Balegere

Aug 02, 2021 | 9:57 AM

Bigg Boss Telugu: ತೆಲುಗು ಬಿಗ್​ ಬಾಸ್​ ನಾಲ್ಕು ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ​ಈಗ ಐದನೇ ಸೀಸನ್​ಗೆ ಸಿದ್ಧತೆಗಳು ನಡೆಯುತ್ತಿವೆ. ಆರಂಭದಲ್ಲಿ ಜೂನ್​ ತಿಂಗಳಲ್ಲೇ ಬಿಗ್​ ಬಾಸ್​ ಶುರು ಮಾಡುವ ಆಲೋಚನೆ ವಾಹಿನಿಯದ್ದಾಗಿತ್ತು. ಆದರೆ, ಕೊವಿಡ್​ ಎರಡನೇ ಅಲೆಯಿಂದ ಇದು ತಡವಾಗಿತ್ತು. ಈಗ ಈ ಕುರಿತು ಪ್ರೋಮೋ ರಿಲೀಸ್​ ಮಾಡಲಾಗಿದೆ. ಸೆಪ್ಟೆಂಬರ್​ನಿಂದ ಹೊಸ ಸೀಸನ್​ ಆರಂಭಗೊಳ್ಳುತ್ತಿದೆ ಎನ್ನಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್​ ತಿಂಗಳಲ್ಲೇ ಬಿಗ್​ ಬಾಸ್​ ಆರಂಭಗೊಳ್ಳಬೇಕಿತ್ತು. ಆದರೆ,  ಕೊವಿಡ್​ ಎರಡನೇ ಅಲೆ ಇದಕ್ಕೆ ಆಸ್ಪದ ನೀಡಿಲ್ಲ. ಹೀಗಾಗಿ ಸೆಪ್ಟೆಂಬರ್​ ವೇಳೆಗೆ ಹೊಸ ಶೋ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ, ರಿಲೀಸ್​ ಆದ ಪ್ರೋಮೋದಲ್ಲಿ ‘ನಾವು ಅತಿ ಶೀಘ್ರದಲ್ಲಿ ಬರುತ್ತೇವೆ’ ಎಂದು ಮಾತ್ರ ಇದೆ. ಸ್ಟಾರ್​ ಮಾ ವಾಹಿನಿಯಲ್ಲಿ ತೆಲುಗು ಬಿಗ್​ ಬಾಸ್​ ಪ್ರಸಾರವಾಗಲಿದೆ.

ಬಿಗ್​ ಬಾಸ್ ಆರಂಭಕ್ಕೂ ಮುನ್ನ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್ ಆಗೋದು ಸಾಮಾನ್ಯ. ಈ ಬಾರಿಯೂ ಅದೇ ರೀತಿ ಆಗಿದೆ. ತೆಲುಗಿನಲ್ಲಿ ‘ರಾಬರ್ಟ್’​ ಸಿನಿಮಾದ ಹಾಡನ್ನು ಹಾಡಿದ ಗಾಯಕಿ ಮಂಗ್ಲಿ, ಆ್ಯಂಕರ್​ ರವಿ, ಶರಣ್​ ನಟನೆಯ ‘ಅಧ್ಯಕ್ಷ’ ಸಿನಿಮಾದ ನಾಯಕಿ ಹೆಬ್ಬಾ ಪಟೇಲ್​ ಸೇರಿ ಅನೇಕರು ಬಿಗ್​ ಬಾಸ್​ ಮನೆ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ.

ಅಕ್ಕಿನೇನಿ ನಾಗಾರ್ಜುನ ಅವರು ಸೀಸನ್​ 5ಅನ್ನು ನಿರೂಪಣೆ ಮಾಡುವ ಸಾಧ್ಯತೆ ಇದೆ. ಮೊದಲ ಸೀಸನ್​​ಗೆ ಜ್ಯೂ. ಎನ್​ಟಿಆರ್​ ನಿರೂಪಣೆ ಇತ್ತು. ನಂತರ ನಟ ನಾನಿ ಎರಡನೇ ಸೀಸನ್​ ನಿರೂಪಣೆ ಮಾಡಿದ್ದರು. ಈ ಬಾರಿ ನಾಗಾರ್ಜುನ​ ಅವರು ನಿರೂಪಣೆಯ ಜವಾಬ್ದಾರಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ.

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫಿನಾಲೆ ಹಂತ ತಲುಪಿದೆ. ಸದ್ಯ, ಮನೆಯಲ್ಲಿ ಏಳು ಸ್ಪರ್ಧಿಗಳಿದ್ದಾರೆ. ಫಿನಾಲೆಗೆ ಐದು ಸ್ಪರ್ಧಿಗಳು ಮಾತ್ರ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಫಿನಾಲೆಯಲ್ಲಿ ಗೆಲ್ಲೋದು ಯಾರು ಎಂಬುದು ಆಗಸ್ಟ್​ 8ರಂದು ತಿಳಿಯಲಿದೆ.

ಇದನ್ನೂ ಓದಿ:

ದೊಡ್ಮನೆಯಲ್ಲಿ ಅರವಿಂದ್ ಮಧ್ಯ ಬೆರಳು ತೋರಿಸಿದ ವಿಡಿಯೋ ವೈರಲ್​; ಬಿಗ್​ ಬಾಸ್ ತಂಡದಿಂದ ಸ್ಪಷ್ಟನೆ

Follow us on

Related Stories

Most Read Stories

Click on your DTH Provider to Add TV9 Kannada